ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಜ.10 ರಂದು ಶ್ರೀಗವಿಮಠದ ಆವರಣದಲ್ಲಿ ಮಹಿಳಾ ಮತ್ತು ಪುರುಷರ ತಂಡಗಳಿಂದ, ಕಬಡ್ಡಿ ಪಂದ್ಯಾವಳಿಗಳು ಜರುಗಿದವು.
ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯ ಸಿಪಿಐ ಮಹಾಂತೇಶ್ ಸಜ್ಜನ್ ಅವರು ಪಂದ್ಯಾವಳಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಬ್ಬಡಿ ಇದು ಒಂದು ದೇಶಿ ಕ್ರೀಡೆಯಾಗಿದ್ದು, ಗಟ್ಟಿ ಆಟವಾಗಿದೆ. ದೈಹಿಕ ಮತ್ತುಮಾನಸಿಕ ಸಧೃಡತೆಗೆ ಮುಖ್ಯವಾದ ಕ್ರೀಡೆಯಾಗಿದೆ. ಯುವ ಜನಾಂಗ ಹೆಚ್ಚೆಚ್ಚು ಈ ಆಟವನ್ನು ಆಡಬೇಕು,” ಎಂದು ಹೇಳಿದರು.
ಪಂದ್ಯಾವಳಿಗೆ ಮಹಿಳೆಯರ ವಿಭಾಗದಿಂದ 8, ಪುರುಷರ ವಿಭಾಗದಿಂದ 16 ತಂಡಗಳು ನೊಂದಣಿಯಾಗಿದ್ದವು. ಮಹಿಳೆಯರ ವಿಭಾಗದಲ್ಲಿ ಗದಗ ಜಲ್ಲಾ ತಂಡವು ಪ್ರಥಮ 10,000 ರೂಪಾಯಿ ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರಮೇಶ ಅಕಾಡೆಮಿ ಚಳಗೇರಿ 7500 ರೂಪಾಯಿ ಬಹುಮಾನ ಹಾಗೂ ಟ್ರೋಫಿ, ತೃತೀಯ ಬಹುಮಾನ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಕೊಪ್ಪಳ 5000 ರೂಪಾಯಿ ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡವು.
ಪುರುಷರ ವಿಭಾಗದಲ್ಲಿ ಚಳಗೇರಿ ತಂಡವು ಪ್ರಥಮ 10,000 ರೂಪಾಯಿ ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಬಹುಉಮಾನ ಜೈಭೀಮ ಕೊಪ್ಪಳ ತಂಡ 7500 ರೂಪಾಯಿ ಬಹುಮಾನ ಹಾಗೂ ಟ್ರೋಫಿ, ತೃತೀಯ ಬಹುಮಾನ ಹಿರೇಮ್ಯಾಗೇರಿ ತಂಡ 5000 ರೂಪಾಯಿ ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡವು.
ಪ್ರಶಸ್ತಿ ಪಡೆದ ತಂಡಗಳಿಗೆ ಕೊಪ್ಪಳ ಸಂಚಾರಿ ಪೊಲಿಸ್ ಇನ್ಸಪೆಕ್ಟರ್ ಶಾರದಮ್ಮ ಬಹುಮಾನ ವಿತರಿಸಿದರು. ಆಯೋಜನೆ ಜವಾಬ್ದಾರಿಯನ್ನು ದೈಹಿಕ ನಿರ್ದೇಶಕರಾದ ವಿನೋದ ಸಿ.ಎಂ ಮತ್ತು ಈಶಪ್ಪ ದೊಡ್ಡಮನಿ ಹಾಗೂ ಇತರರು ವಹಿಸಿಕೊಂಡಿದ್ದರು.
ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್.ಐ, ಮುದ್ದುರಂಗ ಹಾಗೂ ಇತರರು ಉಪಸ್ಥಿತರಿದ್ದರು.