ಸುದ್ದಿಮೂಲ ವಾರ್ತೆ
ಆನೇಕಲ್, ಮೇ12: ತನ್ನ ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಆನೇಕಲ್ನ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ನಡೆದಿದೆ.
ಬಿಟಿಎಂ ಬಡಾವಣೆ ನಿವಾಸಿ ಹರೀಶ್(35) ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಆತನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಪರಾರಿಯಾಗಿದ್ದಳು. ಅಂದಿನಿಂದ ತನ್ನ ಇಬ್ಬರು ಮಕ್ಕಳನ್ನು ನೋಡುಕೊಳ್ಳತ್ತಿದ್ದ ಹರೀಶ್ ಪತ್ನಿಯ ಶೋಕಿ ಜೀವನಕ್ಕೆ ಬೇಸತ್ತು ತನ್ನಿಬ್ಬರ ಮಕ್ಕಳಾದ ಪ್ರಜ್ವಲ್(6) ರಿಷಬ್(4) ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೇ 10ರಂದು ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೇ ತನ್ನ ಗೆಳಯನಿಗೊಬ್ಬನಿಗೆ ವಾಟ್ಸ್ ಆಪ್ನಲ್ಲಿ ಕಾಲ್ ಮಾಡಿ ತನ್ನ ಎಲ್ಲ ಹಣವನ್ನು ಮತ್ತು ಎಲ್ಐಸಿ ಬಾಂಡ್ಗಳನ್ನು ಪತ್ನಿಗೆ ಒಪ್ಪಿಸುವಂತೆ ತಿಳಿಸಿದ್ದಾನೆ.
ತನ್ನ ಅಕ್ಕನ ಮಗಳನ್ನೇ ಪ್ರೀತಿಸಿ ಮದುವೆ ಆಗಿದ್ದರು ಹರೀಶ್. ಆದರೆ, ಆ ಪತ್ನಿ ಹೈ ಫೈ ಜೀವನಕ್ಕೆ ಬಿದ್ದು ಬೇರೊಬ್ಬ ಪುರಷನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಆದರೂ ಕೂಡ ಹಣಕ್ಕಾಗಿ ತನ್ನ ಪತಿಗೆ ಬೇಡಿಕೆ ಇಟ್ಟು ಮನೆ ಬಳಿ ಗಲಾಟೆ ಮಾಡುತ್ತಿದ್ದಳು. ಇದರಿಂದ ಮನನೊಂದ ಹರೀಶ್ ತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಪ್ರಕರಣ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.