ಸುದ್ದಿಮೂಲ ವಾರ್ತೆ
ಹೊಸಕೋಟೆ, ಮೇ 18: ತಾಲೂಕಿನ ದೊಡ್ಡದುನ್ನಸಂದ್ರ ಬಳಿ ಇರುವ ಶೃಂಗ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ 9 ವರ್ಷದೊಳಗಿವ ರಾಜ್ಯ ಮಟ್ಟದ ಬಾಲಕ ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ಅಭಿನವ್ ಆನಂದ್, ಲೆಯಹ್ ಜೋಸೆಫ್ ಚದುರಂಗ ಪ್ರಶಸ್ತಿಯನ್ನು
ಮುಡಿಗೇರಿಸಿಕೊಂಡಿದ್ದಾರೆ.
ಶೃಂಗ ಶಾಲೆ ಪ್ರಾಂಶುಪಾಲೆ ಅನುರೆಡ್ಡಿ ಮಾತನಾಡಿ ನವೆಂಬರ್ 15 ರಿಂದ 23ರವರೆಗೆ ಝಾರ್ಖಂಡ್ ನಲ್ಲಿ
ನಡೆಯಲಿರುವ ರಾಷ್ಟ್ರಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸ್ಪರ್ದೆಯನ್ನು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಚದುರಂಗ ಸಂಸ್ಥೆ ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕಿಯರ ವಿಭಾಗದ ಲೆಯಹ್ ಜೋಸೆಫ್, ದ್ವಿತೀಯ ಸ್ಥಾನ
ಪಡೆದ ರಾಜೇಶ್ವರಿ ಅಯ್ಯಪ್ಪನ್ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಭಿನವ್ ಆನಂದ್, ದ್ವಿತೀಯ
ಸ್ಥಾನ ಪಡೆದ ಸಮಕ್ಷ್ ಅಶೋಕ್ ಅವರು ರಾಷ್ಟ್ರಮಟ್ಟಕ್ಕೆ ತೆರಳಲಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಚಿದಾನಂದ್ ಮಾತನಾಡಿ,
ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ವಿವಿಧ ಜಿಲ್ಲೆಗಳಿಂದ 160 ಸ್ಪರ್ಧಿಗಳು ಭಾಗವಹಿಸಿದ್ದರು. ಬಾಲಕರ
ವಿಭಾಗದಲ್ಲಿ 14 ಅಂತಾರಾಷ್ಟ್ರೀಯ ಶ್ರೇಯಾಂಕ ಹೊಂದಿರುವ ಆಟಗಾರರು, ಬಾಲಕಿಯರ ವಿಭಾಗದಲ್ಲಿ 2
ಅಂತರಾಷ್ಟ್ರೀಯ ಶೇಯಾಂಕ ಹೊಂದಿರುವ ಆಟಗಾರರು ಭಾಗವಹಿಸಿದ್ದರು. ಬಾಲಕರಿಗೆ 9 ಸುತ್ತುಗಳು, ಬಾಲಕಿಯರಿಗೆ 7 ಸುತ್ತುಗಳನ್ನು ಸ್ಪರ್ಧೆ ಮಾಡಿಸಲಾಯಿತು. ಅಂತಿಮವಾಗಿ ನಾಲ್ಕು ಜನ ಆಟಗಾರರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಅರವಿಂದ್ ಶಾಸ್ಟ್ರಿ, ಶೃಂಗ ಶಾಲೆ ವ್ಯವಸ್ಥಾಪಕ
ಅಬ್ಬಯ್ಯರೆಡ್ಡಿ, ಕಾರ್ಯದರ್ಶಿ ಪ್ರಕಾಶ್, ವ್ಯವಸ್ಥಾಪಕ ನಿರ್ದೆಶಕ ಶ್ರೇಯಸ್ಸ್, ಸುಪ್ರಿತಾ, ಚೆಸ್ ಸ್ಪರ್ಧೆಯ ಆರ್ಬಿಟರ್ ಕೆ.ವಿ.ಶ್ರೀಪಾದ್, ಶೃಂಗ ಶಾಲೆ ಮುಖ್ಯಸ್ಥರಾದ ವಿಕಾಸ್, ಗೌರಂಗ್, ಸುಪ್ರೀತ್ ಇದ್ದರು.