ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.26: ಚಂದ್ರಯಾನ ಯಶಸ್ವಿಯಾಗಿದ್ದು ಇಡೀ ವಿಶ್ವವೇ ಭಾರದ ಕಡೆ ತಿರುಗಿ ನೋಡುವಂತಹ ಕೆಲಸವಾಗಿದೆ. ವಿಜ್ಞಾನಿಗಳ ಶ್ರಮಕ್ಕೆ ಇಡೀ ದೇಶವೇ ತಲೆಎತ್ತಿ ನೋಡುವಂತಾಗಿದೆ ಎಂದು ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ.
ಚಂದ್ರ ಯಶಸ್ವಿಯಾದ ಸಂದರ್ಭ ಹಾಗೂ ಕಾವೇರಿ ನೀರು ತಮಿಳುನಾಡಿಗೆ ಪುನಃ ಹಂಚಿಕೆಯಾದ ಹಿನ್ನಲೆಯಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳಿಗೆ ಆರ್ಥಿಕವಾಗಿ ಮತ್ತಷ್ಟು ಬಲ ಕೊಟ್ಟು ಬೆಂಬಲ ನೀಡಿದರೆ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿ ಹೆಚ್ಚಿನ ಅನ್ವೇಷಣೆ ಮಾಡಿ ಇತರೆ
ದೇಶಗಳಿಗೆ ಸರಿಸಮನಾಗಿ ಪೈಪೋಟಿ ನೀಡಬಲ್ಲ ದೇಶವಾಗಿ ನಮ್ಮ ಭಾರತ ಬರಲಿದೆ. ವಿಕ್ರಂ ಲ್ಯಾಂಡಿಂಗ್ ಕೊನೆಯ ಕ್ಷಣದಲ್ಲಿ ಎಲ್ಲರಿಗೂ ತಲ್ಲಣ ಉಂಟಾಗಿತ್ತು. ಆದರೆ ದೇವರ ಅನುಗ್ರಹದಿಂದ ನರೇಂದ್ರ ಮೋದಿ ಅವರ ಸಹಕಾರದಿಂದ ಇಂದು ಚಂದ್ರನ ಮೇಲೈಮೇಲೆ ನಮ್ಮ ಭಾರತದ ಹೆಜ್ಜೆ ಇಡಲು ಸಾಧ್ಯವಾಯಿತು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಕರ್ನಾಟಕ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಎಷ್ಟು ಹಂಚಿಕೆಯಾಗಬೇಕು ಎನ್ನುವುದು. ಆದರೆ ಈಗಿನ ಸರಕಾರ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಒಂದು ಸಭೆ
ಕರೆದು ಮಳೆ ಮತ್ತು ನೀರಿಗೆ ಅನುಗುಣವಾಗಿ ನೀರು ಬಿಡಬೇಕಾಗಿತ್ತು. ಆದರೆ, ಯಾವದೇ ರೀತಿಯ ಮಾಹಿತಿ ನೀಡಿದೆ ತಮಿಳುನಾಡಿಗೆ ನೀರು ಹಂಚಿಕೆ ಮಾಡಿ ಸಭೆ ಕರೆದಿರುವುದು ಸರಿಯಲ್ಲ ಎಂದು ಹೇಳಿದರು.
ಹಿಂದೆ ಆಡಳಿತ ಮಾಡಿದಂತಹ ಸರಕಾರಗಳ ವಿರುದ್ಧ ಅನೇಕ ರೈತರು ಹೋರಾಟ ನಡೆಸಿದ್ದರು. ಆದರೆ ನ್ಯಾಯಾಲಯದ ಮೊರೆ ಹೋದಾಗ ಸಮಯ ಸಂದರ್ಭಕ್ಕೆ ಅನುಗುಣವಾಗಿ ನೀರು ಹಂಚಿಕೆ ಮಾಡಬೇಕು ಎಂಬ ಆದೇಶ ಹೊರಡಿಸಿದೆ. ಈ ಕುರಿತು ಇನ್ನೂ ಅರ್ಜಿ ಪ್ರಕರಣ ತನಿಖೆಯಲ್ಲೇ ಇದೆ. ಆದರೆ ಈಗ ಅತೀವೃಷ್ಠಿ ಅನಾವೃಷ್ಠಿ ಎರಡೂ ಇರುವ ಕಾರಣ ಕರ್ನಾಟಕಕ್ಕೆ ನೀರಿನ ಅಭಾವವಿದೆ. ಆದರೂ ಎಲ್ಲರೂ ಸರ್ವ ಪಕ್ಷದ ಸಭೆ ನಡೆಸಿದ್ದು ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗಿದೆ ಎಂದು ತಿಳಿಸಿದರು.