ಸ್ತ್ರೀಯರು ಆರ್ಥಿಕವಾಗಿ ಪ್ರಬಲರಾಗಬೇಕು: ಧರ್ಮಣ್ಣ ದೊಡ್ಮನಿ
ಜೇವರ್ಗಿ :ಕಲ್ಬುರ್ಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಜೇವರ್ಗಿ ಪಟ್ಟಣದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಸ್ತ್ರೀ ಸ್ವಸಹಾಯ ಸಂಘಗಳಿಗೆ 2022-23ನೇ ಸಾಲಿನ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮ ಜರುಗಿತು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಧರ್ಮಣ್ಣ ದೊಡ್ಡಮನಿ ಗಂವ್ಹಾರ ರವರು ಭಾಗವಹಿಸಿ ಸಾಂಕೇತಿಕವಾಗಿ ಹನ್ನೆರಡು ಸ್ತ್ರೀ ಸಂಘಗಳಿಗೆ ಚೆಕ್ ವಿತರಿಸಿದರು .
ರಾಜ್ಯ ಸರ್ಕಾರ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಡಿಸಿಸಿ ಬ್ಯಾಂಕಿನಿಂದ ಒಂದು ಲಕ್ಷದವರೆಗೆ ಬಡ್ಡಿ ರೈತ ಸಾಲ ನೀಡುವ ಯೋಜನೆ ಜಾರಿಗೆ ತಂದಿದೆ. ಯೋಜನೆಯ ಸದುಪಯೋಗ ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹೇಳಿದರು. ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಮನೆ ಮತ್ತು ಸಂಸಾರ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಿಂಗಣ್ಣ ದೊಡ್ಡಮನಿ ಗಂವ್ಹಾರ, ಶಂಕರಲಿಂಗ ಕರ್ಕಿಹಳ್ಳಿ, ತಿಪ್ಪಣ್ಣ ಹಡಪದ್ ನರಿಬೋಳ, ಸೇರಿದಂತೆ ಮಹಿಳಾ ಸಂಘದವರು ಹಾಜರಿದ್ದರು .