ಸುದ್ದಿಮೂಲವಾರ್ತೆ
ಕೊಪ್ಪಳ;-ಆ13:, ಮಹಿಳೆಯರ ಆತಂಕ, ತಲ್ಲಣ, ಶೋಷಣೆಗಳ ಅನಾವರಣ ಸಾಹಿತ್ಯವೇ ಮಹಿಳಾ ಸಾಹಿತ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಅಸಮಾನತೆಯಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಡಾ.ಪಾರ್ವತಿ ಕನಕಗಿರಿಯವರು ಹೇಳಿದರು.
ಅವರು ಶಕ್ತಿಶಾರದೆಯ ಮೇಳ ಮತ್ತು ಬೆರಗು ಪ್ರಕಾಶನ ಭಾಗ್ಯನಗರದ ಆಶ್ರಯದಲ್ಲಿ ನಡೆದ ೪೫ನೇ ವಿಚಾರ ಮಂಥನಕೂಟದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮಹಿಳೆ’ ಎಂಬ ವಿಷಯದ ಮೇಲೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಬಸವರಾಜ ಪೂಜಾರರವರು ಮಹಿಳೆಯರಲ್ಲಿ ಅನೇಕ ಸಂವೇದನಗಳಿವೆ, ಆತಂಕ ಮತ್ತು ತಲ್ಲಣಗಳಿವೆ ಅವುಗಳನ್ನು ಸಂವಾಹನ ಮಾಧ್ಯಮಗಳ ಮೂಲಕ ಹೊರಹಾಕಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಘಟಕರಾದ ಡಿ.ಎಂ.ಬಡಿಗೇರಾರವರು ಉಪಸ್ಥಿತರಿದ್ದರು. ಸಿದ್ಧಲಿಂಗಪ್ಪ ಕೊಟ್ನೆಕಲ್ರವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಪವನಕುಮಾರ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.