ಸುದ್ದಿಮೂಲ ವಾರ್ತೆ ಕವಿತಾಳ, ೆ.04:
ಸಾರ್ವಜನಿಕ ಶೌಚಾಲಯ ನಿರ್ಮಿಸಲು ಒತ್ತಾಾಯಿಸಿ ಸಮೀಪದ ಬಾಗಲವಾಡ ಗ್ರಾಾಮದಲ್ಲಿ ಮಹಿಳೆಯರು ರಸ್ತೆೆ ತಡೆದು ಪ್ರತಿಭಟನೆ ನಡೆಸಿದರು.
ಹಿರೇಬಾದರದಿನ್ನಿಿಗೆ ಹೋಗುವ ರಸ್ತೆೆಯಲ್ಲಿ ಇದ್ದ ಶೌಚಾಲಯವನ್ನು ಜಮೀನು ಮಾಲೀಕರು ತೆರವುಗೊಳಿಸಿದ್ದಾರೆ ಹೀಗಾಗಿ ಮಹಿಳೆಯರು ನಿತ್ಯ ನರಕ ಅನುಭವಿಸುವಂತಾಗಿದೆ ಎಂದು ಆಕ್ರೋೋಶ ಹೊರ ಹಾಕಿದರು. ಮಹಿಳೆಯರಿಗೆ ಶೌಚಾಲಯ ಇಲ್ಲದೆ ಸಮಸ್ಯೆೆ ಉಂಟಾಗಿದೆ ಎಂದು ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಇದರಿಂದಾಗಿ ತೀರಾ ಸಮಸ್ಯೆೆ ಉಂಟಾಗಿರುವದರಿಂದ ಪ್ರತಿಭಟನೆ ನಡೆಸಲಾಗುತ್ತಿಿದೆ ಎಂದು ಗ್ರಾಾಮದ ಮಹಿಳೆಯರಾದ ಅಮರಮ್ಮ ದ್ಯಾಾವಣ್ಣವರು, ಈರಮ್ಮ ಗೊರವರು, ಹಂಪಮ್ಮ, ಮಲ್ಲಿಕಾರ್ಜುನಮ್ಮ, ದೇವಮ್ಮ ಮತ್ತು ದ್ಯಾಾವಮ್ಮ ಆಕ್ರೋೋಶ ವ್ಯಕ್ತಪಡಿಸಿದರು.
ಗ್ರಾಾಮ ಪಂಚಾಯತಿ ಅಧ್ಯಕ್ಷರ, ಉಪಾಧ್ಯಕ್ಷರ, ಸದಸ್ಯರ ಆಡಳಿತ ಅವಧಿ ಮುಗಿದ ಕಾರಣ ಪಂಚಾಯತಿಗೆ ಆಗಮಿಸಿದ್ದ ಸಿರವಾರ ತಾಲೂಕು ಪಂಚಾಯತಿ ಇಒ ಶಶಿಧರ ಸ್ವಾಾಮಿ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಪ್ರತಿಭಟನೆ ಸ್ಥಳಕ್ಕೆೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ಷರ್ೀ ಸಾಬ್ ಇದ್ದರು.
ಶೌಚಾಲಯ ನಿರ್ಮಿಸಲು ಮಹಿಳೆಯರ ಆಗ್ರಹ

