ಸುದ್ದಿಮೂಲ ವಾರ್ತೆ ರಾಯಚೂರು , ಡಿ.03:
ಈಗಿನ ದಿನಮಾನಗಳಲ್ಲಿ ವಿದ್ಯುತ್ ಮೇಲಿನ ಅವಲಂಬನೆ ಹೆಚ್ಚಿಿದ್ದು ಅದರ ಒತ್ತಡ ತಗ್ಗಿಿಸಲು ಈ ಭಾಗದಲ್ಲಿ ಸೋಲಾರ ಬಳಕೆಗೆ ಒತ್ತು ನೀಡಲು ಉತ್ತಮ ಅವಕಾಶಗಳಿವೆ ಎಂದು ಕೃಷಿ ವಿಶ್ವ ವಿದ್ಯಾಾಲಯದ ಕುಲಪತಿ ಡಾ.ಹನುಮಂತಪ್ಪ ಹೇಳಿದರು.
ನಗರದ ಕೃಷಿ ವಿವಿ ಸಭಾಂಗಣದಲ್ಲಿ ನಗರದ ಕೃಷಿ ವಿಶ್ವ ವಿದ್ಯಾಾಲಯದ ಸಭಾಂಗಣದಲ್ಲಿ ಕರ್ನಾಟಕ ಗ್ರಾಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನ, ಮಹಾನಗರ ಪಾಲಿಕೆ ಹಾಗೂ ಸೆಲ್ಕೋೋ ೌಂಡೇಶನ್ ಸಂಯುಕ್ತಾಾಶ್ರಯದಲ್ಲಿ ಸ್ವ ಸಹಾಯ ಸಂಘಗಳ ಮಹಿಳೆಯರ, ರೈತರ ಮತ್ತು ವಿಕಲಚೇತನರ ಜೀವನೋಪಾಯಕ್ಕಾಾಗಿನ ವಿಕಾಸನಿ, ವಿಕಾಸ ಪಥದಲ್ಲಿ ಮಹಿಳೆಯರ ಹೆಜ್ಜೆೆ ಕುರಿತ ಎರಡು ದಿನಗಳ ಸೌರ ವಿದ್ಯುತ್ ಉಪಕರಣ ಪ್ರದರ್ಶನ ಮಾಹಿತಿ ಕಾರ್ಯಾಗಾರ ಉದ್ಘಾಾಟಿಸಿ ಮಾತನಾಡಿದರು.
ಭಾಗದಲ್ಲಿ ಸೂರ್ಯನ ಪ್ರಖರತೆಯ ಬಿಸಿಲಿಗೆ ಸೋಲಾರ ಉತ್ಪಾಾದನೆ ನಿರೀಕ್ಷಿಿತ ಮಟ್ಟದಲ್ಲಿ ಆಗಲಿದ್ದು ಪರಿಸರಕ್ಕೆೆ ಹಾನಿಯೂ ಆಗದು ಅಲ್ಲದೆ, ಒಂದು ಬಾರಿ ಹಣ ಖರ್ಚು ಮಾಡುವ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಹೆಚ್ಚಿಿನ ಬೇಡಿಕೆ ಬರಲಿದೆ ಎಂದರು.
ಜಮೀನುಗಳಿಗೆ ಪಂಪ್ಸೆಟ್, ಮನೆಗೆ ವಿದ್ಯುತ್ ಸೇರಿ ಹಲವು ಸೌಲಭ್ಯಗಳಿಗೆ ಇದರ ಸದ್ಬಳಕೆಗೆ ಮುಂದಾಗಬೇಕು ಎಂದರು.
ಜಿ.ಪಂ ಯೋಜನಾಧಿಕಾರಿ ಶರಣಬಸವ ಕೆಸರಟ್ಟಿಿ ಮಾತನಾಡಿ, ಕಲ್ಯಾಾಣ ಕರ್ನಾಟಕದಲ್ಲಿ ಸೋಲಾರ್ ಹೆಚ್ಚಿಿನ ಬಳಕೆ ಮಾಡಲು ಇರುವ ಅವಕಾಶ ಮಹಿಳೆಯರು ಬಳಸಿಕೊಂಡು ಸ್ವಯಂ ಉದ್ಯೋೋಗ, ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಸೆಲ್ಕೋೋ ೌಂಡೇಶನ್ ವ್ಯವಸ್ಥಾಾಪಕ ಣೀಂದ್ರ ಸಿಂಗ್ , ಕೃಷಿ ವಿವಿ ಪ್ರಾಾಧ್ಯಾಾಪಕ ಡಾ.ವಿಜಯಕುಮಾರ ಪಲ್ಲೇದ್ ಹಿರಿಯ ವ್ಯವಸ್ಥಾಾಪಕಿ ಸುರಭೀ ರಾಜಗೋಪಾಲ, ಉದಯಕುಮಾರ, ಎ.ಆರ್.ಕುರುಬರ, ಡೀನ್ ಅಯ್ಯನಗೌಡ, ವಿಜಯಗೋಡಿಹಾಳ ಸೇರಿದಂತೆ ಹಲವರಿದ್ದರು.
ವಿಕಾಸನಿ, ವಿಕಾಸ ಪಥದಲ್ಲಿ ಮಹಿಳೆಯರ ಹೆಜ್ಜೆ ಕಾರ್ಯಾಗಾರ ವಿದ್ಯುತ್ ಮೇಲಿನ ಅವಲಂಬನೆ ತಪ್ಪಿಿಸಲು ಸೋಲಾರಗೆ ಒತ್ತು ನೀಡಿ – ಕುಲಪತಿ

