ಸುದ್ದಿಮೂಲ ವಾರ್ತೆ
ಟೇಕಲ್, ಜು 19 : ಬಂಡೆ ಕೆಲಸ ಮಾಡುವ ವೇಳೆ ಬಂಡೆ ಕುಸಿದು ಬಿದ್ದು ಕಲ್ಲು ಕುಟಿಕ ಸಾವನ್ನಪ್ಪಿರುವ ಘಟನೆ ಟೇಕಲ್ ಸಮೀಪದ ಉಳ್ಳೇರಹಳ್ಳಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಬುಧವಾರ ನಡೆದಿದೆ.
ಅಕ್ರಮವಾಗಿ ಬಂಡೆ ಹೊಡೆಯುವ ವೇಳೆ ಬಂಡೆ ಕುಸಿದಿದ್ದು ಕಲ್ಲು ಕೆಲಸ ಮಾಡುತ್ತಿದ್ದ ಕಾರ್ಮಿಕ ಆಂಧ್ರ ಮೂಲದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ಅಲಗಮಾನಪಲಿ ನಿವಾಸಿ ನಾರಾಯಣಪ್ಪ (45) ಮಗನ ಮುಂದೆ ಅಸುನೀಗಿದ್ದು, ಸುಮಾರು ಎರಡು ವರ್ಷಗಳಿಂದ ಈ ಕುಟುಂಬ ಬಂಗಾರಪೇಟೆ ಕುಪ್ಪಸ್ವಾಮಿ ಲೇಔಟ್ನಲ್ಲಿ ಸಂಸಾರ ವಾಸವಾಗಿತ್ತು. ಇಲ್ಲಿ ಉಳ್ಳೇರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಬಂಡೆಯಲ್ಲಿ ಕಲ್ಲು ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಟೇಕಲ್ನ ಕೆ.ಜಿ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದಕ್ಕೆ ಯಾವುದೇ ರೀತಿಯಾದ ಪರವಾನಿಗೆ ಇಲ್ಲವಾಗಿದೆ ಈ ಬಗ್ಗೆ ಎಲ್ಲವೂ ಅಕ್ರಮವಾಗಿ ಮಾಡುತ್ತಿದ್ದ ಬಂಡೆ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿತ್ತು. ಆದರೂ, ಕೆಲಸ
ಸ್ಥಳಕ್ಕೆ ಅಧಿಕಾರಿಗಳ ಭೇಟಿ : ಉಳ್ಳೇರಹಳ್ಳಿಯ ಬಂಡೆ ಬಿದ್ದು ಅಸುನೀಗಿದ ಸ್ಥಳಕ್ಕೆ ಕೋಲಾರ ಜಿಲ್ಲಾ ಎಸ್.ಪಿ.ನಾರಾಯಣ ಭೇಟಿ ನೀಡಿ ಸ್ಥಳವನ್ನು ವೀಕ್ಷಿಸಿದರು. ಕಾರ್ಮಿಕನಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಪರಿಹಾರವನ್ನು ಒದಗಿಸುವಂತೆ ಚರ್ಚಿಸುವುದಾಗಿ ತಿಳಿಸಿದರು.