ಸುದ್ದಿಮೂಲ ವಾರ್ತೆ
ಆನೇಕಲ್, ಏ.17: ಸಿಪಿಐ(ಎಂ) ಆನೇಕಲ್ ತಾಲ್ಲೂಕು ಸಮಿತಿಯಿಂದ ದುಡಿಯುವ ಜನರ ರಾಜಕೀಯ ಸಮಾವೇಶವನ್ನು ಭಾನುವಾರ ಆನೇಕಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶವನ್ನು ಉದ್ಘಾಟಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಮಾತನಾಡಿದರು.
ಸಮಾವೇಶವನ್ನು ಉದ್ದೇಶಿಸಿ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ರವರು ಹಾಗೂ ಅಧ್ಯಕ್ಷತೆ ವಹಿಸಿದ್ದ ಆನೇಕಲ್ ತಾ. ಕಾರ್ಯದರ್ಶಿ ಡಿ.ಮಹದೇಶ್ ರವರು ಮಾತನಾಡಿದರು.
ಸಮಾವೇಶದಲ್ಲಿ ಸಿಪಿಐ(ಎಂ) ತಾ. ಮುಖಂಡರಾದ ಪಿ.ಸುರೇಶ್ ನಿರೂಪಣೆ ಮಾಡಿದರೆ, ಸಿಐಟಿಯ ತಾಲೂಕು ಮುಖಂಡ ಸುನೀಲ್.ಜಿ.ಪಿ ಸ್ವಾಗತಿಸಿದರೆ, ವಂದನಾರ್ಪಣೆಯನ್ನು ಕ.ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡರಾದ ಬಾಲರಾಜ್ ಮಾಡಿದರು.