ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.13: ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಶನ್ಸ್ ಸ್ಮಾರ್ಟ್ ಪೇರೆಂಟಿಂಗ್ ಕುರಿತು ಚೇಳೆಕೆರೆಯಲ್ಲಿರುವ ದಿಲ್ಲಿ ಪ್ರೀಸ್ಕೂಲ್ನಲ್ಲಿ ಪಾಲಕರಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿತ್ತು.
ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಶನ್ಸ್ ಸ್ಮಾರ್ಟ್ ಪೇರೆಂಟಿಂಗ್ ಕುರಿತು ಕಾರ್ಯಾಗಾರ ಹಮ್ಮಿಕೊಂಡಿತ್ತು. ತಮ್ಮ ಮಕ್ಕಳಿಗೆ ಅತ್ಯುತ್ತಮ ಆರೈಕೆ ನೀಡಲು ಮತ್ತು ಮಕ್ಕಳು ಸಂತೋಷದಿಂದ ಬೆಳೆಯಲು ಹಾಗೂ ಭವಿಷ್ಯದ ಪ್ರಜೆಗಳು ಮಾನವೀಯತೆಯುಳ್ಳ ವ್ಯಕ್ತಿಗಳಾಗಿ ಬೆಳೆಯಲು ಅಗತ್ಯವಿರುವ ಬೆಂಬಲ ನೀಡಲು ಸ್ಮಾರ್ಟ್ ಪೇರೆಂಟಿಂಗ್ನ ಅಗತ್ಯವನ್ನು ಈ ಕಾರ್ಯಾಗಾರದ ಮೂಲಕ ಪೋಷಕರಿಗೆ ತಿಳಿಸಿಕೊಡಲಾಯಿತು.
ಬಹುತೇಕ ಮಕ್ಕಳಿಗೆ ತಮ್ಮ ಸ್ವಂತ ಮಗುವನ್ನು ಅರ್ಥ ಮಾಡಿಕೊಳ್ಳುವ ರೀತಿ ತಿಳಿದಿರುವುದಿಲ್ಲ. ಆ ಕೊರತೆಯನ್ನೂ ಕಾರ್ಯಾಗಾರ ನೀಗಿಸುವು ಪ್ರಯತ್ನ ಮಾಡಿತು.
ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಶನ್ಸ್ನ ಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಮೂರ್ತಿ ಹಾಗೂ ಅವರ ತಂಡದ ಸದಸ್ಯರಾದ ರೂಹಿ ಅಲಿ, ತ್ರಿಶಾ ಸೇಥ್ ಮತ್ತು ಶಶಾಂಕ್ ಬಿ.ಶೆಟ್ಟಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.