ಸುದ್ದಿಮೂಲ ವಾರ್ತೆ ರಾಯಚೂರು, ಡಿ.01:
ಭಯಾನಕ ಏಡ್ಸ್ ಕಾಯಿಲೆಯನ್ನು 2030ರ ವೇಳೆಗೆ ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ, ಆರೋಗ್ಯ ಇಲಾಖೆ ಹತ್ತು-ಹಲವು ಯೋಜನೆಗಳನ್ನು ಹಮ್ಮಿಿಕೊಂಡು ಶ್ರಮಿಸುತ್ತಿಿದೆ. ಇದಕ್ಕೆೆ ಜಿಲ್ಲೆೆಯ ಸಾರ್ವಜನಿಕರು ಸಹಕಾರ ನೀಡಬೇಕೆಂದು ಗೌರವಾನ್ವಿಿತ ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇೇಣಿಯ ದಿವಾನಿ ನ್ಯಾಾಯಾಧೀಶರಾದ ಹೆಚ್.ಎ.ಸಾತ್ವಿಿಕ್ ಅವರು ಹೇಳಿದರು.
ಡಿಸೆಂಬರ್ 01ರಂದು ಸೋಮವಾರ ನಗರದ ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಕಚೇರಿಯ ಆವರಣದಲ್ಲಿ ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರ, ಜಿಲ್ಲಾಾಡಳಿತ, ಜಿಲ್ಲಾಾ ಪಂಚಾಯತ್, ಡ್ಯಾಾಪ್ಕೋೋ, ಪೊಲೀಸ್ ಇಲಾಖೆ, ಯುವಜನ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆ, ರಿಮ್ಸ್, ರೋಟರಿ, ಲಯನ್ಸ್ ಕ್ಲಬ್, ಎನ್ವೈಕೆ, ನವೋದಯ ವೈದ್ಯಕೀಯ ಕಾಲೇಜು, ಎ.ಎಮ್.ಈ.ಎಸ್ ಡೆಂಟಲ್ ಕಾಲೇಜು, ಹೊಸ ಬೆಳಕು, ರೆಡ್ ರಿಬ್ಬನ್ ಸೇರಿದಂತೆ ವಿವಿಧ ಸಂಘ ಸಂಸ್ಥೆೆಗಳ ಆಶ್ರಯದಲ್ಲಿ ವಿಶ್ವ ಏಡ್ಸ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆೆ ಹಸಿರು ಬಾವುಟ ತೋರಿ ಅವರು ಮಾತನಾಡಿದರು.
ಜಗತ್ತಿಿನ ಎಲ್ಲ ದೇಶಗಳು ಸೋಂಕಿನ ತಡೆಗೆ ಹಗಲಿರಳು ಶ್ರಮಿಸುತ್ತಿಿವೆ. ಇದಕ್ಕೆೆ ಭಾರತವು ಹೊರತಾಗಿಲ್ಲ. ಸೋಂಕಿತರನ್ನು ಕಳಂಕರನ್ನಾಾಗಿ ಮಾಡದೇ ಸಮಾಜಮುಖಿಯಾಗಿಸಲು ಮತ್ತು ಅವರನ್ನು ಎಲ್ಲರಂತೆ ಕಾಣಬೇಕಿದೆ.
ಜೊತೆ ಜೊತೆಗೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಯುವ ಜನತೆಗೆ ಹೆಚ್ಚು ಸೋಂಕಿಗೆ ಒಳಗಾಗುತ್ತಿಿರುವ ಗಂಭೀರತೆಯನ್ನು ಸಮುದಾಯದ ಪ್ರತಿಯೊಬ್ಬರೂ ಸಹ ಅರ್ಥಮಾಡಿಕೊಂಡು ಇಂದಿನಿಂದಲೆ ಜಾಗೃತರಾಗಬೇಕು. ಸೋಂಕು ಮುಕ್ತ ರಾಯಚೂರು ಜಿಲ್ಲೆೆಯನ್ನಾಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದರು.
ಈ ವೇಳೆ ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಆಧುನಿಕತೆಯ ಜಂಜಡಗಳ ಮಧ್ಯದಲ್ಲಿರುವ ಯುವಜನತೆಯು ತಮ್ಮ ತಂದೆ, ತಾಯಿ, ಗುರುಗಳ ಮಾರ್ಗದರ್ಶನ ಪಡೆಯುವ ಮೂಲಕ ತಮ್ಮ ತಮ್ಮ ತನ ಉಳಿಸಿಕೊಳ್ಳುವ ಮೂಲಕ ಹೆಚ್ಐವಿ ಸೋಂಕಿನ ಹೊಸ ಪ್ರಕರಣಗಳ ತಡೆಗೆ ಕೈಜೊಡಿಸಬೇಕಿದೆ ಎಂದರು.
ಪ್ರಸ್ತುತ ವರ್ಷ ಜಿಲ್ಲೆೆಯಲ್ಲಿ 55,275 ಜನರನ್ನು ಪರೀಕ್ಷಿಸಲಾಗಿ 236 ಜನರಿಗೆ ಸೊಂಕೀರುವುದು ಕಂಡುಬಂದಿದ್ದು, ಇದರಲ್ಲಿ ಯುವ ಸಮುದಾಯದ ಸಂಖ್ಯೆೆ ಹೆಚ್ಚಳವಾಗುತ್ತಿಿರುವುದು ಕಳವಳದ ಸಂಗತಿಯಾಗಿದೆ. ಒಮ್ಮೆೆ ಸೋಂಕಿಗೆ ಒಳಗಾದಲ್ಲಿ ಜೀವನಪೂರ್ತಿ ಜೊತೆಗೆ ಇರುವ ಹೆಚ್ಐವಿ ಏಡ್ಸ್ನಿಂದ ಯುವಜನತೆಯನ್ನು ಪಾರುಮಾಡಲು ಎಲ್ಲರೂ ಸೇರಿ ಪ್ರಯತ್ನಿಿಸೋಣ ಎಂದು ಮನವಿ ಮಾಡಿದರು.
ಎಚ್.ಐ.ವಿ ಮತ್ತು ಏಡ್ಸ್ ಕಾಯಿಲೆಯು ಕಳೆದ 40 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿಿದೆ. ಏಡ್ಸ್ ರೋಗವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಜಿಲ್ಲಾಾ ಮಟ್ಟದಿಂದ ತಾಲೂಕು ಹಾಗೂ ಗ್ರಾಾಮ ಮಟ್ಟದವರೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು ವಿಸ್ತರಿಸಲಾಗಿದೆ ಎಂದರು.
ಏಡ್ಸ್ ಕುರಿತು ವ್ಯಾಾಪಕ ಪ್ರಚಾರ: ಏಡ್ಸ್ ಕುರಿತು ಜನಜಾಗೃತಿಗಾಗಿ ಆರೋಗ್ಯ ಇಲಾಖೆಯ ಐಇಸಿ ಕಾರ್ಯಕ್ರಮಗಳ ಮೂಲಕ ಜಿಲ್ಲೆೆಯ ಎಲ್ಲ ತಾಲೂಕು, ಗ್ರಾಾಮಗಳಲ್ಲಿ ಜಾನಪದ ಕಲಾ ತಂಡಗಳ ಮೂಲಕ ಅರಿವು ಮೂಡಿಸಿ ಮನೆಮನೆಗೆ ಮಾಹಿತಿ ತಲುಪಿಸಲಾಗುತ್ತಿಿದೆ. ಕರಪತ್ರ, ಪೋಸ್ಟರ್, ಭಿತ್ತಿಿಪತ್ರ ಮತ್ತು ಮಾಧ್ಯಮಗಳ ಮೂಲಕ ಏಡ್ಸ್ ಕುರಿತು ವ್ಯಾಾಪಕ ಪ್ರಚಾರ ಮಾಡಲಾಗುತ್ತಿಿದೆ. ಯುವ ಸಮೂಹ ಕೇಂದ್ರಿಿಕರಿಸಿ, ವಿವಿಧ ರೀತಿಯ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆೆಯಾದ್ಯಂತ ಹಮ್ಮಿಿಕೊಳ್ಳಲಾಗುತ್ತಿಿದೆ ಎಂದರು.
ಸಾಧಕರಿಗೆ ಸನ್ಮಾಾನ: ರಾಜ್ಯ ಮಟ್ಟದಲ್ಲಿ ರಸಪ್ರಶ್ನೆೆ ಕಾರ್ಯಕ್ರಮದಲ್ಲಿ ಮೊದಲ ಸ್ಥಾಾನ ಪಡೆದ ರಾಯಚೂರು ತಾಲೂಕಿನ ಸಗಮಕುಂಟಾ ಸರಕಾರಿ ಪ್ರೌೌಢಶಾಲಾ ವಿದ್ಯಾಾರ್ಥಿಗಳು, ಮುಖ್ಯ ಶಿಕ್ಷಕರು ಹಾಗೂ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಿದ ರಿಮ್ಸ್ ಪ್ರಸೂತಿ ತಜ್ಞರು, ಹೆಚ್ಚು ಪರೀಕ್ಷೆ ಕೈಗೊಂಡ ಜಹೀರಾಬಾದ್ ನಗರ ಆರೋಗ್ಯ ಕೇಂದ್ರ ವೈದ್ಯಾಾಧಿಕಾರಿಯವರಿಗೆ ವಿವಿಧ ಗಣ್ಯರಿಂದ ಸನ್ಮಾಾನಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ: ಏಡ್ಸ್ ಕುರಿತು ಜನಜಾಗೃತಿ ಜಾಥಾನಡಿಗೆಯು ಡಿಎಚ್ಒ ಕಚೇರಿಯಿಂದ ಆರಂಭಗೊಂಡು, ಮಹಾವೀರ್ ಸರ್ಕಲ್, ಭಗತ್ ಸಿಂಗ್ ಸರ್ಕಲ್ ಮೂಲಕ ಡಿಎಚ್ಒ ಕಚೇರಿಗೆ ತಲುಪಿತು. ಜಾಥಾದಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾಾ ಶಸ್ತ್ರಚಿಕಿತ್ಸಕ ಡಾ.ವಿಜಯಶಂಕರ್, ಜಿಲ್ಲಾಾ ಆರ್ಸಿಹೆಚ್ ಅಧಿಕಾರಿ ಡಾ.ನಂದಿತಾ ಎಂ.ಎನ್. ಜಿಲ್ಲಾಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ ಕೆ, ರಿಮ್ಸ್ ಪ್ರಸೂತಿ ತಜ್ಞೆ ಡಾ.ಇಸ್ರತ್ ಸಿದ್ದಿಕಿ, ಎಎಮ್ಇಎಸ್ ದಂತ ಕಾಲೇಜಿನ ಡಾ.ಸೋಮನಾಥ, ಡಾ.ಅರುಣಾ, ಮಾನಸಿಕ ತಜ್ಞರಾದ ಮನೋಹರ ಪತ್ತಾಾರ, ರಿಮ್ಸ್ ನಸಿರ್ಂಗ್ ಕಾಲೇಜಿನ ಪ್ರಾಾಂಶುಪಾಲರಾದ ಶ್ರೀಶೈಲ್ ಶಂಕರ ರೆಡ್ಡಿಿ, ಸರಕಾರಿ ಮಹಿಳಾ ಕಾಲೇಜು ಪ್ರಾಾಂಶುಪಾಲರಾದ ಡಾ.ಸುಗುಣಾ, ರೆಡ್ ಕ್ರಾಾಸ್ ಕಾರ್ಯದರ್ಶಿ ಅತ್ತಾಾವುಲ್ಲಾಾ, ಜಿಲ್ಲಾಾ ಸಂಚಾಲಕರು ಡಾ.ದಂಡಪ್ಪ ಬಿರಾದಾರ, ಡಿಹೆಚ್ಇಓ ಈಶ್ವರ ದಾಸಪ್ಪನವರ, ಡ್ಯಾಾಪ್ಕೋೋ ಜಿಲ್ಲಾಾ ಮೇಲ್ವಿಿಚಾರಕ ಮಲ್ಲಯ್ಯ ಮಠಪತಿ, ಡಿವೈಹೆಚ್ಇಓ ಬಸಯ್ಯ, ಅರ್ಚನಾ, ಸಂತೋಷ ಕುಮಾರ್ ಸೇರಿದಂತೆ ಡ್ಯಾಾಪ್ಕೋೋ, ಟಿಬಿ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾಾರ್ಥಿಗಳು ಇದ್ದರು.
ರಾಯಚೂರಿನಲ್ಲಿ ವಿಶ್ವ ಏಡ್ಸ್ಸ್ ದಿನಾಚರಣೆ ಏಡ್ಸ್ ಕಾಯಿಲೆ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು: ನ್ಯಾಾ.ಹೆಚ್.ಎ.ಸಾತ್ವಿಕ್

