ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.1:
ವಿಶ್ವ ಏಡ್ಸ್ ದಿನವು ಎಚ್ ಐವಿ ಮತ್ತು ಏಡ್ಸ್ ವಿರುದ್ಧ ಹೋರಾಟದಲ್ಲಿ ಜನರನ್ನು ಒಗ್ಗೂಡಿಸುವ ಜಾಗತಿಕ ಆಂದೋಲನವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಾಯಾಧೀಶ ಮರಿಯಪ್ಪ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನವನ್ನು ಉದ್ಘಾಾಟಿಸಿ ಅವರು ಮಾತನಾಡಿದರು.
ಎಚ್ ಐವಿ ಕಳಂಕದ ವಿರುದ್ದ ಶಕ್ತಿಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುವ ಮತ್ತು ಕಳೆದುಕೊಂಡ ಜೀವಗಳನ್ನು ಸ್ಮರಿಸುವ ದಿನವಾಗಿವೆ. ಇದನ್ನು ತಡೆಯಲು ಜನಜಾಗೃತಿ ಮುಖ್ಯ. ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ಇದರ ನಿಯಂತ್ರಣಕ್ಕೆೆ ಕೆಲಸ ಮಾಡುತ್ತಿಿದೆ. ಮುಖ್ಯವಾಗಿ ಸಾರ್ವಜನಿಕರು ಇದರ ವಿರುದ್ಧ ಹೋರಾಡುವ ಅಗತ್ಯವಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಮಾತನಾಡಿ, ಈ ರೋಗ ಕಾಣಿಸಿಕೊಂಡಾಗಿನಿಂದ ಈ ವರ್ಷಕ್ಕೆೆ ಹೊಲಿಸಿದರೇ ಈಗ ಸಾಕಷ್ಟು ನಿಯಂತ್ರಣಕ್ಕೆೆ ಬಂದಿದೆ. ಸ್ವಯಂ ಆಗಿ ಜನರೇ ಇದರ ನಿಯಂತ್ರಣಕ್ಕೆೆ ಮುಂದಾಗಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಅಧಿಕಾರಿ ಡಾ. ಮಹೇಶ ಬಿರಾರ್ದ ಮಾತನಾಡಿ ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿಿ ಸಿಂಡ್ರೊೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿಿ ಸಿಂಡ್ರೋೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿಿ ವೈರಸ್) ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು ಅನಾರೋಗ್ಯ, ನಿರೋಧಕ ವ್ಯವಸ್ಥೆೆ ಬದಲಾಯಿಸುತ್ತದೆ.ರೋಗ ನಿರೋಧಕ ಶಕ್ತಿಿ ಪೂರ್ಣ ಕಡಿಮೆಯಾಗಿ ರೋಗ ಉಲ್ಬಣಗೊಳ್ಳುತ್ತದೆ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಮಾತನಾಡಿ, ಸಾಂಕ್ರಾಾಮಿಕ ರೋಗಗಳು ಸೊಳ್ಳೆೆ ಕಚ್ಚುವ ಮೂಲಕ ಅಥವಾ ಗಾಳಿಯಿಂದ ಹರಡುತ್ತವೆ. ಆದರೆ, ಏಡ್ಸ್ ರೋಗ ಹಾಗಲ್ಲ. ಬೇಕು ಎಂದು ಬಯಸಿದರೆ ಮಾತ್ರ ಬರುವ ಕಾಯಿಲೆಯಾಗಿದೆ. ರೋಗಕ್ಕೆೆ ಔಷಧವಿಲ್ಲ. ಹಾಗಾಗಿ, ಏಕಪತ್ನಿಿ, ಏಕಪತಿವೃತ ಆಚರಿಸುವ ಮೂಲಕ ಏಡ್ಸ್ನಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಪ್ರೀೀತಿ ಪಾಟೀಲ್, ಡಾ.ಹಣಮಂತ ರೆಡ್ಡಿಿ, ಡಾ.ಸುಭಾಶ್ಚಂದ್ರ ಕೌಲಗಿ, ಮಹಿಳಾ ಮತ್ತು ಕಲ್ಯಾಾಣ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ತುಳಸಿರಾಮ ಚವ್ಹಾಾಣ ಇದ್ದರು.
ಯಾದಗಿರಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಏಡ್ಸ್ ನಿಯಂತ್ರಣಕ್ಕೆ ಜಾಗೃತಿ, ಅರಿವು ಮುಖ್ಯ: ನ್ಯಾಯಾಧೀಶ ಮರಿಯಪ್ಪ

