ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಜೂ7 ; ಹೆಚ್ ಆರ್ ಬಿ ಆರ್ ಬಡಾವಣೆಯ ಸೆನ್ಸ್ ಕೆಲಿಡೋಸ್ಕೋಪ್ ಆಟಿಸಂ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಹಳದಿ ಮತ್ತು ಹಸಿರು ಬಣ್ಣದ ಬಟ್ಟೆ ಧರಿಸಿ ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ಮಾಡಿ ಪ್ರದರ್ಶಿಸಿದರು.
ಸೆನ್ಸ್ ಕೆಲಿಡೋಸ್ಕೋಪ್ ಶಾಲೆಯನ್ನು ಸಂಚಾಲಕ ಅಕ್ಷಯ್ ಶೆಟ್ಟಿ ನಡೆಸಿಕೊಡುತ್ತಿದ್ದು, ಮಣ್ಣು ಎಂದರೇನು ಮತ್ತು ಮಣ್ಣಿನಿಂದ ಬೆಳೆಗಳನ್ನು ಹೇಗೆ ಬೆಳೆಯಬಹುದು. ಬೀಜ ನಾಟಿ ಮಾಡುವುದು. ಕೊಯ್ಲು ಮಾಡುವ ಬಗೆ ಮರಗಳಿಗೆ ನೀರು ಉಣಿಸುವ ಬಗ್ಗೆ ಆಟಿಸಂ ಮಕ್ಕಳಿಗೆ ತಿಳಿಸಿಕೊಟ್ಟರು.
ಪರಿಸರ ಮಾಲಿನ್ಯ ನಿಯಂತ್ರಣ ಮಾಡಲು ಮಣ್ಣಿನಿಂದ ಸಿಗುವ ಲಾಭಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪರಿಸರ ವ್ಯವಸ್ಥೆಗೆ ಮಣ್ಣು ಕೂಡ ಪ್ರಮುಖ ಅಂಶವಾಗಿದ್ದು ಫಲವತ್ತಾದ ಮಣ್ಣಿನಿಂದ ಆರೋಗ್ಯಕರ ಫಸಲನ್ನು ತೆಗೆಯಬಹುದು. ಮಣ್ಣು ಪರಿಸರ ವ್ಯವಸ್ಥೆಯಲ್ಲಿ ಒಂದು ಭಾಗ ಎನ್ನುವ ಅಂಶ ಮನದಟ್ಟು ಮಾಡಿಕೊಂಡರು. ಮಕ್ಕಳ ಮನಸ್ಸನ್ನು ಸೆಳೆಯುವ ಉದ್ದೇಶದಿಂದ ಅರ್ಥಪೂರ್ಣ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು