ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.23:
ಕೃಷಿ ವಲಯದಲ್ಲಿ ಬಂಡವಾಳದ ಹೂಡಿಕೆ ಹೆಚ್ಚಾಾದಾಗ ಮಾತ್ರ ಕೃಷಿ ವಲಯದ ಬೆಳವಣಿಗೆ ಸಾಧ್ಯ. ದೇಶ ವಿಕಸಿತ ಭಾರತವಾಗಬೇಕಾದರೇ ಕೃಷಿ ವಲಯದ ಅಭಿವೃದ್ಧಿಿ ಮುಖ್ಯ. ರೈತರನ್ನು ಬಿಟ್ಟು ದೇಶ ಕಟ್ಟುವುದು ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿಿ, ಸಂಸದ ಬಸವರಾಜ ಬೊಮ್ಮಾಾಯಿ ಅಭಿಪ್ರಾಾಯಪಟ್ಟರು.
ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಯುಕ್ತಾಾಶ್ರಯದಲ್ಲಿ ವಿಶ್ವ ರೈತ ದಿನಾಚರಣೆ,ರೈತರ ಹಬ್ಬ ರಾಜ್ಯ ಮಟ್ಟದ ರೈತರ ಸಮಾವೇಶ ಉದ್ಘಾಾಟಿಸಿ ಮಾತನಾಡಿದರು.
ಒಂದು ಪ್ರತಿಶತ ಕೃಷಿ ವಲಯ ಅಭಿವೃದ್ಧಿಿಯಾದಲ್ಲಿ, ನಾಲ್ಕು ಪ್ರತಿಶತ ಉತ್ಪಾಾದನಾ ವಲಯ ಅಭಿವೃದ್ಧಿಿಯಾಗಲಿದೆ. ಉತ್ಪಾಾದನೆ ವಲಯದ ಅಭಿವೃದ್ಧಿಿಯಿಂದ 10 ಪ್ರತಿಶತ ಸರ್ವಿಸ್ ವಲಯದಲ್ಲಿ ಅಭಿವೃದ್ಧಿಿಯಾಗಲಿದೆ. ಒಟ್ಟಾಾರೆ ದೇಶದ ಕೃಷಿ ವಲಯ ಅಭಿವೃದ್ಧಿಿಯಾಗುವುದು ಮುಖ್ಯವಾಗಿದೆ ಎಂದರು.
ರೈತ ಯಾವುದೇ ಪಕ್ಷಕ್ಕೆೆ ಸೇರಿಲ್ಲ. ಆದರೆ, ಎಲ್ಲಾ ಪಕ್ಷಗಳು ರೈತರಿಗೆ ಸೇರಿವೆ. ರೈತನಿದ್ದಾಗ ಮಾತ್ರ ಸ್ಥಾಾನ,ಮಾನ ಅಧಿಕಾರ. ರೈತರಿದ್ದಾಗ ಮಾತ್ರ ದೇಶ ಸ್ವಾಾವಲಂಬಿಯಾಗಲಿದೆ. ದೇಶದ ಎಲ್ಲ ಜನರಿಗೆ ಆಹಾರ ದೊರೆಯಲು ರೈತನೇ ಕಾರಣ. ದುರ್ದೈವದ ಸಂಗತಿಯೆಂದರೆ ಕೃಷಿ ಬೆಳೆದಿದೆ. ಆದರೆ, ನಮ್ಮ ರೈತ ಬೆಳೆಯುತ್ತಿಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಕೃಷಿ ಎಂದರೆ ಅಸಡ್ಯ. ರಾಜ್ಯದ ರೈತರ ಸಮಸ್ಯೆೆಗೆ ತೀಕ್ಷ್ಣವಾಗಿ ಸ್ಪಂದಿಸುವ ಕೆಲಸ ಆಗಬೇಕಿತ್ತು. ಆದರೆ, ಆಗುತ್ತಿಿಲ್ಲ. ರಾಜ್ಯ ಸರ್ಕಾರ ಕೃಷಿ ಬಗ್ಗೆೆ ತನ್ನ ಬದ್ಧತೆ ತೋರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತ ಬೆಳೆದ ಕಬ್ಬಿಿಗೆ ಯಾವ ರೀತಿ ಎ್ ಆರ್ಪಿ ದರ ನಿಗದಿ ಕೇಂದ್ರ ಸರ್ಕಾರ ಮಾಡುತ್ತಿಿದೆ. ಅದೇ ರೀತಿ ರೈತರ ಎಲ್ಲಾ ಬೆಳೆಗಳಿಗೂ ದರ ನಿಗದಿ ಮಾಡಬೇಕು ಎಂಬುವುದು ಸೇರಿ 22 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟೀಯ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ, ಪಿ. ಆರ್. ಪಾಂಡ್ಯನ್, ವೆಂಕಟೇಶ್, ವೀರಣ್ಣ ಪಾಟೀಲ್, ಕರಬಸಪ್ಪ, ರವಿಕುಮಾರ್, ಅಭಿಮನ್ಯು ಕೋಹಾರ, ರಾಮನ ಗೌಡ, ಶಾಸಕ ಬಿಜಿ ಪಾಟೀಲ್, ಶರಣು ಸಲಗರ, ಉಮೇಶ್ ಜಾಧವ್, ರಮೇಶ್ ಹೂಗಾರ, ಜಗದೀಶ್ ಪಾಟೀಲ್ ಇದ್ದರು.
ವಿಶ್ವ ರೈತ ದಿನಾಚರಣೆ, ರಾಜ್ಯ ಮಟ್ಟದ ರೈತ ಸಮಾವೇಶ ರೈತರನ್ನು ಬಿಟ್ಟು ದೇಶ ಕಟ್ಟುವುದು ಅಸಾಧ್ಯ: ಬಸವರಾಜ ಬೊಮ್ಮಾಾಯಿ

