ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು.29: ಹೊಸಕೋಟೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆಯನ್ನು ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಮಾತನಾಡಿ, ಆತ ತಾನೇ ಜನಿಸಿದ ನವಜಾತು ಶಿಶುವಿಗೆ ಹೆಪಟೈಟಿಸ್ ಲಸಿಕೆ ಹಾಕಿಸುವ ಮೂಲಕ ಆರೋಗ್ಯ ರಕ್ಷಣೆ ಮಾಡಬೇಕು. ರಾಷ್ಟ್ರೀಯ ವೈರಲ್ ನಿಯಂತ್ರಣ ಕಾಠ್ಯಕ್ರಮವು ಒಂದು ಸಮಗ್ರ ಯೋಜನೆಯಾಗಿದ್ದು, 2030 ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಉಚಿತ ತಪಾಸಣೆ ಹಾಗೂ ಸೇವೆಗಳು ಲಭ್ಯವಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹೆಪಟೈಟಿಸ್ ಕುರಿತಂತ ಸರಕಾರಿ ಕರಪತ್ರಗಳನ್ನು ಬಿಡುಗಡೆ ಮಾಡಿದರು .
ತಾಲೂಕು ಆರೋಗ್ಯ ಅಧಿಕಾರಿ ಡಾ. ವೀಣಾ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸತೀಶ್, ಮಕ್ಕಳ ತಜ್ಞರಾದ ಡಾ. ಸೌಮ್ಯ, ಶಸ್ತ್ರಚಿಕಿತ್ಸಕರಾದ ಡಾ. ಮೋಹನ್ ದಾಸ್, ಇನ್ನಿತಜ್ಞ ಡಾ. ರವಿಶಂಕರ್, ನೇತ್ರ ತಜ್ಞರಾದ ಡಾ. ಮಂಜುನಾಥಸ್ವಾಮಿ, ದಂತ ವೈದ್ಯರಾದ ಡಾ. ಮಾಲಿನಿ, ಕೀಲು ಮತ್ತು ಮೂಳೆ ತಜ್ಞರಾದ ಡಾ. ರಾಘವೇಂದ್ರ, ತಾಲೂಕು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್, ಹಿರಿಯ ಫಾರ್ಮಸಿ ಅಧಿಕಾರಿ ಅರ್ಚನಾ, ಸೌಭಾಗ್ಯ, ಸುಷ್ಮಾ, ತಾಲೂಕು ಕ್ಷಯರೋಗ ಘಟಕ ಸುದೀಪ್, ಪ್ರಭಾಕರ್, ಸಾರ್ವಜನಿಕ ಆಸ್ಪತ್ರೆಯ ಮೆಟ್ರಾನ್ ಮೇರಿ, ಆಪ್ತ ಸಮಾಲೋಚಕಿ ಅಂಬಿಕಾ, ಶುಶೂಷಕ ಅಧಿಕಾರಿ ಕನಕ ಸೇರಿದಂತೆ ಇತರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.