ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.31:
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಸಾಹಿತ್ಯದ ಮೂಲಕ ವಿಶ್ವ ವಿಖ್ಯಾಾತಿ ಪಡೆಯುವಲ್ಲಿ ರಾಷ್ಟ್ರಕವಿ ಕುವೆಂಪುರವರ ಕೊಡುಗೆ ಬಹಳ ಮಹತ್ವವಾಗಿದೆ ಎಂದು ಉಪ್ಪನ್ಯಾಾಸಕ ದೇವಿಂದ್ರ ಕಿಲ್ಲನಕೇರಾ ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಮಹಿಳಾ ಪದವಿ ಮಹಾವಿದ್ಯಾಾಲಯದಲ್ಲಿ ನಡೆದ ಜಿಲ್ಲಾ ಆಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಾಸ ನೀಡಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅಂದರೆ ಕುಪ್ಪಳಿ ವೆಂಕಟಪ್ಪನ ಮಗ ಪುಟ್ಟಪ್ಪ ರವರು ಕನ್ನಡದ ಮಹಾನ್ ಕವಿ, ಕನ್ನಡದ ಅಗ್ರಮಾನ್ಯ ಕವಿ, ವಿಮರ್ಶಕರು, ಕಾದಂಬರಿಕಾರರು ನಾಟಕಕಾರರು, ಸಮಾಜದ ಚಿಂತಕರಾಗಿ ನಾಡಿಗೆ ಹೆಸರಾಗಿದ್ದಾರೆ, ಕನ್ನಡಕ್ಕೆೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಿ ಬಂದಿರುವುದು ಬಹಳ ಹೆಮ್ಮೆೆಯ ವಿಷಯ ಹಾಗೂ ಮೈಸೂರು ವಿಶ್ವವಿದ್ಯಾಾಲಯದ ಉಪಕುಲಪತಿಗಳಾಗಿ, ಕನ್ನಡ ಸಂಶೋಧನಾ ಸಂಸ್ಥೆೆ ಸ್ಥಾಾಪಿಸಿ, ಮಹಾಕಾವ್ಯಗಳನ್ನು ರಚಿಸಿ, ಅನೇಕ ಪ್ರಶಸ್ತಿಿಗಳನ್ನು ಸ್ವೀಕರಿಸಿ ವಿಶ್ವಮಾನವ ಎಂದು ಕಲ್ಪನೆ ಯನ್ನು ಸಾರಿದ್ದಾರೆ.
ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾಾರೆ, ಕುವೆಂಪು ಅವರ ಚಿಂತನೆ ಅವರ ಕೊನೆಯ ವರ್ಷದಲ್ಲಿ ದೇಶ, ಭಾಷೆ, ಜಾತಿ, ಮತ, ಸಿದ್ಧಾಾಂತಗಳು ಹಾಗೂ ಸಾಹಿತ್ಯದ ಮೆರಗನ್ನು ಹೆಚ್ಚಿಿಸಿದರು. ವಿಶ್ವದೃಷ್ಟಿಿಯನ್ನು ಹೊಂದಿದ್ದು ಅದರ ಲವೇ ವಿಶ್ವಮಾನವ ಸಂದೇಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರ ದೇವಿ ಮಠಪತಿ, ಪ್ರಾಾಂಶುಪಾಲ ಗುರಪ್ಪಾಾಚಾರ್ಯ, ಗುರುಪ್ರಸಾದ್ ವೈದ್ಯ, ದುರ್ಗಪ್ಪ ಪೂಜಾರಿ, ಹಳಳಪ್ಪ ಪೂಜಾರಿ, ಬಸವರಾಜ್ ಮಾನೆಗಾರ್, ಸುವರ್ಣ ಹೂಗಾರ, ಶಾಂತ ಸಜ್ಜನ್, ರಾಮಲಿಂಗಪ್ಪ ಮುಂತಾದ ಹಿರಿಯ ಸಾಹಿತಿಗಳು ವಿದ್ಯಾಾರ್ಥಿಗಳು ಪಾಲ್ಗೊೊಂಡಿದ್ದರು. ಕುವೆಂಪು ರವರ ಬಗ್ಗೆೆ ಸ್ವ ರಚಿತ ಕವನ ವಾಚಿಸಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ವಿಶ್ವಮಾನವ ದಿನಾಚರಣೆ ಸಾಹಿತ್ಯ ಲೋಕಕ್ಕೆ ಕುವೆಂಪು ಮಾದರಿ

