ಸುದ್ದಿಮೂಲ ವಾರ್ತೆ
ಸಿರವಾರವ,ಮೇ31: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನ ಬುಧವಾರ ಆಚರಿಸಲಾಯಿತು.
ನಂತರ ಡಾ. ಪರಿಮಳ ಮೈತ್ರಿ ಮಾತನಾಡಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ, ತಂಬಾಕಿನಲ್ಲಿರುವ ನಿಕೋಟಿನ್ ವಿಷಕಾರಕ ಅಂಶವು ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತ, ನಿರ್ಜೀವ ಜನನ, ಅವಧಿ ಪೂರ್ವಜನನ ಮತ್ತು ಕಡಿಮೆ ತೂಕದ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ. ತಂಬಾಕು ಸೇವನೆ ಬಾಯಿ ನಾಲಿಗೆ ಗಂಟಲು ಮತ್ತು ಶ್ವಾಸಕೋಶದ ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗುತ್ತದೆ.
ಹೃದಯ, ಮೆದುಳಿನ ಮೇಲೆ ದುಷ್ಪರಿಣಾಮ ಬೀರುವ ಕಾರ್ಬನ್ ಮೋನಾಕ್ಸೈಡ್ ತಂಬಾಕಿನಲ್ಲಿರುತ್ತದೆ. ಸಿಗರೇಟು, ಬೀಡಿ, ಗುಟ್ಕಾ ಇವುಗಳ ಸೇವನೆಯಿಂದ ಜೀವಿತಾವಧಿಯಲ್ಲಿ ನಾಲ್ಕು ನಿಮಿಷಗಳನ್ನು ಕಡಿತಗೊಳಿಸುತ್ತದೆ. ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು ಹಾಗೂ ಮಹಿಳೆಯರಲ್ಲಿ ಗರ್ಭಪಾತ, ಬಂಜೆತನ ಉಂಟಾಗುತ್ತದೆ. ಆದ್ದರಿಂದ ತಂಬಾಕು ಸೇವನೆಯಿಂದ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಿ ಸದೃಢ ಆರೋಗ್ಯವಂತ ಸಮಾಜವನ್ನು ಕಟ್ಟೋಣ, ಈ ವರ್ಷದ ಘೋಷವಾಕ್ಯ ನಮಗೆ ಆಹಾರ ಬೇಕು ತಂಬಾಕು ಬೇಡಾ ವಿಷಯದ ಬಗ್ಗೆ ವೈದ್ಯಾಧಿಕಾರಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಸುನಿಲ ಸರೋದೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಹಿರಿಯ ಆರೋಗ್ಯ ಸಹಾಯಕ ಶರಣಬಸವ ಇದ್ದರು.