ಸುದ್ದಿಮೂಲ ವಾರ್ತೆ ಮಾನ್ವಿ, ಜ.28:
ಇತ್ತೀಚೆಗೆ ನಿಧನರಾದ ತಿಂಥಣಿ ಬ್ರಿಿಡ್ಜ್ ಶ್ರೀ ಕಾಗಿನೆಲೆ ಮಹಾಸಂಸ್ಥಾಾನ ಕನಕ ಗುರುಪೀಠ ಶಾಖಾಮಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಾಮೀಜಿಯವರ ಪುಣ್ಯಾಾರಾಧನೆ ಜ.31 ರಂದು ಹಾಗೂ ೆ.1 ರಂದು ನುಡಿನಮನ ಕಾರ್ಯಕ್ರಮವನ್ನು ತಿಂಥಣಿ ಮಠದಲ್ಲಿ ಹಮ್ಮಿಿಕೊಳ್ಳಲಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಸತ್ಯನಾರಾಯಣ ಆರ್. ಮುಸ್ಟೂರ್ ವಕೀಲರು ತಿಳಿಸಿದರು.
ಬುಧವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಕಾಗಿನೆಲೆ ಮಹಾಸಂಸ್ಥಾಾನ ಕನಕ ಗುರುಪೀಠದ ಶ್ರೀ ನಿರಂಜನ್ ನಂದಪುರಿ ಸ್ವಾಾಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು ನಾಡಿನ 150 ಕ್ಕೂ ಹೆಚ್ಚು ವಿವಿಧ ಮಠದ ಶ್ರೀಗಳು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ೆ.1 ರಂದು ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಿಗಳಾದ ಸಿದ್ದರಾಮಯ್ಯನವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಸಚಿವರಾದ ಸತೀಶ ಜಾರಕಿಹೊಳಿ, ಬೈರತಿ ಸುರೇಶ, ಎನ್.ಎಸ್.ಬೋಸರಾಜು, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಕಾರಣ ತಾಲೂಕಿನ ಸಮಸ್ತ ಜಾತಿಯ ಸಮುದಾಯದವರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸುವಂತೆ ಸತ್ಯನಾರಾಯಣ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮಾನಂದಪುರಿ ಸ್ವಾಾಮೀಜಿಯವರ ಪುಣ್ಯಾಾರಾಧನೆ ಕಾರ್ಯಕ್ರಮದ ಭಿತ್ತಿಿ ಪತ್ರ ಬಿಡುಗಡೆಗೊಳಿಸಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಮುಖಂಡರಾದ ಶಿವಶಂಕರಗೌಡ ಬಾಗಲವಾಡ, ಭೀಮನಗೌಡ ಮುಸ್ಟೂರು, ಈರಣ್ಣ ಮರ್ಲಟ್ಟಿಿ, ಮಹಾಂತೇಶ ಓಲೇಕಾರ, ರಾಹುಲ್ ಕಲಂಗೇರಾ, ಅಜೇಯ ಕುಮಾರ, ದುರುಗಪ್ಪ ತಡಕಲ್, ಚಂದ್ರಶೇಖರ ಬೈಲ್ ಮರ್ಚೆಡ್, ಮಾಳಿಂಗರಾಯ ಪಾತಾಪುರ, ಬಸವರಾಜ ಕನ್ನಾಾರಿ, ರವಿಕುಮಾರ ಮುಂತಾದವರು ಇದ್ದರು.
ಜ.31 ರಂದು ಶ್ರೀ ಸಿದ್ದರಾಮಾನಂದಪುರಿ ಶ್ರೀಗಳ ಪುಣ್ಯಾರಾಧನೆ, ೆ.1 ರಂದು ನುಡಿನಮನ

