ಶ್ರೀಕಾಂತ್ ಬಿರಾದಾರ್/ಸುನೀಲ್ ಜಿರೋಬೆ ಔರಾದ್, ಜ.10:
ದಿನದೂಡಿದರೆ ಶಿಕ್ಷಕರಿಗೆ ಸಂಬಳ ಬರುತ್ತದೆ. ವಿದ್ಯಾಾರ್ಥಿಗಳ ಕಥೆ ಏನು ? ಸರ್ಕಾರ ಗ್ರಾಾಮೀಣ ಭಾಗದಲ್ಲಿ ಶೈಕ್ಷಣಿಕ ಪ್ರಗತಿಗೆ ನಾನಾ ಕಸರತ್ತು ಮಾಡುತ್ತಿಿದೆ. ಆದರೆ, ಶಿಕ್ಷಕರ ಸಹಕಾರ ಇಲ್ಲದೇ ವಿದ್ಯಾಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಸನಾದೀತೆ ?
ಊಹುಂ…ಔರಾದ್ ತಾಲೂಕಿನ ತೆಲಂಗಾಣ ಗಡಿಯಲ್ಲಿರುವ ೆಮಾದೇವಲಾ ತಾಂಡಾದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಯಲ್ಲಿ ಇರುವುದೇ ಇಬ್ಬರು ಶಿಕ್ಷಕರು. ಅದರಲ್ಲಿ ಮುಖ್ಯ ಗುರುವೂ ಆಗಿರುವ ಶಿಕ್ಷಕಿ ಸುನೀತಾ ಗೈರು ಹಾಜರಿ. ರಜೆ ಹಾಕಿ ಹೋಗಿದ್ದಾರೆ ಎಂದು ಉಪಸ್ಥಿಿತರಿದ್ದ ಶಿಕ್ಷಕ ನಾಗಣ್ಣಾಾ ಬಿರಾದಾರ್ ಸಿದ್ಧ ಉತ್ತರ ನೀಡಿದ್ದಾರೆ.
ಒಟ್ಟು 29 ವಿದ್ಯಾಾರ್ಥಿಗಳು ಸದರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಸುದ್ದಿಮೂಲ ಪ್ರತಿನಿಧಿ ಭೇಟಿ ನೀಡಿದಾಗ 15 ವಿದ್ಯಾಾರ್ಥಿಗಳು ಹಾಜರಿದ್ದರು.
ಮಕ್ಕಳಿಗೆ ಶಿಕ್ಷಕರಾದವರು ಪಠ್ಯವಾರು ಬೋಧಿಸಬೇಕು. ವಿಶೇಷವಾಗಿ ಕನ್ನಡ, ಗಣಿತ ವಿಷಯಗಳ ಬೋಧನೆ ಮಾಡಬೇಕು. ಅವ್ಯಾಾವು ಮಾಡದೇ ಇದ್ದರೆ ಮಕ್ಕಳು ಕಲಿಯುವುದಾದರೂ ಹೇಗೆ ? ೆಮಾದೇವಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಕನ್ನಡದ ಸರಳ ಪದ ಪರಿವರ್ತನೆ ಬರೆಯಲು ಸಾಧ್ಯವಾಗಿಲ್ಲ. ಮಕ್ಕಳ ಸ್ಥಿಿತಿ ನೋಡಿದರೆ ಕಲಿಕೆಯೇ ಇಲ್ಲ ಎಂಬುದು ಯಾರು ಬೇಕಾದರೂ ಊಹಿಸಬಹುದು. ಕನ್ನಡದ ಸರಳ ಪದಗಳು ಬರೆಯಲು ಹೇಳಿದಾಗ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಂತೆ ಇಲ್ಲೂ ಕೂಡ ತಪ್ಪುು-ತಪ್ಪಾಾಗಿ ಬರೆದಿದ್ದಾರೆ ವಿದ್ಯಾಾರ್ಥಿಗಳು.ಬಿಡದ ಇಒ
ಹಿಂದುಳಿದ ತಾಲೂಕು ಖ್ಯಾಾತಿಯ ಔರಾದ್ ಬಿಇಒ ರಂಗೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹೊರಬರುತಲ್ಲೇ ಇಲ್ಲ ಎಂದು ಕಾಣುತ್ತಿಿದೆ. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶಿಕ್ಷಕರು ಗೈರು ಹಾಜರಾಗುತ್ತಿಿದ್ದು, ಕಲಿಕೆ ಇಲ್ಲವೇ ಇಲ್ಲ ಎಂಬಷ್ಟರ ಮಟ್ಟಿಿಗೆ ಪರಿಸ್ಥಿಿತಿ ಬಿಗಡಾಯಿಸಿದೆ. ಈಗಾಗಲೇ ಸುದ್ದಿಮೂಲ ವರದಿ ಪರಿಣಾಮವಾಗಿ ತಾಲೂಕಿನ ಕೌಠಾ ಹಾಗೂ ಬಲ್ಲೂರ್ ಸರ್ಕಾರಿ ಶಾಲೆಗಳ ವರದಿ ನೋಡಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂಪ್ರೇೇರಿತ ದೂರು ದಾಖಲಿಸಿಕೊಂಡು ಶಿಕ್ಷಣ ಇಲಾಖೆಗೆ ನೋಟಿಸ್ ನೀಡಿದೆ. ಇಷ್ಟಾಾದರೂ ಕ್ಷೇತ್ರದ ಶಾಲೆಗಳ ಸ್ಥಿಿತಿ ಮಾತ್ರ ಸುಧಾರಣೆ ಕಂಡಿಲ್ಲ. ಬಿಇಒ ಕಚೇರಿ ಬಿಟ್ಟು ಹೊರಬಂದು ಶಾಲೆಗಳಿಗೆ ಭೇಟಿ ನೀಡುತ್ತಿಿಲ್ಲ. ಸಿಆರ್ಸಿ, ಬಿಆರ್ಸಿಗಳು ತಾಲೂಕಿನಲ್ಲಿ ಇದ್ದಾರಾ? ಎಂಬುದೇ ಅನುಮಾನ ಮೂಡಿಸುವಷ್ಟರ ಮಟ್ಟಿಿಗೆ ಪರಿಸ್ಥಿಿತಿ ಬಿಗಡಾಯಿಸಿದೆ. ಮೇಲಾಧಿಕಾರಿಗಳು ಈ ಬಗ್ಗೆೆ ಗಮನಹರಿಸದಿದ್ದರೆ ಪರಿಸ್ಥಿಿತಿ ಮತ್ತಷ್ಟು ಹಳ್ಳ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.
ಗಡಿ ಭಾಗದಲ್ಲಿ ಶೈಕ್ಷಣಿಕ ಹಿನ್ನೆಡೆ : ಸಕಲ ಕೊರತೆಗಳ ೆಮಾದೇವಲಾ ತಾಂಡಾ ಶಾಲೆ ಮಕ್ಕಳಿಗೆ ಬರವಣಿಗೆಯೇ ಕಷ್ಟ !

