ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.25:
ಪತ್ರಕರ್ತರ ಪ್ರಾಾತಿನಿಧಿಕ ಸಂಸ್ಥೆೆಯಾದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರಿಗೆ ಸವಲತ್ತುಗಳನ್ನು ಒದಗಿಸುವ ವೇದಿಕೆಯಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕುಗಳ ಆಯೋಗ ಕಲಬುರಗಿ ಪೀಠದ ಆಯುಕ್ತರಾದ ವೆಂಕಟ್ ಸಿಂಗ್ ಹೇಳಿದರು.
ನಗರದ ವೀರಶೈವ ಕಲ್ಯಾಾಣ ಮಂಟಪದಲ್ಲಿ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಾಟಿಸಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರ ಹಳಿ ತಪ್ಪುುತ್ತಿಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿಿದೆ. ಪತ್ರಕರ್ತರ ಮೇಲಿನ ವಿಶ್ವಾಾಸ ಕಳೆದುಕೊಳ್ಳುತ್ತಿಿರುವುದು ಕಳವಳದ ಸಂಗತಿಯಾಗಿದೆ. ಪ್ರಜಾಪ್ರಭುತ್ವ ಉಳಿವಿನಲ್ಲಿ ಪತ್ರಿಿಕೆಗಳ ಪಾತ್ರವೂ ಮುಖ್ಯವಾಗಿದೆ. ಆದರೆ ವೃತ್ತಿಿ ಪರತೆಯ ಪತ್ರಕರ್ತರು ಹೆಚ್ಚಾಾಗಬೇಕಾಗಿದೆ. ಕಾರ್ಯನಿರತ ಪತ್ರಕರ್ತರ ಸಂಖ್ಯೆೆ ಹೆಚ್ಚಾಾಗುವುದರ ಜೊತೆಗೆ ಬದ್ಧತೆಯ ಪತ್ರಿಿಕಾ ಮಿತ್ರರು ಗಣನೀಯವಾಗಿ ಹೆಚ್ಚಳವಾಗಬೇಕೆಂದು ಹೇಳಿದರು.
ಪತ್ರಿಿಕಾ ಧರ್ಮಕ್ಕೆೆ ಕಪ್ಪುುಚುಕ್ಕೆೆಯಾಗಿ ಬೆಳೆಯುತ್ತಿಿರುವ ಕೆಲ ಪತ್ರಕರ್ತರನ್ನು ಹಾಗೂ ಪತ್ರಿಿಕೆಗಳ ಬಗ್ಗೆೆ ಎಚ್ಚರಿಕೆ ಇಟ್ಟುಕೊಂಡು ಅವರನ್ನು ಕಟ್ ಮಾಡುವ ಜವಾಬ್ದಾಾರಿ ರಾಜ್ಯಾಾಧ್ಯಕ್ಷರ ಮೇಲಿದೆ. ರಾಜ್ಯ ಮಟ್ಟದ ಪತ್ರಿಿಕೆಗಳು ಜಾಹೀರಾತು ಬೆನ್ನು ಹತ್ತಿಿರುವುದರಿಂದ ಪತ್ರಿಿಕಾ ಧರ್ಮವಿಗ ಪತ್ರಿಿಕೋದ್ಯಮವಾಗಿ ಮಾರ್ಪಟ್ಟಿಿದೆ ಎಂದರು.
ಪತ್ರಕರ್ತರ ಸಮಸ್ಯೆೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ದಿಟ್ಟ ಹೆಜ್ಜೆೆ ಇಟ್ಟಾಾಗ ಮಾತ್ರ ಪತ್ರಿಿಕಾ ವಲಯದ ಅದರಲ್ಲೂ ಗ್ರಾಾಮೀಣ ಭಾಗದ ವರದಿಗಾರರ ಬಾಳಿಗೆ ಅರ್ಥ ಬರಲು ಸಾಧ್ಯ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟೆೆ ಮಾತನಾಡಿ, ಯಾದಗಿರಿ ಜಿಲ್ಲಾ ಹಾಗು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ಕೂಡ ಐದು ವರ್ಷದ ಅವಧಿಯಲ್ಲಿ ಮುನ್ನಡೆಯಬೇಕು ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ ಮಾತನಾಡಿ, ಪತ್ರಕರ್ತರು ಒಂದೇ ಕುಟುಂಬದಂತೆ ಎಲ್ಲರನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡು ಹೋಗುವ ಮೂಲಕ ಯಾದಗಿರಿ ಜಿಲ್ಲಾ ಸಂಘ ಮುನ್ನಡೆಯಲಿ. ಸುದ್ದಿ ಬಿತ್ತರಿಸುವಾಗ ನಕಲು ಪದ್ದತಿ ಕೈ ಬಿಡಬೇಕೆಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿದರು.
ದಿಕ್ಸೂಚಿ ಮಾತುಗಳಾಡಿದ ರಾಜ್ಯಾಾಧ್ಯಕ್ಷ ಶಿವಾನಂದ ತಗಡೂರು, ನಾನು ಪತ್ರಕರ್ತ ಎಂದು ಬರುವವರು ಸಂಖ್ಯೆೆ ಹೆಚ್ಚಾಾಗಿದೆ. ವಿಸಿಟಿಂಗ್ ಕಾರ್ಡ್ ಪತ್ರಕರ್ತರ ನಡುವೆ ನೈಜ ಪತ್ರಕರ್ತರನ್ನು ಉಳಿಸಿಕೊಳ್ಳಬೇಕಿದೆ. ವಿಶ್ವಾಾಸಾರ್ಹ ವರದಿಗಳಿಂದ ಮಾತ್ರ ಒಬ್ಬ ಸೀರಿಯಸ್ ವರದಿಗಾರ ಹೊರಹೊಮ್ಮುತ್ತಾಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಚುನಾವಣೆಯಲ್ಲಿ ಸೋಲಿಸಲು ಶತಪ್ರಯತ್ನ ಮಾಡಿದರೂ ಅಪಪ್ರಚಾರಕ್ಕೆೆ ಸೋಲಾಗಿದೆ. ಅಭಿವೃದ್ಧಿಿಗೆ ಮತ ನೀಡಿದ ಪತ್ರಕರ್ತರು ಭರ್ಜರಿ ಗೆಲುವು ಸಾಧಿಸಲು ಕಾರಣರಾಗಿದ್ದಾರೆ. ಅವರ ಬೆನ್ನೆೆಲುಬಾಗಿ ಸದಾ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪತ್ರಕರ್ತರ ವಿಶ್ವಾಾಸ ಉಳಿಸುವ ಕೆಲಸ ಮಾಡುತ್ತೇನೆ. ಏನಿದ್ದರೂ ನೇರವಾಗಿ ಹೇಳುತ್ತೇನೆ. ಬೆನ್ನಿಿಗೆ ಚೂರಿ ಹಾಕುವ ಕೆಲಸ ಮಾಡಲ್ಲ. ಈಗ ಚುನಾವಣೆ ಮುಗಿದಿದೆ. ಅಸೂಯೆ, ದ್ವೇಷ ಮರೆತು ಎಲ್ಲರೂ ಸೇರಿ ಸಂಘದ ತೇರನ್ನು ಎಳೆಯಬೇಕಾಗಿದೆ ಎಂದರು.
ಇದೇವೇಳೆ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನರಸಪ್ಪ ನಾರಾಯಣೋರ್ ಅವರನ್ನು ಸನ್ಮಾಾನಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.
ಜೆಡಿಎಸ್ ನಗರ ಘಟಕ ಅಧ್ಯಕ್ಷ ಬಂದಪ್ಪ ಅರಳಿ, ಪತ್ರಕರ್ತರಾದ ಭವಾನಿಸಿಂಗ್ ಠಾಕೂರ, ದೇವೇಂದ್ರಪ್ಪ ಕಪನೂರ ವೇದಿಕೆಯಲ್ಲಿ ಇದ್ದರು. ಪತ್ರಕರ್ತರಾದ ಡಾ.ಎಸ್.ಎಸ್.ನಾಯಕ ಸ್ವಾಾಗತಿಸಿದರು. ಮಹೇಶ ಪತ್ತಾಾರ ನಿರೂಪಿಸಿ ವಂದಿಸಿದರು. ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಕಾಂಗ್ರೆೆಸ್ ಮುಖಂಡ ಶರಣಪ್ಪ ಮಾನೇಗಾರ, ಕಲಬುರಗಿ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಭವಾನಿ ಸಿಂಗ್, ದೇವಂದ್ರಪ್ಪ ಕಪನೂರು, ಕನ್ನಡ ಪರ ಹೋರಾಟಗಾರ ಶರಣು ಬಿ ಗದ್ದುಗೆ ಇದ್ದರು.
ಹೊಗಳಿಕೆ, ತೆಗಳಿಕೆ ಆಚೆಗೆ ಪತ್ರಕರ್ತರು ಕೆಲಸ ಮಾಡಬೇಕು. ಸಮಾಜದ ಭಾಗವಾಗಿ ನಡೆ ನುಡಿಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡು ಪತ್ರಕರ್ತರು ಮೂಡಬೇಕಿದೆ. ನೈಜ ಪತ್ರಕರ್ತರು ಮಾತ್ರ ನಮ್ಮ ಸಂಘಟನೆಗೆ ಅವಶ್ಯವಿದೆ. ಜಿಲ್ಲಾ, ತಾಲೂಕ ಘಟಕಗಳಲ್ಲಿ ಪದಾಧಿಕಾರಿಗಳನ್ನು ಹೊಂದಿದ ದೊಡ್ಡ ಸಂಘವನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಜಿಲ್ಲಾ, ತಾಲೂಕು ಹಾಗೂ ಹೋಬಳಿ ವರದಿಗಾರರ ಮೇಲಿದೆ. ಸಂಘದ ಅಧಿಕೃತ ಕಾರ್ಡ್ ಇದ್ದವರನ್ನು ಬಿಟ್ಟು ವಿಸಿಟಿಂಗ್ ಕಾರ್ಡ್ ಪತ್ರಕರ್ತರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಶಿವಾನಂದ ತಗಡೂರು, ರಾಜ್ಯಾಾಧ್ಯಕ್ಷ
ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪತ್ರಿಿಕೋದ್ಯಮ ವಿಶ್ವಾಾಸದಿಂದ ದೂರ ಸರಿಯುತ್ತಿಿದೆ : ವೆಂಕಟ್ಸಿಂಗ್

