ಸುದ್ದಿಮೂಲ ವಾರ್ತೆ ಯಾದಗಿರಿ, ಜ.13:
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ , ವೆಚ್ಚ ಇಲಾಖೆ ಜಂಟಿ ನಿರ್ದೇಶಕ ಮಹೇಶ್ ಕುಮಾರ್ ನೇತೃತ್ವದ ಆಂತರಿಕ ಸಚಿವಾಲಯದ ಕೇಂದ್ರ ತಂಡವು ಮಂಗಳವಾರ ಜಿಲ್ಲೆಯಲ್ಲಿ ಅತೀವೃಷ್ಠಿಿಯಿಂದಾದ ಬೆಳೆ, ಮೂಲಸೌಕರ್ಯ ಹಾನಿ ಕುರಿತು ಸಮೀಕ್ಷೆೆ ನಡೆಸಿತು. ತಂಡದಲ್ಲಿ ರಾಜ್ಯ ಪ್ರಕೃತಿ ವಿಕೋಪದ ನಿರ್ವಹಣಾ ಪ್ರಾಾಧಿಕಾರದ ಆಯುಕ್ತರಾದ ಹೊಣ್ಣಂಬ. ಎಸ್ ಹಾಗೂ ಇಸ್ರೋೋ ವಿಜ್ಞಾನಿ ಆಕಾಶ ಮೋಹನ್ ಭಾಗವಹಿಸಿ ಪರಿಶೀಲನೆ ನಡೆಸಿದರು.
ಬೆಳಿಗ್ಗೆೆ ಸಮೀಕ್ಷೆೆ ಪೂರ್ವ ದಲ್ಲಿ ಜಿಲ್ಲಾಡಳಿತ 2025 ನೇ ಸಾಲಿನ ಪ್ರವಾಹ ಹಾಗೂ ಅತೀ ವೃಷ್ಟಿಿಯಿಂದಾದ ಬೆಳೆ, ಮೂಲಸೌಕರ್ಯಗಳ ಹಾನಿ ಕುರಿತು ಪೂರ್ವಾಹ್ನ ಮಾಹಿತಿ ಪಡೆದ ತಂಡವು ಬೆಳಿಗ್ಗೆೆ ಭೀಮಾ ನದಿಗೆ ಇರುವ ಬ್ರಿಿಡ್ಜ್ ವ್ಯಾಾಪ್ತಿಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಭತ್ತದ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು. ನಂತರ ನಾಯ್ಕಲ್ ವ್ಯಾಾಪ್ತಿಿಯಲ್ಲಿ ಹಾನಿಯಾದ ಮತ್ತು , ಹತ್ತಿಿ ಬೆಳೆ ಹಾನಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ನಂತರ ಭೀಮಾ ನದಿ ತೀರದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಟ್ರಾಾನ್ಸ್ ಾರ್ಮರ್, ವಿದ್ಯುತ್ ಪರಿಕರ, ಹಾಗೂ ಕಂಬಗಳ ಹಾನಿ ಹಾಗೂ ಬದಲಾವಣೆ ಕುರಿತು ಹಾಗೂ ವಡಗೇರಾ ವ್ಯಾಾಪ್ತಿಿಯಲ್ಲಿ ಅತಿವೃ ಷ್ಠಿಿಯಿಂದಾದ ಹಾನಿ ಕುರಿತು ಪರಿಶೀಲನೆ ನಡೆಸಿ ನಂತರ ಭೀಮಾ ನದಿ ಮೇಲಿರುವ ಬ್ರೀಡ್ಜ್ ಮೇಲೆ ರಸ್ತೆೆ ಹಾಳಾಗಿದ್ದರ ಮತ್ತು ದುರಸ್ತಿಿಗೊಳಿಸಿದ ಬಗ್ಗೆೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಬಳಿಕ ಜಿಲ್ಲಾಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಆದ ಭಾರಿ ಮಳೆ ಹಾಗೂ ಪ್ರವಾಹದಿಂದ ಸಂಭವಿಸಿದ ಬೆಳೆ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿರುವ ಕುರಿತು ಪರಿಶೀಲಿಸಲು ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಅಂತರ ಸಚಿವಾಲಯ ತಂಡಕ್ಕೆೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಅವಶ್ಯಕ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಭಾರತ ಸರ್ಕಾರದ ವಿತ್ತ ಸಚಿವಾಲಯ, ವಿತ್ತ ಇಲಾಖೆಯ ಜಂಟಿ ನಿರ್ದೇಶಕ ಮಹೇಶ ಕುಮಾರ ಹಾಗೂ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್ಆರ್ ಎಸ್ಸಿ), ಇಸ್ರೋೋ ಬಾಹ್ಯಾಾಕಾಶ ಇಲಾಖೆಯ ವಿಜ್ಞಾನಿಯಾದ ಆಕಾಶ ಮೋಹನ ಅವರ ತಂಡವು ಮುಂಗಾರು ಪ್ರವಾಹದ ಹಾನಿ ಕುರಿತು ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಭೀಮಾನದಿ ಪ್ರವಾಹ ಹಾಗೂ ಹೆಚ್ಚಿಿನ ಮಳೆಯಿಂದ ಹಾನಿಯಾದ ಬಗ್ಗೆೆ ಸಿದ್ಧಪಡಿಸಿದ ವರದಿ ಹಾಗೂ ಅಗತ್ಯ ಅನುದಾನದ ಮಾಹಿತಿ ನೀಡಿ, 2025ರ ಸೆಪ್ಟೆೆಂಬರ್ ತಿಂಗಳಲ್ಲಿ ದಾಖಲೆ ಪ್ರಮಾಣದ ಭೀಮಾನದಿಗೆ ಒಳ ಹಾಗೂ ಹೊರಹರಿವು ಮತ್ತು ಮಳೆಯಾಗಿದೆ. ಜಲಾಶಯ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಬಹುತೇಕ ಎಲ್ಲ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ನಾಶಗೊಂಡು ಸಾಕಷ್ಟು ಮೂಲಭೂತ ಸೌಕರ್ಯಗಳ ಹಾನಿಯಾಗಿದೆ.ಜಿಲ್ಲೆಯಲ್ಲಿ ಶೇ.34.63ರಷ್ಟು ಬೆಳೆ ಹಾನಿ ಸಂಭವಿಸಿದೆ ಎಂದು ಕೇಂದ್ರ ತಂಡಕ್ಕೆೆ ಅಂಕಿ ಸಂಖ್ಯೆೆಗಳ ಸಮೇತ ಮಾಹಿತಿ ನೀಡಲಾಯಿತು.
ಹಾನಿಯ ವಿವರವನ್ನು ಪರಿಹಾರ ತಂತ್ರಾಾಂಶದಲ್ಲಿ ದಾಖಲಿಸಿದ್ದು, ಮೂಲಕ ಬೆಳೆ ಪರಿಹಾರವು ನೇರವಾಗಿ ರೈತರ ಖಾತೆಗೆ ಜಮೆ ಆಗಿರುತ್ತದೆ. ಕೇಂದ್ರ ಸರಕಾರದ ಪುನರ್ ನಿರ್ಮಾಣದಲ್ಲಿ ನಿಯಮಾವಳಿಯಂತೆ ಮೂಲ ಸೌಕರ್ಯಗಳ ಹಾನಿಯ ವರದಿ ಸಿದ್ಧಪಡಿಸಿ ಸರ್ಕಾರಕ್ಕೆೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ, ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ್ ಸುಗೂರ, ಜೆಸ್ಕಾಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿಿತರಿದ್ದರು.
ಯಾದಗಿರಿ ಜಿಲ್ಲೆಗೆ ಕೇಂದ್ರ ತಂಡದಿಂದ ಅಧ್ಯಯನ ಭಾರಿ ಮಳೆ, ಪ್ರವಾಹ ನಷ್ಟದ ಪರಿಶೀಲನೆ ಶೇ. 34.63 ರಷ್ಟು ಬೆಳೆ ಹಾನಿ ; ಪರಿಹಾರ ಬಗ್ಗೆೆ ಮಾಹಿತಿ ನೀಡಿದ ಜಿಲ್ಲಾಡಳಿತ

