ಸುದ್ದಿಮೂಲ ವಾರ್ತೆ ಮಾನ್ವಿ, ಜ.15:
ಶಿವಯೋಗಿ, ಕಾಯಕಯೋಗಿ, ಕರ್ಮಯೋಗಿ ಶ್ರೀಸಿದ್ದರಾಮೇಶ್ವರರು ತೋರಿದ ಕಾಯಕ ತತ್ವ ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ನಿವೃತ್ತ ಶಿಕ್ಷಕ ಯಲ್ಲಪ್ಪ ನಿಲೋಗಲ್ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀಸಿದ್ದರಾಮೇಶ್ವರರ 854 ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಾಸ ನೀಡಿ ಮಾತನಾಡಿದರು.
ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಕೆರೆ ಕಟ್ಟೆೆಗಳನ್ನು, ಸಾಮೂಹಿಕ ವಿವಾಹಗಳು ಸೇರಿದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಇಡೀ ಸಮಾಜಕ್ಕೆೆ ಕೊಡುಗೆಯಾಗಿ ನೀಡಿ ಕರ್ಮಯೋಗಿ ಎನಿಸಿಕೊಂಡಿದ್ದಾರೆ.
ಶಿವಯೋಗಿ ಸಿದ್ದರಾಮೇಶ್ವರರು 68 ಸಾವಿರ ವಚನ ಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು ಇಂತಹ ಮಹಾಪುರುಷರನ ಆರಾಧಕರಾದ ಭೋವಿ ಸಮಾಜ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದರ ಜೊತೆಗೆ ಕುಲಕಸುಬುಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾಾರ್ ಭೀಮರಾಯ ರಾಮಸಮುದ್ರ, ಗ್ರೇೇಡ್-2 ತಹಸೀರ್ಲ್ದಾಾ ಅಬ್ದುಲ್ ವಾಹೀದ್ ಮಾತನಾಡಿದರು.
ಸನ್ಮಾಾನ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿಿರುವ ಹಿರಿಯ ಪತ್ರಕರ್ತ ಹನುಮಂತಪ್ಪ ಕೊಟ್ನೆೆಕಲ್, ನೀರಮಾನ್ವಿಿ ಗ್ರಾಾ.ಪಂ.ಮಾಜಿ ಅಧ್ಯಕ್ಷ ಬಸವರಾಜ ಕೋಳಿ ಕ್ಯಾಾಂಪ್, ಮಲ್ಲಿಕಾರ್ಜುನ ಪೂಜಾರಿ ನೀರಮಾನ್ವಿಿ, ಬಸವರಾಜ ಭಜಂತ್ರಿಿ, ಬಸ್ಸಪ್ಪ ಮದ್ಲಾಾಪುರ ಇವರನ್ನು ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ, ಭೋವಿ ಸಮಾಜ ಒಕ್ಕೂಟ ಸಮಿತಿ ಅಧ್ಯಕ್ಷ ಆನಂದ ಭೋವಿ ಮಾನ್ವಿಿ, ಮುಖಂಡರಾದ ಪರಶುರಾಮ ಭಜಂತ್ರಿಿ ನಕ್ಕುಂದಿ, ಸಂತೋಷಕುಮಾರ, ಕರಿಯಪ್ಪ ಕೋಳಿಕ್ಯಾಾಂಪ್, ಆನಿಲಕುಮಾರ ಮುದ್ದಂಗುಡ್ಡಿಿ, ರೇಣುಗೋಪಾಲ ಭೋವಿ, ಹುಲಿಗೆಪ್ಪ ಮಾನ್ವಿಿ, ಅಮರೇಶ ಕೋಳಿಕ್ಯಾಾಂಪ್, ಈರಪ್ಪ ಭೋವಿ, ಶಿವಪ್ಪ ಭೋವಿ, ರಮೇಶ್ ಭೋವಿ ಸೇರಿದಂತೆ ತಹಸೀಲ್ ಕಚೇರಿ ಸಿಬ್ಬಂದಿಗಳು ಇದ್ದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಕಾಯಕ ತತ್ವ ಅಳವಡಿಸಿಕೊಳ್ಳಲು ಯಲ್ಲಪ್ಪ ನಿಲೋಗಲ್ ಸಲಹೆ

