ಸುದ್ದಿಮೂಲವಾರ್ತೆ
ಕೊಪ್ಪಳ,ಅ.6: ಯಪ್ಪ ಈಗಷ್ಟೆ ಸ್ವಲ್ಪ ಮಳೆಯಾಗೈತಿ ಅದಕ್ಕ ಈಗ ಹೊಲ ಹಸಿರೈತಿ ಆದ್ರ ಈಗಿರುವ ಸಜ್ಜಿ ಏನೂ ಆಗೋದಿಲ್ಲ ಎಂದು ಬಂಡಿ ಗ್ರಾಮದ ಶರಣಮ್ಮ ರೊಟ್ಟಿ ಹೇಳಿದರು.
ಅವರು ಇಂದು ಕೊಪ್ಪಳಕ್ಕೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತ ಮಹಿಳೆಯು ಅಳಲು ಹೇಳಿದರು. ಕೇಂದ್ರದ ತಂಡದಲ್ಲಿ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್, ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌ ಅವರನ್ನೊಳಗೊಂಡ ತಂಡದಿಂದ ಪರಿಶೀಲನೆ ನಡೆಸಿದರು.
ಇದೇ ವೇಳೆ ಡೊಣ್ಣೆಗುಡ್ಡದ ಚಂದ್ರಶೇಖರ ಬಡಿಗೇರ ಎಂಬುವವರ ಮೆಕ್ಕೆಜೋಳದ ಹೊಲವನ್ನು ವೀಕ್ಷಿಸಿದರು.
ಇದೇ ವೇಳೆ ತರಾತುರಿಯಲ್ಲಿ ಬರ ವೀಕ್ಷಣೆ ಮಾಡಿದ ಬರ ತಂಡ, ಬೆನಕನಾಳದಲ್ಲಿ ಮಲ್ಲಪ್ಪ ಬಿಂಗಿಕೊಪ್ಪ ಎಂಬುವವರ 3 ಎಕರೆಯಲ್ಲಿ ಮೆಕ್ಕೆಜೋಳ ಸಂಪೂರ್ಣವಾಗಿ ಹಾಳಾಗಿದೆ. ಈ ಪ್ರದೇಶವನ್ನು ವೀಕ್ಷಿಸಲು ಆಗ್ರಹಿಸಿದರು. ಆದರೆ ಬರದಿರುವದರಿಂದ ವಿಷ ಕುಡಿಯುತ್ತೇನೆ ಎಂದು ಹೇಳಿದರು.
ಎಡವಿದ ಜಿಲ್ಲಾಡಳಿತ: ಕೇಂದ್ರ ಬರ ಅಧ್ಯಯನಕ್ಕೆ ಬಂದ ತಂಡಕ್ಕೆ ತೀವ್ರ ಏದುರಿಸುತ್ತಿರುವ ಪ್ರದೇಶ ತೋರಿಸಬೇಕಿತ್ತು. ಆದರೆ ಜಿಲ್ಲಾಡಳಿತವು ತೋರಿಸಿದ್ದು ಹಸಿರು ಇರುವ ಪ್ರದೇಶವಾಗಿದೆ. ಇಲ್ಲಿ ಭೂಮಿಯಲ್ಲಿ ಹಸಿರಿನಿಂದ ಕೂಡಿತ್ತು. ಈ ಸಂದರ್ಭದಲ್ಲಿ ಸರಿಯಾದ ಪ್ರದೇಶ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ತೀವ್ರ ಬರ ಪ್ರದೇಶ ತೋರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂತು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಳಿನ ಅತುಲ್ ಬರ ಅಧ್ಯಯನ ತಂಡಕ್ಕೆ ಸರಿಯಾದ ಮಾಹಿತಿ ನೀಡಿದ್ದೇವೆ.ಒಂದು ಕಡೆ ಮಳೆಯಾಗಿದ್ದರೂ ಇಳುವರಿ ಬಾರದ ಸ್ಥಿತಿ ಇದೆ. ನಾವು ಗ್ರೌಂಡ ಟ್ರೂತ್ ಸರ್ವೆ ಪ್ರಕಾರ ಬರ ತಂಡಕ್ಕೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1430 ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ. ಎನ್ ಡಿಆರ್ ಎಫ್ ನಿಯಮ ಪ್ರಕಾರ 840 ಕೋಟಿ ರೂಪಾಯಿಯಷ್ಟು ಹಾನಿ ಸಂಭವಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಳಿನ ಅತುಲ್, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿದಂತೆ ಹಲವರು ಇದ್ದರು.