ಸುದ್ದಿಮೂಲ ವಾರ್ತೆ
ಆನೇಕಲ್, ಮೇ 11: ತಾಲೂಕಿನ ಯಾರಂಡಹಳ್ಳಿ ಕೇಂಬ್ರಿಡ್ಜ್ ಪಬ್ಲಿಕ್ ಹೈಸ್ಕೂಲ್ನಲ್ಲಿ ಈ ಬಾರಿಯೂ ಈ ಬಾರಿಯು ಸತತವಾಗಿ ಶೇ 96 ಪರ್ಸೆಂಟೇಜ್ ಫಲಿತಾಂಶ ಬಂದಿರುವುದು ಸಂತಸ ತಂದಿದೆ ಎಂದು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿಯಾದ ಕಾಳಿನಾಥ್ ಸವಿತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯ 625 ಅಂಕಗಳ ಪೈಕಿ ಐಶ್ವರ್ಯಾ 616, ವಿಷ್ಣುವರ್ಧನ್ 605, ಮೋನಾಸ್ಮಿತಾ 594 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಒಟ್ಟಾರೆ ಶಾಲೆಗೆ ಶೇ 96ರಷ್ಟು ಫಲಿತಾಂಶ ಬಂದಿದೆ.
ಶಾಲೆಯ ಕಾರ್ಯದರ್ಶಿ, ಟ್ರಸ್ಟಿ, ಶಿಕ್ಷಕರಾಗಿ, ಪ್ರಿನ್ಸಿಪಲ್ ಆಗಿ ಸುಮಾರು ಹದಿನೈದು ವರ್ಷಗಳಿಂದ ಸತತವಾಗಿ ಇ ಎಲ್ಲಾ ಜವಬ್ದಾರಿಗಳನ್ನು ನಿಬಾಯಿಸುತ್ತಿರುವ ಕಾಳಿನಾಥ್ ಹಾಗೂ ಸವಿತಾ ದಂಪತಿಗಳ ಪರಿಶ್ರಮದ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಶಾಲೆಯ ಶಿಕ್ಷಕ- ಶಿಕ್ಷಕಿಯರು ಸಹ ಟಾಪ್ ಬಂದ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ಈ ಭಾಗದ ದುಬಾರಿ ಶಾಲೆಗಳಿಗೆ ಸೆಡ್ಡು ಹೊಡೆದು ಅತಿ ಕಡಿಮೆ ಶುಲ್ಕದಲ್ಲಿ ಕೈಗೆಟಕುವ ಶುಲ್ಕದಲ್ಲಿ ವಿಧ್ಯಾಭ್ಯಾಸ ನೀಡುತ್ತಿರುವ ಕಾಳಿನಾಥ್ ಹಾಗು ಸವಿತಾ ದಂಪತಿಗಳಿಗೆ ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸತತವಾಗಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಶಾಲೆಗೆ ಶಿಕ್ಷಣ ಇಲಾಖೆ ಸಹ ಪ್ರಶಸ್ತಿ ನೀಡಿ ಸನ್ಮಾನಿಸಿದೆ.