ಸುದ್ದಿಮೂಲ ವಾರ್ತೆ,
ಮೈಸೂರು, ಮೇ 1: ವರುಣಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆಗಿಳಿದಿದ್ದು, ಅವರು ಜಯ ಗಳಿಸಲು ಬೆಂಬಲ ನೀಡಬೇಕು ಎಂದು ವೀರಶೈವ ಲಿಂಗಾಯತ ಮುಖಂಡರಲ್ಲಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಮನವಿ ಮಾಡಿದರು.
ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವೀರಶೈವ ಲಿಂಗಾಯತ ಮುಖಂಡರ ಸಭೆ ಹಾಗೂ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವನ್ನು ಸೋಮವಾರ ರಾಹುಲ್ ಕಲ್ಯಾಣ ಮಂಟಪದಲ್ಲಿ ಉದ್ಕಾಟಿಸಿ ಮಾತನಾಡಿದರು.
ವರುಣಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಈ ಹಿಂದೆ ನನ್ನ ತಂದೆ ಸಿದ್ಧರಾಮಯ್ಯ ಅವರ ಗೆಲುವಿಗೆ ಹಾಗೂ ಸಿಎಂ ಆಗಲು ಬೆಂಬಲಿಸಿದ್ದೀರಿ. ಹಾಗೆಯೇ ನಾನು ಶಾಸಕನಾಗಲು ಸಹ ವೀರಶೈವ ಲಿಂಗಾಯತ ಸಮುದಾಯ ನೀಡಿರುವ ಸಹಕಾರ ನಾನು ಎಂದು ಮರೆಯುವುದಿಲ್ಲ ಎಂದು ಹೇಳಿದರು.
ಈ ನಡುವೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತ ಮುಖಂಡರುರನ್ನ ಗುರುತಿಸಿ ಉತ್ತಮ ಸ್ಥಾನಮಾನ ನೀಡಲಿದೆ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಭರವಸೆ ನೀಡಿದರು. ಸಭೆಯಲ್ಲಿ ಕೆಪಿಸಿಸಿ ಎಕಾರ್ಯದರ್ಶಿಗಳು
ಹಾಗೂ ವೀರಶೈವ ಮುಖಂಡ ವರುಣಾ ಮಹೇಶ್, ಗುರುಪಾದಸ್ವಾಮಿ, ದಾಸನೂರ್ ನಾಗೇಶ್, ನಂಜಪ್ಪ, ಕಿಳನಪುರ ಮಹಾದೇವಪ್ಪ ಇದ್ದರು.