ಸುದ್ದಿಮೂಲ ವಾರ್ತೆ ಮಾನ್ವಿ, ಜ.08:
ಯೋಗ ಗುರು ಅನ್ನದಾನಯ್ಯ ಅವರು ಗುರುವಾರ ಬೆಳಿಗ್ಗೆೆ ಕಲ್ಮಠ ಆಯುರ್ವೇದ ವೈದ್ಯ ವಿದ್ಯಾಾರ್ಥಿಗಳಿಗೆ ಆಯುರ್ವೇದ ಕಾಲೇಜು ಆಸ್ಪತ್ರೆೆ ಆವರಣದಲ್ಲಿ ಯೋಗಾಭ್ಯಾಾಸ ಹಾಗೂ ಷಟ್ ಕ್ರಿಿಯೆಗಳ ಅಭ್ಯಾಾಸ ಮಾಡಿಸಿದರು.
ಮೊದಲು ಕೆಲವು ಸರಳ ವ್ಯಾಾಯಾಮಗಳನ್ನು ಅಭ್ಯಾಾಸಿಸಿ ನಂತರ ಕಪಾಲಭಾತಿ, ಪ್ರಾಾಣಾಯಾಮ ಮತ್ತು ಅಲ್ಟರ್ನೇಟಿವ್ ಕಪಾಲಭಾತಿ ಪ್ರಾಾಣಾಯಾಮ ಜೊತೆಗೆ ಬಸಿಕ ಕಪಾಲಭಾತಿ ಹೇಳಿಕೊಡಲಾಯಿತು.
ತದನಂತರ ನಾಡಿ ಶುದ್ದಿ ಪ್ರಾಾಣಾಯಾಮ ಹೇಳಿಕೊಡಲಾಯಿತು. ಈ ಅಭ್ಯಾಾಸಗಳನ್ನು ಮಾಡುವುದರಿಂದ ಚಳಿಗಾಲದಲ್ಲಿ ಅಲರ್ಜಿ ಮತ್ತು ಸೈನಸ್ ನಂತಹ ಪರಿಣಾಮಕಾರಿ ಅಸ್ತಮ ಕೊನೆಗಾಣಿಸಬಹುದು. ಜಲ ನೇತಿ ಮತ್ತು ಸೂತ್ರ ನೇತಿ ಅಭ್ಯಾಾಸಗಳು ಉತ್ತಮ ಲಿತಾಂಶ ನೀಡಬಲ್ಲವು ಮತ್ತು ಯೋಗದ ಷಟ್ ಕ್ರಿಿಯೆಗಳು ಸ್ವಾಾಸ್ತ್ಯದ ಸಂಕೇತಗಳಾಗಿವೆ ಎಂದು ಯೋಗ ಗುರು ಅನ್ನದಾನಯ್ಯ ಅವರು ಹೇಳಿದರು.
ಈ ಯೋಗಾಭ್ಯಾಾಸದಲ್ಲಿ ಕಾಲೇಜಿನ ಪ್ರಾಾಚಾರ್ಯ ಜೀವನೇಶ್ವರಯ್ಯ ಹಿರೇಮಠ, ಆಡಳಿತಾಧಿಕಾರಿ ಉಮಾಶಂಕರ, ಉಪನ್ಯಾಾಸಕಿ ಪ್ರಿಿಯಾಂಕ ಹಾಗೂ ವೈದ್ಯ ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ಯೋಗ ಗುರು ಅನ್ನದಾನಯ್ಯ ಇವರಿಂದ ಕಲ್ಮಠ ಆಯುರ್ವೇದ ವೈದ್ಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ

