ಸುದ್ದಿಮೂಲವಾರ್ತೆ
ಕೊಪ್ಪಳ ಜು 02: ಸುದ್ದಿಗಳನ್ನು ನೋಡಿದರೆ ಕೆಲವೊಮ್ಮೆ ದುಃಖ, ಕೆಲವೊಮ್ಮೆ ಕಸಿವಿಸಿಯಾಗುತ್ತದೆ, ಆದರೆ ಓದುಗನಿಗೆ ಖುಷಿ ಕೊಡುವಂಥ ಸುದ್ದಿಗಳು ಬರಬೇಕೆಂದು ಈಶ್ವರೀಯ ವಿಶ್ವವಿದ್ಯಾಲಯದ ಯೋಗೀನಿ ಅಕ್ಕ ಹೇಳಿದರು.
ಇಂದು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ ಯಲ್ಲಿ ಮಾತನಾಡಿದರು.
ನಿತ್ಯ ಜಂಜಡದ ಬುದಕಿನಲ್ಲಿ ಅರ್ಧ ತಾಸಾದರೂ ಮನಸಿನ ಹಿಡಿತ ಹಾಗು ಆತ್ಮ ಹಾಗು ಪರಮಾತ್ಮ ಧ್ಯಾನಿಸಬೇಕು. ಒಳ್ಳೆಯ ಕೆಲಸವನ್ನು ಜನರಿಗೆ ನೀಡುವ ಕೆಲಸವನ್ನು ಮಾಧ್ಯಮದವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಇಂದಿನ ನವ ಮಾಧ್ಯಮದಲ್ಲಿ ಆತ್ಮಸಾಕ್ಷಿಯಾಗಿ ಪರವಾಗಿ ಕೆಲಸ ಮಾಡಬೇಕು. ಆತ್ಮಸಾಕ್ಷಿ ಪರವಾಗಿರುವಂಥ ಕೆಲಸವನ್ನು ಮಾಧ್ಯಮದವರು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾದೀಕ ಅಲಿ ಇಂದಿನ ಒತ್ತಡ ಕೆಲಸದ ಮಧ್ಯೆ ಪತ್ರಕರ್ತರು ಆಧ್ಯಾತ್ಮಿಕತೆಯನ್ನು ಹೊರಳಿ ಅವರು ಸತ್ಯದ ಕೆಲಸವನ್ನು ಮಾಡಬೇಕು. ಮನೆ ಮಠವನ್ನು ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾಧ್ಯಮದವರು ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಜೇಸಾಬ ಮಾತನಾಡಿದರು.
ವೇದಿಕೆಯಲ್ಲಿ ವೈ ಬಿ ಜೂಡಿ, ಸಿದ್ದಪ್ಪ ಹಂಚಿನಾಳ, ಹುಸೇನಪಾಷಾ, ಮಂಜುನಾಥ ಕೋಳುರು. , ಶಿವರಾಜ ನುಗಡೋಣಿ, ಹನುಮಂತ ಹಳ್ಳಿಕೇರಿ, ಸಾದೀಲ ಅಲಿ. ಯಮನೂರಪ್ಪ. ರವೀಂದ್ರ ತೋಟದ, ರಮೇಶ ಪವಾರ, ಲಲಿತಾ ಪುಜಾರ, ಸಂಗಮೇಶ ಹಿರೇಮಠ, ಫಕೀರಪ್ಪ ಗೋಟೂರು. ಅಕ್ಬರ್ ಕಾಲಿಮೀರ್ಚಿ, ಶ್ರೀಕಾಂತ ಅಕ್ಕಿ, ಮಲ್ಲು ಪರೋತಿ ಸೇರಿ ಹಲವರು ಇದ್ದರು