ಸುದ್ದಿಮೂಲ ವಾರ್ತೆ ಮಾನ್ವಿ, ಜ.22:
ಕರ್ನಾಟಕ ರಾಜ್ಯ ಯುವ ಆಯೋಗ ರಚಿಸುವಂತೆ ಒತ್ತಾಾಯಿಸಿ ಮುಖ್ಯಮಂತ್ರಿಿಗಳಿಗೆ ಬರೆದ ಮನವಿ ಪತ್ರವನ್ನು ಮಾನ್ವಿಿ ತಾಲೂಕಾ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ವತಿಯಿಂದ ತಹಸೀಲ್ದಾಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಅಧ್ಯಕ್ಷ ನಾಸೀರ್ ಅಲಿ ಮಾತನಾಡಿ ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚಿಿನ ಸಂಖ್ಯೆೆಯಲ್ಲಿ ಯುವ ಜನತೆ ಇದ್ದು ಅವರು ಶೈಕ್ಷಣಿಕ, ನಿರುದ್ಯೋೋಗ, ಮಾನಸಿಕ ಅಸ್ವಸ್ಥತೆ, ಸಾಮಾಜಿಕ ಭದ್ರತೆ ಮುಂತಾಗಿ ಅನೇಕ ಸಮಸ್ಯೆೆಗಳನ್ನು ಎದುರಿಸುತ್ತಿಿದ್ದಾರೆ. ಈ ಕಾರಣಗಳಿಂದಾಗಿ ಯುವ ಜನರು ಮಾದಕ ವ್ಯಸನಿಗಳಾಗಿ, ಸೈಬರ್ವಂಚನೆ ಮುಂತಾದ ಅಪರಾಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿಿದ್ದಾರೆ.
ಈ ಎಲ್ಲಾ ಸಮಸ್ಯೆೆಗಳ ಪರಿಹಾರಕ್ಕೆೆಂದು 2022 ರಲ್ಲಿ ಯುವ ಆಯೋಗ ರಚಿಸಲಾಗಿತ್ತು. ಆದರೆ ಇಂದಿನವರೆಗೂ ಯಾವುದೇ ತರಹದ ಕಾರ್ಯಾಚರಣೆ ನಡೆದಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಯುವ ಆಯೋಗ ರಚಿಸಿ ಯುವ ಜನರ ಅಭದ್ರತೆಗಳ ನಿವಾರಣೆಗಾಗಿ ಕ್ರಮಕೈಗೊಳ್ಳ ಲಾಗುತ್ತಿಿದೆ. ಕಾರಣ ರಾಜ್ಯದಲ್ಲಿ ಆಯೋಗ ರಚಿಸಿ ತನ್ನ ಕಾರ್ಯಾಚರಣೆಯ ಮೂಲಕ ಅಡ್ಡದಾರಿ ಹಿಡಿಯುತ್ತಿಿರುವ ಯುಕರನ್ನು ಸರಿದಾರಿಗೆ ತರಬೇಕು. ಯವಶಕ್ತಿಿಗೆ ಬಲ ತುಂಬಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇಮ್ರಾಾನ್ ಖಾನ್, ಜಿಲ್ಲಾ ಕಾರ್ಯ ದರ್ಶಿ ಮುಜಿಬುರ್ ರಹೆಮಾನ್, ಕಾರ್ಯದರ್ಶಿ ಮಹ್ಮದ್ ಾರೂಖ್, ಖಜಾಂಚಿ ಗೂರ್ ಖಾನ್ ಹೊನ್ನೂರ್ ಸಾಬ್, ಪದಾಧಿಕಾರಿಗಳಾದ ನರ್ಜೀ ನಾಯ್ಕ್, ಸದ್ದಾಂ ಹುಸೇನ್, ಕಿರಣ್ ಕುಮಾರ್ ರಾಠೋಡ್, ಅಮರೇಶ ನಂದಿಹಾಳ, ರಾಮಣ್ಣ ನಸಲಾಪುರ ಇದ್ದರು.
ಮಾನ್ವಿ : ರಾಜ್ಯದಲ್ಲಿ ಯುವ ಆಯೋಗ ಸ್ಥಾಪಿಸಲು ಯೂಥ್ ಮೂವ್ಮೆಂಟ್ ಮನವಿ

