ಸುದ್ದಿಮೂಲ ವಾರ್ತೆ
ಹೊಸಕೋಟೆ, ಮೇ 29: ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ ಕೊಡಿಸುವ ಕೆಲಸ ಪೋಷಕರಿಂದ ಆಗಬೇಕು ಎಂದು ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ತ.ರಾ.ವೆಂಕಟೇಶ್ ತಿಳಿಸಿದರು.
ನಗರದ ಎಂವಿಎ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಹೆಡ್ ಹೆಲ್ಡ್ ಐ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಹಣ ಮತ್ತು ವಿದ್ಯೆ ಎಂಬುದು ಜೀವನದಲ್ಲಿ ಅತ್ಯಮೂಲ್ಯ ಸಂಪತ್ತಾಗಿದೆ. ಆದರೆ ನಾವು ಸಂಪಾದನೆ ಮಾಡಿದ ಹಣವನ್ನು ಯಾರಾದರೂ ಅಪಹರಿಸಬಹದು. ಆದರೆ ನಾವು ಕಲಿತ ವಿದ್ಯೆ ನಮ್ಮಲ್ಲಿ ಇರುತ್ತೆ, ಬದಲಾಗಿ ಯಾರೊಬ್ಬರೂ ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪ್ರಥಮ ಆದ್ಯತೆ ಶಿಕ್ಷಣ, ಎರಡನೇ ಆದ್ಯತೆ ಹಣಕ್ಕೆ ನೀಡಬೇಕು ಎಂದರು.
ಪ್ರಸ್ತುತ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸಾಕಷ್ಟು ಬೇಡಿಕೆ ಇದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಕೌಶ್ಯಲ್ಯ ಆಧಾರಿತ ಶಿಕ್ಷಣ ಪಡೆದವರಿಗೆ ಉದ್ಯೋಗ ಕ್ಷೇತ್ರದಲ್ಲಿ ಆದ್ಯತೆ ನೀಡುತ್ತಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪಿಯುಸಿ ನಂತರ ಕೌಶಲ್ಯ ಆಧಾರಿತ ಶಿಕ್ಷಣ ಕಲಿಯಲು ಮುಂದಾಗಿ ಎಂದು ಸಲಹೆ ನೀಡಿದರು.
ಎಂವಿಎ ಐಟಿಐ ಕೇಂದ್ರದ ಪ್ರಾಂಶುಪಾಲ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ರಂಗದ ದಿನಗಳಲ್ಲಿ ಶಿಸ್ತು ಹಾಗೂ ಸಂಯಮ ಅತ್ಯಗತ್ಯವಾಗಿದೆ. ಶಿಕ್ಷಣದ ಜೊತೆಜೊತೆಗೆ ಒಂದಿಷ್ಟು ಸಂಸ್ಕಾರವನ್ನು ರೂಡಿಸಿಕೊಂಡರೆ ಬದುಕು ಉನ್ನತಿಯ ಹಾದಿಗೆ ಸಾಗುತ್ತದೆ. ಹೆಡ್ ಹೆಲ್ಡ್ ಐ ಫೌಂಡೇಷನ್ ವತಿಯಿಂದ ಐಟಿಐ
ವಿದ್ಯಾರ್ಥಿಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಕೌಶಲ್ಯ ಆಧಾರಿತ ತರಬೇತಿ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ತರಬೇತಿದಾರರ ಪ್ರಗತಿಗೆ ಮತ್ತಷ್ಟು ಪೂರಕವಾಗಲಿದೆ ಎಂದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ನಟರಾಜ್ ಎಂಎನ್ಆರ್, ಹೆಡ್ ಹೆಲ್ಡ್ ಐ ಫೌಂಡೇಷನ್ ಮುಖ್ಯ ತರಬೇತುದಾರರಾದ ಸುರಕ್ಷಾ, ಸುಧಾ, ಇನ್ಫೋಸಿಸ್ ಸಂಸ್ಥೆಯ ಉನ್ನತಿ ಫೌಂಡೇಷನ್ ಲಾವಣ್ಯ, ಎಂವಿಎ ಐಟಿಐ ಸಂಸ್ಥೆಯ ತರಬೇತಿ ಶಿಕ್ಷಕರಾದ ರವಿ, ಮೋಹನ್, ದೀಪಿಕಾ, ಹೇಮಲತಾ ಹಾಜರಿದ್ದರು.