ಸುದ್ದಿಮೂಲ ವಾರ್ತೆ
ನೆಲಮಂಗಲ, ಅ.08 : ನಾವುಗಳು ಪಕ್ಷವನ್ನು ಸಂಘಟಿಸುವುದರಿಂದ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ಜನರ ಸೇವೆ ಮಾಡಲಾಗುವುದು ಎಂದು ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಏಡೇಹಳ್ಳಿ ಗ್ರಾಮದಲ್ಲಿ ಭಾನುವಾರ ಖಾಸಗಿ
ಹೋಟಲ್ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಮ್ಮ ಪಕ್ಷ 10 ವರ್ಷಗಳಲ್ಲೇ ರಾಷ್ಟೀಯ ಪಕ್ಷ ವಾಗಿದೆ. ಯುವಕರಿಂದ ಪಕ್ಷ ಕಟ್ಟಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಘಟನೆ ಮಾಡಲು ಸಭೆ ಸೇರಿ ಯುವಕರಿಗೆ ಹೊಸ ಜವಾಬ್ದಾರಿ ನಿಡಿ ಸಂಘಟನೆಯನ್ಮು ಮಾಡುವುದಾಗಿ ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಡಾ.ವೆಂಕಟೇಶ್, ಅನುಭವಿಗಳು ಹಾಗೂ ಯುವಕರು ರಾಜ್ಯ ಚುಕ್ಕಾಣಿ ಹಿಡಿಯಲು ಪ್ರತಿ ಗ್ರಾಮದಲ್ಲಿ ಆಮ್ ಆದ್ಮಿ ಶಾಖೆ ಪ್ರಾರಂಭ ಮಾಡಿ ಮುಂದಿನ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ನಗರ ಸಭೆ, ಪುರಸಭೆ , ಬಿಬಿಎಂಪಿ ಹಾಗು ಲೋಕಸಭೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳನ್ನು ವಿಜಯಶಾಲಿಯಾಗಿ ಮಾಡಲು ಯುವಕರೂ ಸಂಘಟಿತರಾಗಿ ಎಂದರು.
ರಾಜ್ಯ ಕಾರ್ಯದರ್ಶಿ ಸುರೇಶ ಬಾಲಕೃಷ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಲೋಹಿತ್ ಕುಮಾರ, ಆಮ್ ಆದ್ಮಿ ಪದಾಧಿಕಾರಿಗಳಾದ ತ್ಯಾಮಗೊಂಡ್ಲು ಗಂಗಾಧರ್, ನೆಲಮಂಗಲ ಹರೀಶ, ಜನಾರ್ಧನ್, ಹರೀಶ್, ಸೋಲುರು ಪ್ರದೀಪ್ ಇದ್ದರು.