ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.28:
ಕುಕನೂರು ತಾಲೂಕಿನ ಗುತ್ತೂರು ಗ್ರಾಾಮದ ಮಲ್ಲಪ್ಪ ಹಾಗು ವಿಜಯಲಕ್ಷ್ಮಿಿ ಎಂಬ ದಂಪತಿಗಳಿಗೆ ಎರಡನೆಯ ಮಗುವೊಂದು ಶನಿವಾರ ಸಂಜೆ ಕುಕನೂರು ಆಸ್ಪತ್ರೆೆಯಲ್ಲಿ ಜನನವಾಗಿತ್ತು. ಆದರೆ ಮಗುವಿನ ಹೊಟ್ಟೆೆಯಲ್ಲಿ ಅಂಗಾಂಗಗಳು ಹೊರಗಡೆ ಇದ್ದವು. ಈ ಕಾರಣಕ್ಕಾಾಗಿ ತಕ್ಷಣ ಹೆಚ್ಚಿಿನ ಚಿಕಿತ್ಸೆೆ ಬೇಕಿತ್ತು. ಮಗುವನ್ನು ರಾತ್ರಿಿ 1 ಗಂಟೆಗೆ ಕೊಪ್ಪಳದ ತಾಯಿ ಮಗು ಆಸ್ಪತ್ರೆೆಗೆ ರವಾನಿಸಿದ್ದರು. ಇಲ್ಲಿ ಶಸ್ತ್ರ ಚಿಕಿತ್ಸೆೆ ಸೌಲಭ್ಯವಿಲ್ಲದ ಕಾರಣವನ್ನು ತಕ್ಷಣ ಹುಬ್ಬಳ್ಳಿಿ ಕಿಮ್ಸ್ ಗೆ ಕಳುಹಿಸಬೇಕಿತ್ತು. ಈ ಕಾರಣಕ್ಕಾಾಗಿ ಆರೋಗ್ಯ ಇಲಾಖೆ ಹಾಗು ಅಂಬ್ಯುಲೆನ್ಸ್ ಚಾಲಕರು ಜೀರೋ ಟ್ರಾಾಫಿಕ್ ಮೂಲಕ ಮಗುವನ್ನು ಹುಬ್ಬಳ್ಳಿಿಗೆ ಕಳುಹಿಸಿದ್ದಾಾರೆ.
ತೀರಾ ಬಡತನದಲ್ಲಿರುವ ಮಲ್ಲಪ್ಪ ಕುಟುಂಬದಲ್ಲಿ ಈ ಮಗುವನ್ನು ಉಳಿಸಿಕೊಳ್ಳಲು ಹರಸಹಾಸ ಮಾಡಬೇಕಾಗಿತ್ತು. ಆದರೆ ವೈದ್ಯರು ತಕ್ಷಣ ಹುಬ್ಬಳ್ಳಿಿಗೆ ಕರೆದುಕೊಂಡು ಹೋಗಲು ಸೂಚನೆ ನೀಡಿದ್ದರಿಂದ ಈಗ ಶೂನ್ಯ ಸಂಚಾರದ ಮೂಲಕ ಮಗುವನ್ನು ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆೆ ಮಾಡಿಸಲು ಮುಂದಾಗಿದ್ದಾಾರೆ.
ಕೊಪ್ಪಳದ ವೈದ್ಯಕೀಯ ಮಹಾವಿದ್ಯಾಾಲಯದಲ್ಲಿ ಸುಸಜ್ಜಿಿತ ಅಂಬ್ಯುಲೆನ್ಸನಲ್ಲಿ ಮಗುವಿಗೆ ವೆಂಟಿಲೇಟರ್ ಹಾಕಿಕೊಂಡು ಹೋಗುತ್ತಿಿದ್ದಾಾರೆ. ಕೊಪ್ಪಳದಿಂದ ಹುಬ್ಬಳ್ಳಿಿಗೆ ಸರಿಸುಮಾರು 3 ತಾಸು ಪ್ರಯಾಣ. ಈ ಸಮಯದಲ್ಲಿ ಟ್ರಾಾಫಿಕ್ ಸಮಸ್ಯೆೆ ಇರುವ ಕಾರಣಕ್ಕೆೆ ಐದು ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದಾಾರೆ.
ಜೀವ ಉಳಿಸಲು ವೈದ್ಯರೊಂದಿಗೆ ಸಂಚಾರಿ ಪೊಲೀಸ್ ರು ಹಾಗು ಅಂಬ್ಯುಲೆನ್ಸ್ ನವರ ಪ್ರಯತ್ನಕ್ಕೆೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾಾರೆ.
ಮಗುವಿನ ಶಸ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್

