Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

28 ಕ್ಷೇತ್ರಗಳ ಆಪ್‌ ಮೂರನೇ ಪಟ್ಟಿ  ಬಿಡುಗಡೆ

 

ಸುದ್ದಿಮೂಲ ವಾರ್ತೆ


ಬೆಂಗಳೂರು, ಏ.10:  ಆಮ್ ಆದ್ಮಿ ಪಾರ್ಟಿಯು ಮುಂಬರುವ ವಿಧಾನಸಭೆ ಚುನಾವಣೆಗೆ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಪ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರು ಮತ್ತು ಬ್ರಿಜೇಶ್ ಕಾಳಪ್ಪ ಅವರು 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.


ಈ ಮೂಲಕ 168 ಕ್ಷೇತ್ರಗಳಿಗೆ ಆಪ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ. ಜನಸಾಮಾನ್ಯರಿಗೆ ಟಿಕೆಟ್ ನೀಡುತ್ತಿರುವ ಆಪ್, ಇದುವರೆಗೆ ಟಿಕೆಟ್ ನೀಡಿರುವ ಒಟ್ಟಾರೆ 168 ಅಭ್ಯರ್ಥಿಗಳ ಪೈಕಿ 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್ ಇದ್ದಾರೆ. ಇದರಲ್ಲಿ ಐವರು ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು, ಮಾಸ್ಟರ್ ಡಿಗ್ರಿ ಹೊಂದಿರುವ 41 ಅಭ್ಯರ್ಥಿಗಳು ಮತ್ತು ಪದವಿ ಹೊಂದಿರುವ 82 ಅಭ್ಯರ್ಥಿಗಳು ಇದ್ದಾರೆ.


28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಬ್ರಿಜೇಶ್ ಕಾಳಪ್ಪ, ನಮ್ಮ ಅಭ್ಯರ್ಥಿಗಳ ಸದ್ಗುಣದ ಆಧಾರದಲ್ಲಿ, ನಮ್ಮ ಪಕ್ಷವು ಪಂಜಾಬ್ ಮತ್ತು ದೆಹಲಿಯಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಕೆಲಸಗಳ ಆಧಾರದ ಮೇಲೆ ನಾವು ಈ ಚುನಾವಣೆಯನ್ನು ನಡೆಸುತ್ತೇವೆ. ದೆಹಲಿ ಮತ್ತು ಪಂಜಾಬ್ ನಲ್ಲಿ ಸಿಗುತ್ತಿರುವ ಜನಪರ ಆಡಳಿತವನ್ನು ನೀಡಲು ಸಿದ್ದಗೊಂಡಿರುವ  ನಮಗೆ ಕರ್ನಾಟಕದ ಜನರು ಆಶೀರ್ವಾದ ಮಾಡಿ, ಮತ ನೀಡುತ್ತಾರೆ ಎಂದು ಅಚಲವಾಗಿ ನಂಬಿದ್ದೇವೆ ಎಂದರು.


ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರಸ್ ಮತ್ತು ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ‌ ಪಕ್ಷ ಎರಡೂ ಕರ್ನಾಟಕ ರಾಜಕೀಯದಲ್ಲಿ ಎಎಪಿ ಇರುವುದನ್ನು ನೋಡಿ ಭಯ ಪಟ್ಟಿವೆ. ಅವರ ಶತಮಾನಗಳ ಲೂಟಿ ರಾಜಕೀಯ ಅಂತ್ಯಗೊಳ್ಳುತ್ತದೆ ಎಂಬ ದಿಗಿಲು ಅವರಲ್ಲಿದೆ. ನಮ್ಮ ಅಭ್ಯರ್ಥಿಗಳನ್ನು ತಡೆಯಲು ಅವರು ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ, ಬಗ್ಗದಿದ್ದಲ್ಲಿ ಹಣಬಲ ಮತ್ತು ತೋಳ್ಬಲದಿಂದ ನಮ್ಮನ್ನು  ಭಯಪಡಿಸುತ್ತಿದ್ದಾರೆ. ಅವರ ಪ್ರಚಾರ ವೈಖರಿಯಲ್ಲಿ ಅಥವಾ ಅವರು ಮಾಡಿರುವ ಕೆಲಸದಲ್ಲಿ ಅವರಿಗೆ ನಂಬಿಕೆಯೇ ಇಲ್ಲದಿರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಸುಮ್ಮನಾಗಿಸಲು ಯತ್ನಿಸುತ್ತಿದ್ದಾರೆ ಎಂದರು.

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ