Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ 28 ನೇ ನಾವೀನ್ಯತೆ ಪ್ಯಾಷನ್ ಉತ್ಸವ

ಬೆಂಗಳೂರು, ಜು, 28; ಐಟಿ-ಬಿಟಿ ನಂತರ ಜವಳಿ ವಲಯದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸುತ್ತಿರುವ ರಾಜ್ಯದಲ್ಲಿ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಸಿದ್ಧಉಡುಪು ಕ್ಷೇತ್ರದಲ್ಲಿ ವ್ಯಾಪಾರಿ ವಲಯವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಆಗಸ್ಟ್ 1,2 ಮತ್ತು 3ರಂದು ಬೆಂಗಳೂರಿನ ಅರಮನೆ ಮೈದಾನ ಪ್ರಿನ್ಸೆಸ್ ಶ್ರೈನ್ ಸಭಾಂಗಣದಲ್ಲಿ 28 ನೇ ವೈವಿಧ್ಯಮ ವಿನ್ಯಾಸಗಳ 28 ನೇ ನಾವೀನ್ಯತೆ ಪ್ಯಾಷನ್ ಉತ್ಸವ -2023 ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ, ಇದು ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಉತ್ಸವವಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳ 150 ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್ ಗಳು, ವಿನ್ಯಾಸಗಳು, ಮದುವೆ, ಸಾಂಪ್ರದಾಯಿಕ ಉಡುಗೆ, ತೊಡುಗೆ, ಔಪಚಾರಿಕ, ಅನೌಪಚಾರಿಕ ವಸ್ತ್ರಗಳು, ಚಳಿಗಾಲದ ಉಡುಪುಗಳ ಪ್ರದರ್ಶನ ಇರಲಿದೆ. ಬೆಂಗಳೂರು ಅರಮನೆ ಮೈದಾನದ ಗೇಟ್ ನಂಬರ್ 09 ಪ್ರಿನ್ಸೆಸ್ ಶ್ರೈನ್ ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜವಳಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಚಿತ್ರನಟಿ ನಟಿ ಶರಣ್ಯ ಶೆಟ್ಟಿ ಮತ್ತಿತರರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಒಂದು ತಿಂಗಳ ಹಿಂದೆಯೇ 100 ಕ್ಕೂ ಹೆಚ್ಚು ಜವಳಿ ಉತ್ಪಾದಕರು ಜವಳಿ ಉತ್ಸವದಲ್ಲಿ ಪಾಲ್ಗೊಳ್ಳಲು ಮುಂಗಡ ಕಾಯ್ದಿರಿಸಿದ್ದು, ಸೂರತ್, ಜೈಪುರ, ದೆಹಲಿ, ಅಮಹದಾಬಾದ್, ನಾಗ್ಪುರ ಸೇರಿದಂತೆ ಪ್ರಮುಖ ನಗರಗಳ ಜವಳಿ ಉತ್ಪಾದಕರು ಪಾಲ್ಗೊಳ್ಳುತ್ತಿದ್ದಾರೆ. ದೇಸೀಯ ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು, ರಿಲಯನ್ಸ್ ರಿಟೈಲ್ ಪ್ಯಾಷನ್ ಬ್ರ್ಯಾಂಡ್, ಮುಂಬೈನ ಖ್ಯಾತ ಜೋಲಾ ಸೇರಿದಂತೆ ದೇಶದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಕಂಪೆನಿಗಳು ಭಾಗವಹಿಸುತ್ತಿವೆ. 2,500 ಕ್ಕೂ ಹೆಚ್ಚು ಜವಳಿ ವ್ಯಾಪಾರಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 100 ಕೋಟಿ ಗೂ ಹೆಚ್ಚು ವಹಿವಾಟು ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮಹಿಳಾ ಉದ್ಯಮ ವಲಯ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಸ್ತ್ರೀ ಸ್ವಸಹಾಯ ಸಂಘಗಳು ಜವಳಿ ಉತ್ಪಾದನೆ ಮತ್ತು ಮಾರಾಟದಲ್ಲೂ ತೊಡಗಿಕೊಂಡಿವೆ. ಮಹಿಳಾ ವಲಯದ ವ್ಯಾಪಾರ ವಹಿವಾಟಿಗೆ ಈ ಮೇಳ ಅತ್ಯಂತ ಮಹತ್ವದ್ದಾಗಿದೆ. ಚಿಲ್ಲರೆ ಬಟ್ಟೆ ಅಂಗಡಿಗಳಿಗೆ ಉತ್ಕೃಷ್ಟ ಮತ್ತು ಅತ್ಯುನ್ನತ ಗುಣಮಟ್ಟದ ಬ್ರ್ಯಾಂಡ್ ಗಳನ್ನು ಪೂರೈಸಲಾಗುವುದು. ರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟಿಗೆ ಇದು ವೇದಿಕೆಯಾಗಿದೆ. ಆಗಸ್ಟ್ 2 ರಂದು ಸಂಜೆ ರೂಪದರ್ಶಿಯರು ನವ ನವೀಯ ವಿನ್ಯಾಸಗಳ ಉಡುಗೆ – ತೊಡುಗೆಗಳನ್ನು ತೊಟ್ಟು ಪ್ಯಾಷನ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ