Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

4ನೇ ಅಂತರಾಷ್ಟ್ರೀಯ ಹಸಿರು ಎಲೆಕ್ಟ್ರಿಕ್‌ ವಾಹನಗಳ ಮೇಳ

ಸುದ್ದಿಮೂಲ ವಾರ್ತೆ

ಬೆಂಗಳೂರು,ಜೂ.16; ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಅಂತರರಾಷ್ಟ್ರೀಯ ಗ್ರೀನ್ ಎನರ್ಜಿ ಎಕ್ಸ್‌ ಪೋ ಆರಂಭವಾಗಿದ್ದು, ದೇಶ ವಿದೇಶಗಳ 138 ಕಂಪೆನಿಗಳು ಭಾಗವಹಿಸಿವೆ. ಪರಿಸರ ಸ್ನೇಹಿ, ಇಂಧನ ಮಿತವ್ಯಯಕಾರಿ ವಾಹನಗಳ ಲೋಕ ಅನಾವರಣಗೊಂಡಿದೆ.

ಎಲೆಕ್ಟ್ರಿಕ್ ಬಸ್ ಗಳು, ಸಣ್ಣ ಕಾರುಗಳು, ಸರಕು ಸಾಗಾಣೆ ವಾಹನಗಳು, ಎಲೆಕ್ಟ್ರಿಕ್ ಬೈಸಿಕಲ್ ಗಳು ಹೀಗೆ ನಾನಾ ನಮೂನೆಯ ವಾಹನಗಳು ಕೇವಲ ನೋಡಲಷ್ಟೇ ಅಲ್ಲದೇ ಟೆಸ್ಟ್ ಡ್ರೈವ್ ಗೂ ಲಭ್ಯವಿದೆ. ಇದಲ್ಲದೇ ಸ್ಥಳದಲ್ಲಿ ವಾಹನಗಳನ್ನು ಮುಂಗಡ ಕಾಯ್ದಿರಿಸಿದರೆ ರಿಯಾಯಿತಿ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಈ ಮೇಳವನ್ನು ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ – ಕ್ರೇಷ್ಮಾ ಮತ್ತು ಭಾರತದ ಪರಿಸರ ಸಂಶೋಧನಾ ಸಂಸ್ಥೆ ಪೆರ್ರಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಗ್ರೀನ್ ಎನರ್ಜಿ ಎಕ್ಸ್‌ ಪೋಗೆ ಕ್ರೇಷ್ಮಾ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಪೆರ್ರಿ ಸಂಸ್ಥೆ ಅಧ್ಯಕ್ಷ ರಮೇಶ್ ಶಿವಣ್ಣ ಹಾಗೂ ಮೀಡಿಯಾ ಡೇ ಮಾರ್ಕೆಂಟಿಂಗ್ ವಿಭಾಗದ ನಿರ್ದೇಶಕ ಮೊಹಮದ್ ಮುದಸಿರ್ ವಾಹನ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕೆ.ಆರ್. ಸುರೇಂದ್ರ ಕುಮಾರ್, ಹವಾಮಾನ ಬದಲಾವಣೆ ಗುರಿಗಳನ್ನು ಸಾಧಿಸಲು ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಸರ್ಕಾರ ಆದ್ಯತೆ ನೀಡಿದ್ದು, ಇದಕ್ಕೆ ಪೂರಕವಾಗಿ ಮೇಳ ಆಯೋಜಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಸಾಗಾಣೆ ವ್ಯವಸ್ಥೆಯ ಭವಿಷ್ಯವಾಗಿದ್ದು, ಬೆಂಗಳೂರು ಜಾಗತಿಕ ವಿದ್ಯುನ್ಮಾನ ವಾನಗಳ ತಾಣವಾಗಿ ಬೆಳೆಯುತ್ತಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಜನ ಮುಂದಾಗಬೇಕು ಎಂದರು.

ಮೇಳದಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಟಾಸರ್ ಸ್ಕೂಟರ್ ಗಳು, ಕೆಕೆಎಲ್ ಹೈಟೆಕ್ ಸಂಸ್ಥೆಯ ನ್ಯಾನೋ ಗಿಂತ ಸಣ್ಣ ಕಾರುಗಳು, ಸೂಪರ್ ಬೈಕ್ ಗಳು, ಬಗೆ ಬಗೆಯ ಸರಕು ಸಾಗಾಣೆ ವಾಹನಗಳು ಮೇಳದಲ್ಲಿವೆ. ಸರಕು ಸಾಗಾಣೆ ವಾಹನಗಳು ವ್ಯಾಪಾರ, ಕೃಷಿ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಸಹಕಾರಿಯಾಗಿದೆ. ಇಎಸ್ಎಸ್ಇಎಲ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳು ವಾಹನ ಪ್ರಿಯರ ಸಣ್ಮನ ಸೆಳೆಯುತ್ತಿದೆ. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ವಿಮೆ ಅಗತ್ಯವಿಲ್ಲ. ಹೀಗೆ ಮೇಳ ಹತ್ತು ಹಲವು ಕೌತುಗಳನ್ನು ಮೇಳ ಒಳಗೊಂಡಿದೆ.

ಇದೇ ಸಂದರ್ಭದಲ್ಲಿ ಭಾರತ್ ನ್ಯೂ ಎಜರ್ನಿ ಸಂಸ್ಥೆಯ ಎಸ್ 110 ಎಲೆಕ್ಟ್ರಿಕ್ ಮೋಟಾರ್ ಸೈಕಲ್, ಫರ್ಪೆಟ್ಟೋ, ಬಾಸ್ ಎಸ್150 ಫರ್ಮಾರ್ಮೆನ್ಸ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗಳನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬಿಎನ್ ಸಿ ಸಂಸ್ಥೆಯೊಂದಿಗೆ ಜಪಾನಿನ ಹೆಸರಾಂತ ವಾಹನ ಬಿಡಿ ಭಾಗಗಳ ತಯಾರಕರಾದ ಮುಸಾಶಿ ಸೆಮಿಟ್ಸು ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ