Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

700 ವರ್ಷ ಹಳೆಯ ದೇಗುಲ ವರ್ಷದ ಜೀಣೋದ್ಧಾರ ಸಂಭ್ರಮ

ಸುದ್ದಿಮೂಲ ವಾರ್ತೆ

ದೇವನಹಳ್ಳಿ,ಸೆ.10: ಜಾಲಿಗೆ ಪಂಚಾಯಿತಿ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದ 700 ವರ್ಷಗಳ ಪುರಾತನ ಶ್ರೀಪಳೇಕಮ್ಮ ದೇವಿ ದೇಗುಲ ಜೀರ್ಣೋದ್ಧಾರದ ಮೊದಲನೇ ವರ್ಷದ ವಾರ್ಷಿಕೋತ್ಸವದಲ್ಲಿ. ಸ್ಥಿರ ಬಿಂಬ, ವಿಮಾನ ಗೋಪುರ, ಶಿಖರ ಕಳಸ ಸ್ಥಾಪನೆ ಹಾಗೂ ಕುಂಬಾಭಿಷೇಕ ಮಹೋತ್ಸವೂ ಭಾನುವಾರ ನೆರವೇರಿಸಲಾಯಿತು.



ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಅನಾದಿ ಕಾಲದ ಸಂಪ್ರದಾಯಗಳನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವುದು ಸಂತಸದ ವಿಚಾರವಾಗಿದೆ. ದೇವರ ಅಸ್ತಿತ್ವವೂ ವ್ಯಕ್ತಿಗತವಾದ ನಂಬಿಕೆಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ. ಹಿಂದಿನ ಕಾಲದ ಆಚರಣೆಯನ್ನು ಇಷ್ಟು ವರ್ಷಗಳ ಕಾಲ ಮುಂದುವರೆಸಿಕೊಂಡು ಬಂದು, ದೇಗುಲ ಜೀರ್ಣೋದ್ದಾರ ಮಾಡಿ, ವಾರ್ಷಿಕೋತ್ಸವ ಸಂಭ್ರಮಾಚರಣೆ ಮಾಡಿರುವ ಯುವಕರ ನಡೆಗೆ ಶ್ಲಾಘನೀಯ.

ಗ್ರಾಮೀಣ ಭಾಗಗಳಲ್ಲಿ ಇರುವ ದೇಗುಲಗಳನ್ನು ಆಧುನಿಕ ಮಾನಸಿಕ ನೆಮ್ಮದಿ ಕೇಂದ್ರಗಳೆಂದು ಗುರುತಿಸಬಹುದಾಗಿದೆ. ಹೊರ ರಾಷ್ಟ್ರದಲ್ಲಿ ಇರುವ ಮಾನಸಿಕ ತೊಡಕುಗಳು ಭಾರತೀಯರಲ್ಲಿ ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬರು ದೇವರ ಆರಾಧನೆ, ಧ್ಯಾನ ಹಾಗೂ ಸಾಮಾಜಿಕ ನಂಬಿಕೆಯಲ್ಲಿ ಜೀವನ ಕಟ್ಟಿಕೊಂಡಿದ್ದು, ಏಕಾಗ್ರತೆಯನ್ನು ಹೆಚ್ಚಿಸಿ, ಸದೃಢ ಮನಸ್ಸುಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಜಾಲಿಗೆ ಗ್ರಾ.ಪಂ ಅಧ್ಯಕ್ಷ ಆನಂದ್‌ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಬಿದಲೂರು ಗ್ರಾಪಂ ಅಧ್ಯಕ್ಷ ಎಸ್‌.ಪಿ.ಮುನಿರಾಜು,ಚಿನ್ನಪ್ಪ, ಜಾಲಿಗೆ ಶ್ರೀರಾಮಣ್ಣ, ದೇವರಾಜ್‌, ಜಾಲಿಗೆ ಮುನಿರಾಜು, ಅರದೇಶನಹಳ್ಳಿ ಸುಬ್ಬಣ್ಣ, ಬಸವನಪುರ ಮುನಿರಾಜು, ಬೆಟ್ಟೇನಹಳ್ಳಿ ಸದಸ್ಯರಾದ ಮುನೇಗೌಡ, ಮುನಿರಾಜಪ್ಪ, ಕುರ್ಲಪ್ಪ, ಚಿಕ್ಕಮುನಿಯಪ್ಪ, ದೊಡ್ಡ ಕೆಂಪಣ್ಣ, ಕೇಶವ, ಮುನಿಶಾಮಪ್ಪ, ಮುನಿರಾಜಪ್ಪ, ರಮೇಶ್‌, ಎಂಪಿಸಿಎಸ್‌ನ ಜಯಂತ್‌, ಋತೀಶ್, ಜನಾರ್ಧನ್,ವೆಂಕಟರಾಜು, ಹರೀಶ್‌ ಸೇರಿದಂತೆ ಹನುಮ ಸೇನೆಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ