Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಚೇಂದ್ರಿಯಗಳ ಆಕರ್ಷಣೆಯಿಂದ ವಿಮುಖರಾರುವಂತೆ ಕರೆ

ಸುದ್ದಿಮೂಲ ವಾರ್ತೆ

ತಿಪಟೂರು,ಸೆ.2: ಮನುಷ್ಯನಾದವನು ತನ್ನ ಬುದ್ಧಿವಂತಿಕೆಯನ್ನು ಪರಿಪೂರ್ಣವಾಗಿ ಬಳಸಬೇಕಾದರೆ ಪಂಚೇಂದ್ರಿಯಗಳ ಆಕರ್ಷಣೆಯಿಂದ ವಿಮುಖಗೊಂಡು ಏಕಾಗ್ರತೆ ಸಾಧಿಸಬೇಕೆಂದು ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ನಗರದ ಗುರುಕುಲಾನಂದಾಶ್ರಮದಲ್ಲಿ ನಡೆದ 320ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿಯ ಆಶೀರ್ವಚನ ನೀಡಿದ ಶ್ರೀಗಳು ಶರಣ ಪರಂಪರೆಯು

ನಮಗೆಲ್ಲ ಆದರ್ಶವಾಗಬೇಕು. ಗೌತಮಬುದ್ಧನಿಗಿದ್ದಷ್ಟು ಶಿಷ್ಯರು ಹನ್ನೆರಡೆಯ ಶತಮಾನದಲ್ಲಿದ್ದ ಬದುಕಿದ್ದ ಶಿವಶರಣರಿಗೆ ಇರಲಿಲ್ಲ. ಆದಕಾರಣ ಬುದ್ಧಧರ್ಮವು ಪ್ರಪಂಚಕ್ಕೆ ಹರಡಿದರೆ, ಇದೀಗ ವಚನ ಧರ್ಮವು ಸೀಮಿತ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಾಲಕರ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್‌ರವರು, ವಚನ ಸಾಹಿತ್ಯವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಶಿವ ಶರಣರು ವರ್ಗ ಬೇಧ ರಹಿತ, ಜಾತಿ-ಜನಾಂಗ ಮೀರಿದ ನವ ಸಮಾಜದ ಕನಸು ಕಂಡಿದ್ದರು. ಶೋಷಣೆಯಿಂದ ಮುಕ್ತವಾದ ಕಾಯಕತತ್ವದಲ್ಲಿ ಅಪಾರವಾದ ನಂಬಿಕೆಯನ್ನಿಟ್ಟು ಕೊಂಡಿದ್ದರು ಎಂದು ಬಣ್ಣಿಸಿದರು.

ಕಾರ್ಯಕ್ರಮದ ಸೇವಾಕರ್ತರಾದ ತೆಂಗಿನ ವ್ಯಾಪಾರಿಗಳಾಗದ ಶಾಂತನಹಳ್ಳಿ ಜಿ. ಬಸವರಾಜು,, ಶಿಕ್ಷಕರಾದ ಮಡೆನೂರು ಸೋಮಶೇಖರ್, ನಿವೃತ್ತ ಪ್ರಾಂಶುಪಾಲರಾದ ಬೆಟ್ಟಯ್ಯ, ನಾಗರಾಜು ನಿರೂಪಿಸಿ ಸಂಯೋಜಕ ಡಾ. ಎಲ್.ಎಂ. ವೆಂಕಟೇಶ್ ಹಾಗೂ ಗ್ರಾಮಸ್ಥರು ಉಪಸ್ಥಿರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ