Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಮನಗರದಲ್ಲಿ ಲೋಪಾರ್ಪಣೆಗೊಂಡಿತು ಕವಿತೆಗಳ ಗುಚ್ಚ ಕೃತಿ

ಸುದ್ದಿಮೂಲ

ರಾಮನಗರ,ಜೂ.13 : ಮೊಬೈಲ್ ಎಂಬ ಮಾಯಾಪೆಟ್ಟಿಗೆ ಓದುಗರನ್ನೂ ಕಸಿದುಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಅಧೋಮುಖವಾಗಿ ಇಳಿಕೆ ಕಾಣುತ್ತಿರುವ ಪುಸ್ತಕ ಸಂಸ್ಕೃತಿಗೆ ಮರುಜೀವ ನೀಡಬೇಕಾದ ಅವಶ್ಯಕತೆಯಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಎಸ್ ಹೊಸಮನಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮದ 178ನೇ ಸಂಚಿಕೆಯಲ್ಲಿ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಶಿಕ್ಷಕಿ ಸುಮಾ ಕಳಸಾಪುರ ಸಂಪಾದಿಸಿರುವ `ಹಾರಿದೊಡೆ ಸುರಿದಾವು...’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಬೆರಳ ತುದಿಯಲ್ಲಿ ಪುಸ್ತಕಗಳು ಜನಪ್ರಿಯವಾಗುತ್ತಿವೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಆ ಮೂಲಕವಾದರೂ ಓದುಗರ ಸಂಖ್ಯೆ ಹೆಚ್ಚಾಗಲಿ ಎಂಬುದು ಮುಖ್ಯ ಉದ್ದೇಶ ಎಂದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಆರ್. ಚಂದ್ರಶೇಖರ್, ಎಂಬತ್ತಕ್ಕೂ ಹೆಚ್ಚು ಜನರ ಕವಿತೆಗಳನ್ನು ಒಂದೆಡೆ ಕಲೆಹಾಕಿ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಂಡ ಈ ಕೃತಿಯ ಮೂಲಕ ಅಪರೂಪದ ಪುಸ್ತಕ ಸಂಸ್ಕೃತಿಯ ಮಜಲು ತೆರೆದಂತಾಗಿದೆ ಎಂದರು.

ಹಾರಿದೊಡೆ ಸುರಿದಾವು...’ ಕೃತಿ ಪರಿಚಯಿಸಿದ ಹಿರಿಯ ನ್ಯಾಯವಾದಿ ಹಾಗೂ ಕತೆಗಾರ್ತಿ ಕವಿತಾ ಮುಚ್ಚಂಡಿ, ಇದೊಂದು ಅನನ್ಯವಾದ ಸಂಕಲನ. ಎಲ್ಲಾ ಕವಿಗಳೂ ಧ್ಯಾನಸ್ಥ ಸ್ಥಿತಿಯಲ್ಲಿ ಕವಿತೆಗಳನ್ನು ಬರೆದಿದ್ದಾರೆ. ಮುಖಪುಟದಲ್ಲಿ ನೀಡಿದ ಒಂದು ಚಿತ್ರಕ್ಕೆ ಅದೆಷ್ಟು ಆಲೋಚನೆಗಳು ಸೇರಿವೆ. ಇದೊಂದು ವಿಸ್ಮಯಕಾರಿಯೇ ಸರಿ ಎಂದು ಹೇಳಿದರು.

ಸಂಪಾದಕಿ ಸುಮಾ ಕಳಸಾಪುರ ಮಾತನಾಡಿ, ಮುಖಪುಸ್ತಕದ ಒಂದು ಪುಟ ಕನ್ನಡ ಕಥಾಗುಚ್ಛ. ಸುಮಾರು ಹನ್ನೆರಡು ಮಂದಿಯ ಕಲ್ಪನೆಯ ಕೂಸು. ಇಂದು ಎಪ್ಪತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಛಾಯಾಗ್ರಾಹಕ ಶಶಿಕುಮಾರ್ ಕ್ಲಿಕ್ಕಿಸಿದ ಬೈರೇಗೌಡರ ಒಂದು ಚಿತ್ರವನ್ನು ಪ್ರಕಟಿಸಿ ಕವಿತೆ ಬರೆಯಲು ಕನ್ನಡ ಕಥಾಗುಚ್ಚದ ಸದಸ್ಯರಿಗೆ ಕರೆನೀಡಿದೆವು. ಒಂದೇ ದಿನಕ್ಕೆ ಬಂದ 86 ಕವಿತೆಗಳು ಇಲ್ಲಿವೆ. ಇಂಥ ಕಾರ್ಯಕ್ರಮಗಳು ಓದುಗರು ಮತ್ತು ಬರೆಯುವವರು ಎಲ್ಲರನ್ನು ಬೆಸೆಯುವ ಕೊಂಡಿ ಎಂದರು.

ಕೆ.ಎಸ್.ಎ. ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ, ಕತೆಗಾರ ಆರ್‌ಬಿ ಶೆಟ್ಟಿ, ಆಕಾಶವಾಣಿ, ದೂರದರ್ಶನ ನಟ ನಿರೂಪಕ ಜಿ.ಪಿ. ರಾಮಣ್ಣ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸಿ. ಪಾರ್ವತಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರೂಪಾಂತರ ರಂಗತಂಡದ ಕೆ.ಎಸ್.ಡಿ.ಎಲ್. ಚಂದ್ರು ಅವರನ್ನು ಟ್ರಸ್ಟ್ ಪರವಾಗಿ ಅಭಿನಂದಿಸಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಡಲ ಕಿನಾರೆಯ ಸಾಹಿತಿ ಡಾ. ಕೆ. ಶಿವರಾಮ ಕಾರಂತರ ಚೋಮನ ದುಡಿ ನಾಟಕವನ್ನು ನಗರದ ರೂಪಾಂತರ ತಂಡ ಪ್ರದರ್ಶಿಸಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ