Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗಣೇಶೋತ್ಸವ 

ಬೆಂಗಳೂರು,ಸೆ.14: ಪ್ರತಿ ವರ್ಷ ಗಣೇಶ ಹಬ್ಬದ ಪ್ರಯುಕ್ತ ಒಂದಿಲ್ಲೊಂದು ಹೊಸತನದ ಕಾರ್ಯಕ್ರಮ ಹಮ್ಮಿಕೊಳ್ಳುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಈ ಬಾರಿ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸಿ ವೈಭವದಿಂದ ವಿಭಿನ್ನವಾಗಿ ಆಚರಿಸಲಾಗುತ್ತಿದೆ.



ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್‌, ಈ ಬಾರಿ ಗಣೇಶೋತ್ಸಕ್ಕೆ ಲಕ್ಷ್ಮಿ ಕಟಾಕ್ಷದ ಸ್ಪರ್ಷ ನೀಡುತ್ತಿದೆ.



ಐವತ್ತು ಲಕ್ಷ ರೂಪಾಯಿ ಮೊತ್ತದ ನಾಣ್ಯಗಳು, ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕರಿಸುವ ಪ್ರಕ್ರಿಯೆ ಒಂದು ವಾರದ ಹಿಂದೆಯೇ ಆರಂಭವಾಗಿದೆ. 150 ಕ್ಕೂ ಜನರ ತಂಡ ಹಬ್ಬಕ್ಕೂ ಹದಿನೈದು ದಿನಗಳ ಹಿಂದಿನಿಂದಲೇ ನೋಟುಗಳ ಅಲಂಕಾರದಲ್ಲಿ ನಿರತವಾಗಿದೆ. ವಿಕ್ರಂ ಲ್ಯಾಂಡರ್‌, ಚಂದ್ರಯಾನ - 3, ಜೈ ಕರ್ನಾಟಕ, ಜೈ ಜವಾನ್‌ ಜೈ ಕಿಸಾನ್‌, ಮೇರಾ ಭಾರತ್‌ ಮಹಾನ್‌ ಥೀಮ್‌ ಅಳವಡಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಲು ಸಿದ್ಧವಾಗುತ್ತಿವೆ.

ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್‌ ರಾಜ್‌* ಮಾತನಾಡಿ, ಐದು, ಹತ್ತು, ಇಪ್ಪತ್ತು ರೂಪಾಯಿ ಮೊತ್ತದ ತಲಾ ಒಂದೂವರೆ ಲಕ್ಷ ನಾಣ್ಯಗಳು, ಐದು, ಹತ್ತು, ಇಪ್ಪತ್ತು, 100, 500 ರೂ ಮೊತ್ತದ ನೋಟುಗಳಿಂದ ಗಣೇಶ ಮೂರ್ತಿಯನ್ನು ಸಿಂಗರಿಸಲಾಗುತ್ತಿದೆ. ನೋಟುಗಳ ಮೌಲ್ಯ ಇನ್ನೂ ನಿಗದಿ ಮಾಡಿಲ್ಲ. ಭಕ್ತಾದಿಗಳು ಗಣೇಶನ ಅಲಂಕಾರಕ್ಕಾಗಿ ಲಕ್ಷಾಂತರ ರೂ ಮೊತ್ತದ ನೋಟುಗಳನ್ನು ಪ್ರತಿನಿತ್ಯ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹಬ್ಬದ ವೇಳೆಗೆ ನೋಟುಗಳ ಮೌಲ್ಯ ತಿಳಿಯಲಿದೆ ಎಂದರು.

ಸೆಪ್ಟಂಬರ್ 18 ರಂದು ಬೆಳಿಗ್ಗೆಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ