Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಅದ್ದೂರಿ ರಾಜಮುಡಿ ಉತ್ಸವ

ಸುದ್ದಿಮೂಲ ವಾರ್ತೆ
ಆನೇಕಲ್, ಏ. 3: ಪಟ್ಟಣದ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಎರಡನೇ ಬಾರಿಗೆ ಅದ್ದೂರಿಯಾಗಿ ರಾಜಮುಡಿ ಉತ್ಸವವನ್ನು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಮೇಲುಕೋಟೆ ಮಾದರಿಯಲ್ಲೇ ಆನೇಕಲ್‌ನಲ್ಲಿ ಮಂಗಳವಾದ್ಯ ಹಾಗೂ ಪಂಚವಾದ್ಯಗಳ ನಡುವೆ ರಾಜಮುಡಿ ಉತ್ಸವವನ್ನು ಸಾವಿರಾರು ಜನರು ಕಣ್ತುಂಬಿಕೊಂಡು ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ವೆಂಕಟರಾಜು ಕುಟುಂಬ, ಸೊಸೈಟಿ ಚನ್ನರಾಜು ಕುಟುಂಬ ಹಾಗೂ ಬೈರರಾಜು ಕುಟುಂಬದವರಿಂದ ರಾಜಮುಡಿ ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಯೋಜನೆ ಮಾಡಲಾಗಿದೆ. ರಾಜಮುಡಿ ಉತ್ಸವ ಹಿನ್ನೆಲೆಯಲ್ಲಿ ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣ, ಪಂಜಿನ ಸೇವೆ ಹಾಗೂ ಆಕರ್ಷಕ ಬಾಣಬಿರಸು ಪ್ರದರ್ಶನವನ್ನು ನಡೆಸಲಾಯಿತು.

ಎಲ್ಲರೂ ಮೇಲು ಕೋಟೆಗೆ ಹೋಗಿ ರಾಜಮುಡಿ ಉತ್ಸವವನ್ನು ನೋಡಲು ಸಾಧ್ಯವಾಗುವುದಿಲ್ಲ, ಹೀಗಾಗಿ ಆನೇಕಲ್ ಪಟ್ಟಣದ ಸಾರ್ವಜನಿಕರಿಗೆ ರಾಜಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಎರಡನೇ ಬಾರಿಗೆ ಉತ್ಸವ ನಡೆಸಲಾಗಿದೆ ಎಂದು ರಾಜಮುಡಿ ಉತ್ಸವದ ಆಯೋಜಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ರಾಜಮುಡಿ ಉತ್ಸವದ ಸೇವಾ ಕರ್ತರುಗಳು ವೆಂಕಟರಾಜು ಪಂಡರಿ ಮಾಸ್ಟರ್ ಕುಟುಂಬದ ದಿಂದ ಮೋಹನ್ ರಾಜ್, ಚರಣ್ ರಾಜ್,ಸಂತೋಷ್ ಕುಮಾರ್ ಹರ್ಷಿತಾಚರಣ್ ರಾಜು, ಸೊಸೈಟಿ ಚನ್ನರಾಜು ಕುಟುಂಬದಿಂದ ನಾಗರಾಜು, ಬೈರರಾಜು ಕುಟುಂಬದಿಂದ ರೇಣುಕಾ ರಾಜು ದೇವಸ್ಥಾನದ ಪ್ರಧಾನ ಅರ್ಚಕರು ರಾಮಚಂದ್ರ ಭಟ್ಟರು ,ಏಕಾಂಗಿ (ದೇವಾಲಯದ ಪೂಜಾ ಕೈಕರ್ಯ ನಿರ್ವಾಹಕ) ಪ್ರತಾಪ್ ಸಿಂಗ್ ಬಾಲೀ  ಸಹಾಯಕ ಅರ್ಜಕರು ಗೋವಿಂದ್ ಭಟ್ಟರು ಆಲಂಕಾರ ವಿಧ್ವಾನ್ ಅಭಿರಾಮ್ ಭಟ್ಟರು, ದೇವಸ್ಥಾನದ ನಿರ್ವಾಹಕ ಮಂಡಳಿಯ ವೆಂಕಟಸ್ವಾಮಿರೆಡ್ಡಿ, ದೇವಾಲಯದ ಸೇವಾ ತಂಡದಿಂದ ದೀಪು ಶ್ರೀನಿವಾಸ ಗೆಳೆಯರು ಸ್ನೇಹಿತರುಗಳಾದ ಶಶಿಧರ್ ವಿನೋದ್ ಕುಮಾರ್ ಮಂಜುನಾಥ್ ರಾಜು, ರಾಜೇಶ್ ರಾಜು, ಯಶೋವರ್ಧನ್ ವಿಜಯ ಕುಮಾರ್ ಹಾಗೂ ಶಶಿ ಕಿರಣ್ ಮತ್ತಿತರರು ಹಾಜರಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ