Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂರನೇ ಹೆಂಡತಿಗಾಗಿ ತನ್ನ ಮಗನನ್ನೇ ಕೊಂದ ಪಾಪಿ ತಂದೆ

ಸುದ್ದಿಮೂಲ ವಾರ್ತೆ
ಮಧ್ಯಪ್ರದೇಶ,ಮೇ.17: ತನ್ನ ಮೂರನೇ ಹೆಂಡತಿಗೆ ಇಷ್ಟವಿಲ್ಲವೆಂದು ತನ್ನ ಮಗನನ್ನೇ ಕೊಂದ ಪಾಪಿ ತಂದೆ. ಏಳು ವರ್ಷದ ಮಗನನ್ನು ಕೊಂದು ಪಾರಾರಿ ಆಗಿದ್ದ ತಂದೆ ಮತ್ತು ಆತನ ಮೂರನೇ ಹೆಂಡತಿಯನ್ನು ಬಂಧಿಸಲಾಗಿದೆ.

ಈ ಘಟನೆ ,ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ತನ್ನ ಹೆಂಡತಿ ಒತ್ತಡಕ್ಕೆ ಮಣಿದು ಏಳು ವರ್ಷದ ಮಗನನ್ನೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಂದೋರ್‌ನಲ್ಲಿ ಕಂಡುಬಂದಿದೆ.
ಪ್ರತೀಕ್‌ ಮೂರನೇ ತರಗತಿಯಲ್ಲಿ ಓದುತ್ತಿದ್ದು, ದಿನನು ಅಜ್ಜಿಯೊಂದಿಗೆ ಮಲಗುತ್ತಿದ್ದು, ಅಂದು ಮಾತ್ರ ತಂದೆಯ ಬಳಿ ಮಲಗುತ್ತೇನೆ ಎಂದಿದ್ದ ಪ್ರತೀಕ್ ಮರು ದಿನ ಬೆಳಗ್ಗೆ ನೋಡುವುದರಲ್ಲಿ ಹೆಣವಾಗಿದ್ದನ್ನು.

ತಂದೆಯ ರೂಮಿನಲ್ಲಿ ಕೂಲರ್ ಇದೆ ಅಲ್ಲಿಯೇ ಮಲಗುತ್ತೇನೆ ಎಂದು ಅಜ್ಜಿಯ ಬಳಿ ಹೇಳಿ ಹೋಗಿದ್ದ, ಆ ವೇಳೆ ತಂದೆ ಮಗ ಮಲಗಿದ್ದಾಗ ಶಶಿಪಾಲ್‌ (ತಂದೆ) ಟಿವಿ ವಾಲ್ಯೂಮ್‌ ಜಾಸ್ತಿ ಮಾಡಿ ಕತ್ತು ಹಿಸುಕಿಸಿ, ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಮತ್ತು ತನ್ನ ಹೆಂಡತಿಗೆ ವಿಡಿಯೋ ಕಾಲ್ ಮಾಡಲು ಪ್ರಯತ್ನಿಸಿದ್ದಾನೆ ಯಾವುದೇ ಪ್ರತಿಕ್ರೀಯೆ ಸಿಗದ ಕಾರಣ ಮಗನನ್ನು ಕೊಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ಆದರೆ ಆಕೆಯು ಅವನ ನಂಬರ್‌ ಬ್ಲಾಕ್‌ ಮಾಡಿದ್ದರಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಅಂತಿಮವಾಗಿ ಶಶಿಪಾಲ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಮುಂದೆ ಎಂದೂ ನನ್ನ ಮಗ ತೊಂದರೆ ಕೊಡುವುದಿಲ್ಲ ಎಂದು ಹೇಳಿ ಪತ್ನಿಗೆ ವಿಡಿಯೋ ಹಾಗೂ ಸಂದೇಶ ಕಳುಹಿಸಿದ್ದೆ ಎಂದು ಶಶಿಪಾಲ್ ಹೇಳಿದ್ದಾರೆ. (ಹೆಂಡತಿ)ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ಪ್ರತೀಕ್​ನನ್ನು ಮನೆಯಿಂದ ಹೊರಹಾಕುವವರೆಗೂ ತಾನು ಆ ಮನೆಗೆ ಹಿಂದಿರುಗುವುದಿಲ್ಲ ಎಂದು ಶಶಿಪಾಲ್​ಗೆ ತಿಳಿಸಿದ್ದಳು. ಶಶಿಪಾಲ್​ನ ಮೂರನೇ ಹೆಂಡತಿ ಮೊದಲಿನಿಂದಲೂ ಪ್ರತೀಕ್​ ಬಗ್ಗೆ ಅಸಮಾಧಾನ ಹೊಂದಿದ್ದಳು, ಈ ಬಗ್ಗೆ ಆಗಾಗ ಅವರ ನಡುವೆ ಜಗಳವೂ ನಡೆಯುತ್ತಿತ್ತು. ಆದರೆ ಈ ಅಪರಾಧಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಮಗನನ್ನು ಹತ್ಯೆ ಮಾಡಿ ಎಂದು ನಾನು ಹೇಳಿಲ್ಲ ಎಂದು ಪಾಯಲ್ ಹೇಳಿದ್ದಾಳೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ