Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆರಳಿದ ಪತ್ರಕರ್ತರಿಂದ ಎಡಿಎಲ್‌ಆರ್ ಕಚೇರಿಯಲ್ಲಿ ಧರಣಿ 

ಸುದ್ದಿಮೂಲ ವಾರ್ತೆ

ಬಾಗೇಪಲ್ಲಿ,ನ.5: ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಪತ್ರಕರ್ತರಿಗೆ ನೀಡಲು ಮೀಸಲಿಟ್ಟಿದ್ದ ಸ್ಥಳವನ್ನು ನಿಯಮಬಾಹಿರವಾಗಿ ಅನ್ಯರಿಗೆ ದುರಸ್ಥಿ ಮಾಡಿಕೊಟ್ಟಿರುವುದರಿಂದ ಕೆರಳಿದ ಪತ್ರಕರ್ತರು ಭೂಮಾಪನ ಇಲಾಖೆಯ ಕಚೇರಿ ಮುಂದೆ ಧರಣಿ ಮಾಡಿ ತಮ್ಮ ಆಕ್ರೋಶವ್ಯಕ್ತಪಡಿಸಿದ ಘಟನೆ ನಡೆದಿದೆ.

ಪಟ್ಟಣಕ್ಕೆ ಸಮೀಪದ ಸರ್ವೆ ನಂ 44 ರಲ್ಲಿ ಪತ್ರಕರ್ತರ ನಿವೇಶನಗಳಿಗೆ ಸ್ಥಳವನ್ನು ಮೀಸಲು ಇಟ್ಟು 2019 ರಲ್ಲಿ ಭೂಮಾಪನ ಇಲಾಖೆಯ ಸರ್ವೆಯರ್ ಸ್ಕೆಚ್ ಮಾಡಿಕೊಟ್ಟಿದ್ದು, ಅದರಂತೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಸರ್ಕಾರದ ಮಟ್ಟದಲ್ಲಿ ನಿವೇಶನಗಳ ಮಂಜೂರಾತಿಗೆ ಪ್ರಕ್ರಿಯೆ ನಡೆಯುತ್ತಿದೆ.

ಒಂದಲ್ಲ ಒಂದು ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ನಿವೇಶನಗಳ ಕಡತವನ್ನು ವಾಪಸ್ಸು ಮಾಡುತ್ತಲೇ ನಾಲ್ಕು ವರ್ಷಗಳನ್ನು ಕಳೆಯಲಾಗಿದೆ. ಆದರೆ ಸರ್ವೆ ನಂ 44 ರಲ್ಲಿ ಕಳೆದ ತಿಂಗಳವರೆಗೂ ಸರ್ಕಾರಿ ಭೂಮಿ ಎಂದು ಬರುತ್ತಿದ್ದ ಪಹಣಿ. ಇಂದು ಏಕಾ ಏಕಿ ಖಾಸಗಿ ವ್ಯಕ್ತಿಗಳ ಹೆಸರು ಪಹಣಿಯಲ್ಲಿ ಕಾಣಿಸಿಕೊಂಡಿದೆ. ಇದನ್ನ ತಿಳಿದ ಪತ್ರಕರ್ತರು ಎಡಿಎಲ್‌ಆರ್ ಕಚೇರಿ ಮುಂದೆ ತಡ ರಾತ್ರಿಯ ವರೆಗು ಧರಣಿ ಮಾಡಿದ್ದಾರೆ. ಸನಂ 44 ಅನ್ನು ದುರಸ್ತಿ ಮಾಡಿ ಹೊಸ ನಂಬರ್ ಸೃಷ್ಟಿ ಮಾಡಿ ಬೇರೆಯವರಿಗೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅಧಿಕಾರಿಗಳ ಹಣದಾಹ ಪತ್ರಕರ್ತರ ನಿವೇಶನಗಳ ಕನಸಿನ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದ್ದು ಇದರಿಂದ ಪತ್ರಕರ್ತರನ್ನು ಕೆರಳಿ ಕೆಂಡವಂತೆ ಮಾಡಲಾಗಿದೆ. ಇದರ ಪರಿಣಾಮ ನಿನ್ನೆ ಮದ್ಯಾಹ್ನವೇ ಎಡಿಎಲ್‌ಆರ್ ಕಚೇರಿಗೆ ಆಗಮಿಸಿದ ಪತ್ರಕರ್ತರು ತಮಗೆ ಮೀಸಲಿಟ್ಟಿರುವ ಸ್ಥಳವನ್ನು ನಮಗೆ ತೋರಿಸುವಂತೆ ಪಟ್ಟುಹಿಡಿದರು. ಹಣಕ್ಕಾಗಿ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ