ಯಶಸ್ವಿ ಆರೋಗ್ಯ ಶಿಬಿರ
ಸುದ್ದಿಮೂಲ
ತಿಪಟೂರು: ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಮತ್ತು ಜ್ಯೋತಿ ನೇತ್ರಾಲಯ ತಿಪಟೂರು ಹಾಗೂ ಅಣ್ಣಯ್ಯನ ಹನುಮಾನ್ ಸೇವಾ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಗ್ರಾಮ ಪಂಚಾಯತಿ ಅದ್ಯಕ್ಷರಾದ ಬಿ.ಎಸ್. ಮಹೇಶ್ ಹಾಗು ಹನುಮಾನ್ ಸಂಸ್ಥೆಯ ಅದ್ಯಕ್ಷ ಅಣ್ಣಯ್ಯ ಹಾಗು ಆಸ್ಪತ್ರೆಯ ವೈದ್ಯವೃಂದ ಗಿಡಕ್ಕೆ ನೀರು ಹಾಕುವ ಮೂಲಕ ಶಿಬಿರ ಉದ್ಘಾಟಿಸಿದರು.
ಶಿಬಿರದಲ್ಲಿ ಉಚಿತ ಹೃದಯರೋಗ ನರರೋಗ,ಮೂತ್ರಪಿಂಡ ರೋಗ,ಕಣ್ಣಿನ ತಪಾಸಣೆ, ಬಿಪಿ ಶುಗರ್ , ಎಸಿಜಿ, 2ಡಿಎಕೋ ಸ್ಕ್ಯಾನಿಂಗ್ ಉಚಿತವಾಗಿ ಸಲಹೆ ಸೂಚನೆ ನೀಡಲಾಯಿತು. ಹಿರಿಯ ನಾಗರಿಕರು,ಶಾಲಾ ಮಕ್ಕಳು, ಸಂಜೀವಿನಿ ಒಕ್ಕೂಟದ ಸದ್ಯರು, ಹಾಗು ಸಾರ್ವಜನಿಕರು ಭಾಗವಹಿಸಿ ಶಿಬಿರ ಯಶಸ್ವಿಗೊಳಿದರು. ಶಿಬಿರದ ಆಯೋಜಕರಾದ ರೆಡ್ ಕ್ರಾಸ್ ಸಂಸ್ಥೆಯ ಸಹ ಕಾರ್ಯದರ್ಶಿ ವಿದ್ಯಾನಂದ್, ಅನ್ವರ್ ಹಾಗೂ ಪಿಡಿಓ ವೇದಮೂರ್ತಿ,ಸಾಹಿತಿ ಡಾ.ಪಿ.ಶಂಕ್ರಪ್ಪಬಳ್ಳೇಕಟ್ಟೆ, ಪ್ರಾಂಶುಪಾಲರಾದ ಪಾಟೀಲ್ , ಪ್ರ.ಶಾ.ಮು.ಶಿಕ್ಷಕ. ಪ್ರಕಾಶ್ ,ಸ ಶಿ.ಪೂರ್ಣಿಮಾ, ಪ್ರೌಢಶಾಲಾ ಮು. ಶಿ. ಬಾಲನಾಗಮ್ಮ.ಸ.ಶಿ. ಮಂಜುನಾಥ್ ಹಾಗು ಗ್ರಾ.ಪಂ. ಸದ್ಯರು &ಸಿಬ್ಬಂದಿ, ಸ್ಥಳಿಯರ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಯಿತು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.