ತಪ್ಪದ ಅಪಘಾತ - ಪ್ರಯಾಣಿಕರ ಅಸಮಾಧಾನ
ಬೆಂ-ಮೈ ದಶಪಥ ಹೆದ್ದಾರಿ ಮತ್ತೊಂದು ಟೋಲ್ ಸಂಗ್ರಹ -
ತಪ್ಪದ ಅಪಘಾತ - ಪ್ರಯಾಣಿಕರ ಅಸಮಾಧಾನ
ಸುದ್ದಿಮೂಲ, ವಾರ್ತೆ
ಮೈಸೂರು, ಜೂ. 28 : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಿರಂತರ ಅಪಘಾತದಿಂದ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಟೋಲ್ ಸಂಗ್ರಹಕ್ಕೆ ಹೆಚ್ಚಿನ ಆಸಕ್ತಿವಹಿಸಿರುವ ಹೆದ್ದಾರಿ ಅಧಿಕಾರಿಗಳು, ಅಪಘಾತ ತಪ್ಪಿಸಲು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ ಹೈವೇ ವಾಹನ ಸವಾರರಿಗೆ ಮತ್ತೊಂದು ಟೋಲ್ ಬಿಸಿ ತಟ್ಟಲಿದೆ .ಬರುವ ಜುಲೈ 1ರಿಂದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹ ಆರಂಭವಾಗಲಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಯಾವ್ಯಾವ ವಾಹನಗಳಿಗೆ ಎಷ್ಟೆಷ್ಟು ಶುಲ್ಕ ?.
ಏಕಮುಖ ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣ
ಕಾರು, ಜೀಪು, ವ್ಯಾನ್ ಗಳಿಗೆ 155 ರೂ.
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ – 250 ರೂ.
ಟ್ರಕ್, ಬಸ್ (ಎರಡು ಆಕ್ಸಲ್ ಗಳದ್ದು) -525 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ.
ಭಾರಿ ನಿರ್ಮಾಣ ಯಂತ್ರಗಳು , ಭೂ ಅಗೆತದ ಸಾಧನಗಳು , ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್ ಗಳದ್ದು) – 825 ರೂ.
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1005 ರೂ.
ಅದೇ ದಿನ ಹೋಗಿಬರುವುದಕ್ಕೆ
ಕಾರು, ಜೀಪು, ವ್ಯಾನು – 235 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ – 375 ರೂ.
ಟ್ರಕ್, ಬಸ್ (ಎರಡು ಆಕ್ಸಲ್ ಗಳದ್ದು) -790 ರೂ.
ಮೂರು ಆಕ್ಸಲ್ ವಾಣಿಜ್ಯ ವಾಹನ – 860 ರೂ.
ಭಾರಿ ನಿರ್ಮಾಣ ಯಂತ್ರಗಳು, ಭೂ ಅಗೆತದ ಸಾಧನಗಳು, ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 1240 ರೂ.
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1510 ರೂ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.