ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಶಾಂತಲಾ ದಾಮ್ಲೆ ನಾಮಪತ್ರ ಸಲ್ಲಿಕೆ
ಸುದ್ದಿಮೂಲ ವಾರ್ತೆ
ಬೆಮಗಳೂರು,ಏ.15: ರಾಜ್ಯದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಅವಧಿ ಶುರುವಾಗಿದ್ದು, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಅಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿರುವ ಶಾಂತಲಾ ದಾಮ್ಲೆ ಅವರು ಇಂದು ನಾಮಪತ್ರ ಸಲ್ಲಿಕೆಯನ್ನ ಮಾಡಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಗೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಆಪ್ ಅಭ್ಯರ್ಥಿ ಶಾಂತಲಾ ದಾಮ್ಲೆ ಸೇರಿದಂತೆ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಇರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಪೂಜೆಯನ್ನ ಸಲ್ಲಿಸಿದ್ದಾರೆ. ಬಳಿಕ ಎಲ್ಲಾರಿಗೂ ಸಿಹಿಯನ್ನ ಹಂಚಿ ದೇವಸ್ಥಾನದಿಂದ ನೂರಾರು ಕಾರ್ಯಕರ್ತರೆಲ್ಲಾ ಸೇರಿ ರ‍್ಯಾಲಿ ಹಾಗೂ ಕಾಲ್ನಡಿಗೆ ಮೂಲಕ ಮಹಾಲಕ್ಷ್ಮೀಪುರ 2ನೇ ಅಡ್ಡರಸ್ತೆ, ಪೈಪ್‌ಲೈನ್ ರೋಡ್‌ನಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರವನ್ನ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಶಾಂತಲಾ ದಾಮ್ಲೆ. ಇಂದು ನಾಮಪತ್ರವನ್ನ ಸಲ್ಲಿಸುತ್ತಿದ್ದೇನೆ. ಕಳೆದ ಎರೆಡುವರೆ ವರ್ಷದಿಂದ ನಾವು ಈ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೂ ಸತತ 5 ಬಾರೀ ಹೋಗಿ ಅವರ ಸಮಸ್ಯೆಗಳಿಗೆ ಆಲಿಸಿದ್ದೇವೆ. ಎಲ್ಲಾರ ಹೇಳುತ್ತಿರುವುದು ಒಂದು ನಿಮಗೆ ಈ ಬಾರೀ ನಮ್ಮ ಬೆಂಬಲವನ್ನ ನೀಡಿ ಅವಕಾಶವನ್ನ ನೀಡುತ್ತೇವೆ. ನಮಗೂ ಬದಲಾವಣೆ ಬೇಕಾಗಿದೆ. ಹಾಗಾಗಿ ಚುನಾವಣೆಯಲ್ಲಿ ಪೊರಕೆ ಗುರುತಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.