Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು : ಎಸಿಪಿ ನಿಕಿತಾ

ಸುದ್ದಿಮೂಲ ವಾರ್ತೆ ವಿಜಯನಗರ, ಜ.18:
ಚಾಲನಾ ವೃತ್ತಿಿ ತಾಳ್ಮೆೆ ಹಾಗೂ ಏಕಾಗ್ರತೆ ಬಯಸುವ ಕಾಯಕವಾಗಿದೆ. ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಂಭಾವ್ಯ ಅವಘಡಗಳನ್ನು ತಪ್ಪಿಿಸಬಹುದು ಎಂದು ವಿಜಯನಗರ ಸಂಚಾರ ವಿಭಾಗದ ಎಸಿಪಿ ನಿಕಿತಾ ಹೇಳಿದರು.
ರಸ್ತೆೆ ಸುರಕ್ಷತಾ ಸಪ್ತಾಾಹದ ಭಾಗವಾಗಿ ರಾಜ್ಯ ಸಾರಿಗೆ ಇಲಾಖೆ ಸಹಯೋಗದಲ್ಲಿ ಎಲ್ ವಿ ಟ್ರಾಾವೆಲ್ಸ್ ವತಿಯಿಂದ ಆಯೋಜಿಲಾಗಿದ್ದ ಆಯೋಜಿಸಲಾಗಿದ್ದ ಸಡಕ್ ಸುರಕ್ಷಾ ಜೀವನ ರಕ್ಷಾ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಸುರಕ್ಷಿತ ಪ್ರಯಾಣವನ್ನು ಖಾತ್ರಿಿ ಪಡಿಸುವ ನಿಟ್ಟಿಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಸಂಚಾರಿ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೊದಲು ಕುಡಿದು ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಚಾಲನಾ ಪರವಾನಗಿ ರದ್ದು ಮಾಡಲಾಗುತ್ತಿಿತ್ತು. ಬದಲಾದ ಸಂಚಾರಿ ಕಾಯ್ದೆೆಗಳನ್ವಯ ಸಿಗ್ನಲ್ ಜಂಪಿಂಗ್, ಚಾಲನೆಯ ವೇಳೆ ಮೊಬೈಲ್ ಬಳಕೆ, ಅತಿ ವೇಗ ಪ್ರಕರಣಗಳಲ್ಲೂ ಲೈಸ್ಸ್ ರದ್ದು ಮಾಡಲು ಅವಕಾಶವಿದೆ. ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಮಾಜದ ಸ್ವಾಾಸ್ಥ್ಯ ಕಾಪಾಡಬೇಕು. ಅಪಘಾತದಿಂದ ತಪ್ಪಿಿತಸ್ಥರೊಂದಿಗೆ ಅಮಾಯಕರ ಪ್ರಾಾಣಕ್ಕೂ ತೊಂದರೆಯಾಗಲಿದೆ ಎಂಬ ಅರಿವು ಎಲ್ಲರಿಗೆ ಇರಬೇಕು ಎಂದು ಕಿವಿಮಾತು ಹೇಳಿದರು.
ಆರ್ ಟಿ ಒ ಪ್ರವೀಣ್ ಮಾತನಾಡಿ, ಸರ್ಕಾರಿ ವರದಿಗಳ ಪ್ರಕಾರ 2023ನೇ ಸಾಲಿನಲ್ಲಿ 4,80,000 ಕ್ಕಿಿಂತಲೂ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿದೆ. 1,72,890 ಮಂದಿ ಪ್ರಾಾಣ ಕಳೆದುಕೊಂಡಿದ್ದಾರೆ. ಅವಸರ ಹಾಗೂ ಅಜಾಗರೂಕತೆ, ಸಂಚಾರಿ ನಿಯಮಗಳ ಉಲ್ಲಂಘನೆಯೇ ಅಪಘಾತಗಳಿಗೆ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ ವಿ ಟ್ರಾಾವೆಲ್ಸ್ ಮಾಲೀಕರಾದ ಪರಮಶಿವಯ್ಯ, ಚಾಲಕರ ಸುರಕ್ಷತೆಗಾಗಿ ಇಂತಹ ಕಾರ್ಯಕ್ರಮ ರೂಪಿಸಿರುವುದು ಶ್ಲಾಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವಘಡ ಸಂಭವಿಸಿದ ಕೂಡಲೆ ಚಿಕಿತ್ಸೆೆ ದೊರೆತರೆ ಪ್ರಾಾಣ ಉಳಿಯುವ ಸಂಭವನೀಯತೆ ಹೆಚ್ಚು. ಹೀಗಾಗಿ ಯಾವುದೇ ಆಲೋಚನೆ ಮಾಡದೆ ಅಪಘಾತಕ್ಕೆೆ ಒಳಗಾದವರನ್ನು ಆಸ್ಪತ್ರೆೆಗೆ ದಾಖಲಿಸಬೇಕು. ಅಂತಹ ವ್ಯಕ್ತಿಿಗಳು ಯಾವುದೇ ಕಾನೂನಿನ ತೊಡಕು ಉಂಟಾಗುವುದಿಲ್ಲ. ಬದಲಿಗೆ ಅಂತಹವರನ್ನು ಗುರುತಿಸಿ ಸರ್ಕಾರದ ವತಿಯಿಂದ ಪುರಸ್ಕರಿಸಲಾಗುವುದು ಎಂದು ಆರ್ ಟಿ ಒ ವಿವೇಕಾನಂದ ಮಾಹಿತಿ ನೀಡಿದರು.
ಆರ್ ಟಿ ಒ ಮಂಜುನಾಥ್, ಕಾಮಾಕ್ಷಿಪಾಳ್ಯ ಸಿಪಿಐ ಯೋಗೀಶ್, ಜ್ಞಾನಭಾರತಿ ಠಾಣೆ ಸಿಪಿಐ(ಸಂ) ಪ್ರೀತಂ, ಅನ್ನಪೂರ್ಣೇಶ್ವರಿ ನಗರ ಠಾಣೆ ಸಿಪಿಐ ಲತೇಶ್ ಕುಮಾರ್, ಎಲ್ ವಿ ಟ್ರಾಾವೆಲ್ಸ್ ನಿರ್ದೇಶಕರಾದ ನಾರಾಯಣಸ್ವಾಾಮಿ, ಸಿಇಒ ಸುದರ್ಶನ್, ವಿಷ್ಣು, ಮುತ್ತುರಾಜ್ ಹಾಗೂ ಎಲ್ ವಿ ಟ್ರಾಾವೆಲ್ಸ್ ನ ಸುಮಾರು 800ಕ್ಕೂ ಹೆಚ್ಚು ಚಾಲಕರು ಹಾಗೂ ಸಿಬ್ಬಂದಿ ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ