Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅಂತರ್ಜಲ ಬಳಕೆಯ ನಿರ್ವಹಣೆ ಸಮರ್ಪಕವಾಗಿರಲಿ : ಜಿ.ಕೃಷ್ಣಮೂರ್ತಿ

 ಸುದ್ದಿಮೂಲ ವಾರ್ತೆ ರಾಯಚೂರು, ಡಿ.11:
ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಅಂತರ್ಜಲವು ಒಂದು ವಿಶ್ವಾಾಸಾರ್ಹ ಮೂಲವಾಗಿದೆ. ಭಾರತದಲ್ಲಿ ಅಂತರ್ಜಲವು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿದ್ದು, ಅದರ ಸಮರ್ಥ ಬಳಕೆ ಮತ್ತು ನಿರ್ವಹಣೆಯ ಬಗ್ಗೆೆ ಜಾಗರೂಕತೆ ವಹಿಸಬೇಕು ಎಂದು ಬೆಂಗಳೂರಿನ ಸಿಜಿಡ್ಲೂಬಿ ಎಸ್.ಡ್ಲೂ.ಆರ್‌ನ ಪ್ರಾಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಅವರು ಹೇಳಿದರು.
ಭಾರತ ಸರ್ಕಾರದ ಜಲಶಕ್ತಿಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿಿ ಮತ್ತು ಗಂಗಾ ಪುನರುಜ್ಜೀವನ ಕೇಂದ್ರ ಬೆಂಗಳೂರಿನ ನೈಋತ್ಯ ಪ್ರದೇಶದ ಅಂತರ್ಜಲ ಮಂಡಳಿ ವತಿಯಿಂದ ಡಿಸೆಂಬರ್ 10ರ ಬುಧವಾರ ನಗರದ ಕೃಷಿ ಎಂಜಿನಿಯರಿಅಗ್ ಕಾಲೇಜಿನ ಸಿಲ್ವರ್ ಜುಬಿಲಿ ಸೆಮಿರ್ನಾ ಹಾಲ್‌ನಲ್ಲಿ ನಡೆದ ಜಲಚರ ನಕ್ಷೆ, ಅಂತರ್ಜಲ-ಸಂಬಧಿತ ಸಮಸ್ಯೆೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತ 3ನೇ ಶ್ರೇೇಣಿ ತರಬೇತಿ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಸಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಅಂತರ್ಜಲದ ಬಳಕೆಯ ಪ್ರಮಾಣ ಮಿತಿ ಮೀರುತ್ತಿಿದ್ದು, ಇದರಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಅಂತರ್ಜಲದ ಲಭ್ಯತೆಯು ಕಡಿಮೆಯಾಗುತ್ತಿಿದೆ. ಅಂತರ್ಜಲವು ನೆಲದೊಳಗೆ ಭೂಮಿಯ ಮೇಲ್ಪದರಗಳಲ್ಲಿ ಶಿಥಿಲಗೊಂಡ ಶಿಲಾರಚನೆಗಳಲ್ಲಿ ಹಾಗೂ ಆಳಭಾಗಗಳಲ್ಲಿ ಬಿರುಕು ಹಾಗೂ ಅಪಾಯದ ಪರಿಸ್ಥಿಿತಿಯನ್ನು ತಂದೊಡ್ಡಿಿದೆ. ಇದರೊಂದಿಗೆ ಹಲವಾರು ಸಮಸ್ಯೆೆಗಳೂ ನಮಗೆ ಎದುರಾಗಿವೆ ಎಂದರು.
ಈ ವೇಳೆ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಾಲಯದ ಕುಲಪತಿ ಡಾ.ಎಂ.ಹನುಮಂಪ್ಪ ಅವರು ಮಾತನಾಡಿ, ಅಂತರ್ಜಲ ಕುಸಿತದಿಂದ ಎದುರಾಗಿರುವ ಸಮಸ್ಯೆೆ ನೀಗಿಸಿ ನೀರಿನ ಗುಣಮಟ್ಟ, ನಿರ್ವಹಣೆ ಹಾಗೂ ಸದ್ಬಳಕೆ ಬಗ್ಗೆೆ ಕೃಷಿ ಎಂಜಿನಿಯರಿಂಗ್ ವಿದ್ಯಾಾರ್ಥಿಗಳು ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ಮಾಡಿದರು.
ಮಳೆನೀರು ಕೊಯ್ಲು, ಅಂತರ್ಜಲ ಸಂರಕ್ಷಣೆ, ಕೃತಕ ಮರುಪೂರಣ ಮತ್ತು ಜವಾ ಬ್ದಾಾರಿಯುತ ನೀರಿನ ಬಳಕೆಯ ಬಗ್ಗೆೆ ಜಲ ವೃತ್ತಿಿಪರರು, ವಿದ್ಯಾಾರ್ಥಿಗಳು, ಸ್ಥಳೀಯ ಎನ್‌ಜಿಗಳು, ರೈತರು, ಪಂಚಾಯತ್ ಕಾರ್ಯ ಕರ್ತರು ಮತ್ತು ಯುವಕರಿಗೆ 3ನೇ ಶ್ರೇೇಣಿ ಕಾರ್ಯಕ್ರಮಗಳು ಮತ್ತು ರೈತರು ಮತ್ತು ಗ್ರಾಾಮೀಣ ಸಮುದಾಯಗಳಿಗೆ ಸಾರ್ವಜನಿಕ ಸಂವಹನ ಕಾರ್ಯಕ್ರಮಗಳು (ಪಿಐಪಿ) ಮತ್ತು ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳು (ಎಂಎಪಿ) ನಂತಹ ವ್ಯಾಾಪಕವಾದ ತಳಮಟ್ಟದ ಚಟುವಟಿಕೆಗಳ ಮೂಲಕ, ಸಾವಿರಾರು ಪಾಲುದಾ ರರಿಗೆ ಅರಿವು ಮೂಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜ್ ಆ್ ಅಗ್ರಿಿಕಲ್ಚರಲ್ ಇಂಜಿನಿಯರಿಂಗ್ ಡೀನ್ ಡಾ.ಎಂ.ಎಸ್. ಅಯ್ಯನಗೌಡರು, ವಿಜ್ಞಾನಿ ಡಾ.ಜೆ.ದವಿತುರಾಜ್, ಡಾ.ಎಂ.ಗೋಪಿನಾಥ, ಎನ್.ನರಸಿಂಹಲು, ಶರಣಗೌಡ ಹಿರೇಗೌಡ ಸೇರಿದಂತೆ ಇನ್ನಿಿತರರು ಮತ್ತು ವಿದ್ಯಾಾರ್ಥಿಗಳು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ