Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳೆ ಹಾನಿ ಪರಿಶೀಲನೆ ನಡೆಸಿದ ಕೃಷಿ ಸಚಿವ

ಸುದ್ದಿಮೂಲ ವಾರ್ತೆ ಕಲಬುರಗಿ, ಸೆ.30:
ಕೃಷಿ ಸಚಿವ ಎನ್.ಚೆಲುವರಾಯಸ್ವಾಾಮಿ ಅವರು ಕಲಬುರಗಿ ತಾಲೂಕಿನ ಸಾವಳಗಿ ಕ್ರಾಾಸ್ ಹಾಗೂ ಆಳಂದ ತಾಲೂಕಿನ ಕಡಗಂಚಿಯಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆ ಹಾನಿ ಪ್ರದೇಶ ವೀಕ್ಷಿಸಿದರು.
ಸಾವಳಗಿ ಕ್ರಾಾಸ್ ಬಳಿ ನಾಲ್ಕು ಎಕರೆಯಲ್ಲಿ ಸೋಮಶೇಖರ ಹಣಮಂತರಾವ ಅವರು ಬೆಳೆದ ತೊಗರಿ ಬೆಳೆ ಹಾನಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎನ್.ಚೆಲುವರಾಯಸ್ವಾಾಮಿ ಅವರು, ಕಳೆದ ಬಾರಿ ಸಹ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಿಯಿಂದ ಬೆಳೆ ಹಾನಿಯಾದ ಕಾರಣಕ್ಕೆೆ ಸುಮಾರು 650 ಕೋಟಿ ರೂ. ಪರಿಹಾರ ಘೋಷಿಸಲಾಗಿತ್ತು. ಈ ವರ್ಷ ಸಹ ಮತ್ತೆೆ ಮಳೆಯಿಂದ ಬೆಳೆ ಹಾನಿಯಾಗಿದ್ದು, ಬೆಳೆ ವಿಮೆ ಪರಿಹಾರದ ಜೊತೆಗೆ ಸರ್ಕಾರದಿಂದ ಪರಿಹಾರ ಬಿಡುಗಡೆ ಕುರಿತು ಸಿ.ಎಂ.ಘೋಷಣೆ ಮಾಡಲಿದ್ದಾರೆ ಎಂದರು.
ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಇದಲ್ಲದೆ ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಯಲ್ಲೂ ಸಹ ಬೆಳೆ ಹಾನಿಯಾಗಿದ್ದು, ಮುಖ್ಯಮಂತ್ರಿಿ ಇಂದು ವೈಮಾನಿಕ ಸಮೀಕ್ಷೆ ನಡೆಸುತ್ತಿಿದ್ದಾರೆ. ಬಳಿಕ ತೀವ್ರ ಹಾನಿಗೊಳಗಾದ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಕುರಿತು ಸಭೆ ನಡೆಸಿ ಸೂಕ್ತ ಘೋಷಣೆ ಜೊತೆಗೆ ಎನ್.ಡಿ.ಆರ್.ಎ್ ನಲ್ಲಿಯೂ ಪರಿಹಾರಕ್ಕೆೆ ಕೇಂದ್ರ ಸರ್ಕಾರಕ್ಕೆೆ ಒತ್ತಾಾಯ ಮಾಡಲಾಗುತ್ತದೆ ಎಂದು ಸಚಿವ ಎನ್. ಚೆಲುವರಾಯಸ್ವಾಾಮಿ ತಿಳಿಸಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಾಮಪ್ಪ ಧಂಗಾಪೂರ ಅವರು ರೈತರ ವಿವಿಧ ಬೇಡಿಕೆಯ ಕುರಿತು ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ಈಗಾಗಲೆ ಪಂಚ ಗ್ಯಾಾರಂಟಿ ಯೋಜನೆಗಳನ್ನು ಯಶಸ್ವಿಿಯಾಗಿ ಜಾರಿಗೊಳಿಸಿದ್ದು, ರೈತರ ಕಲ್ಯಾಾಣಕ್ಕಾಾಗಿ ಬೆಳೆ ಸಾಲ ಮನ್ನಾಾ ಮಾಡುವ ಆರನೇ ಗ್ಯಾಾರಂಟಿ ಘೋಷಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಸಚಿವರು ಕಡಗಂಚಿಯಲ್ಲಿ ರೈತ ಶಿವರಾಜ ಕುಡಕಿ ನಾಲ್ಕು ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿ ಹೊಲದಲ್ಲಿ ನೀರು ನಿಂತಿರುವುದನ್ನು ವೀಕ್ಷಿಸಿದರು.
ಸರಡಗಿ (ಬಿ)ಯಲ್ಲಿಯೂ ವೀಕ್ಷಣೆ:
ಸರಡಗಿ ಬ್ಯಾಾರೇಜ್ ಹಿನ್ನೀರಿನಿಂದ ತೀವ್ರ ಹೊಡೆತಕ್ಕೆೆ ಒಳಗಾದ ಸರಡಗಿ ಬಿ. ಗ್ರಾಾಮದ ಸರ್ವೇ ನಂ.139/7 ಮತ್ತು 139/9 ರಲ್ಲಿ ಪ್ರಜ್ವಲ ರವೀಂದ್ರ ಅವರ 3.26 ಎಕರೆ, ಸರ್ವೆ ನಂ.139/6 ರಲ್ಲಿ ಅಬ್ಬಾಾಸಲಿ ಲಾಲ್ ಅಹ್ಮದ ಅವರು ನಾಲ್ಕು ಎಕರೆ ಹಾಗೂ ಸರ್ವೆ ನಂ. 139/5 ರಲ್ಲಿ ಯೂನುಸ್ ಹಸನ್ ಸಾಬ್ ಅವರು 2 ಎಕರೆಯಲ್ಲಿ ಬೆಳೆದ ತೊಗರಿ, ಸರ್ವೆ ನಂ.140/5 ಮತ್ತು 140/2 ರಲ್ಲಿ ರೈತ ಮಹಿಳೆ ಮಹಾದೇವಿ ಸಾಯಬಣ್ಣ ಅವರಿಗೆ ಸೇರಿದ 3.37 ಎಕರೆಯಲ್ಲಿ ಬೆಳೆದ ಹತ್ತಿಿ ಬೆಳೆ ಹಾನಿಯನ್ನು ಸಚಿವ ಎನ್.ಚೆಲುವರಾಯಸ್ವಾಾಮಿ ಅವರು ವೀಕ್ಷಿಸಿದರು.
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕೃಷಿ ಉಪನಿರ್ದೇಶಕ ಸೋಮಶೇಖರ ಬಿರಾದರ, ಆಳಮದ ತಹಶೀಲ್ದಾಾರ ಅಣ್ಣಾಾರಾಯ ಪಾಟಿಲ, ಕೃಷಿ ಸಹಾಯಕ ನಿರ್ದೇಶಕ ಡಾ.ಅರುಣ ಮೂಲಿಮನಿ ಮೊದಲಾದವರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ