Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಿಪಟೂರು 

ಜು,15: ರಾಜ್ಯ ಸರ್ಕಾರವು ಬೆಂಬಲ ಬೆಲೆಯೂ ಹೆಚ್ಚಿಸ ಬೇಕು ಹಾಗೂ ಕೇಂದ್ರ ಸರ್ಕಾರದ ಖರೀದಿ ಅವಧಿಯನ್ನು ವಿಸ್ತರಿಸುವ ಕುರಿತು

ತುಮಕೂರು ಜಿಲ್ಲೆ ಕಲ್ಪತರು ನಾಡು ಇಲ್ಲಿನ ರೈತ ಜೀವನಾಡಿ ಕೊಬ್ಬರಿ ಶೇ 80 ರಷ್ಟು ರೈತರು ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ.ತೆಂಗು ಮತ್ತು ಕೊಬ್ಬರಿ ಯ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ರೈತರು ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಅಲ್ಪ ಸ್ವಲ್ಪ ಜಮೀನುನಿಂದ ಬರುವ ತೆಂಗು ಹಾಗೂ ಕೊಬ್ಬರಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಈಗ ತೆಂಗಿನ ಮರಗಳಿಗೆ ರೋಗ ಹೆಚ್ಚಾಗಿ ಕೊಬ್ಬರಿ ಬೆಲೆ 9000 ಸಾವಿರಕ್ಕೆ ಕ್ವಿಂಟಾಲ್ ಆಗಿದ್ದು ಕೊಬ್ಬರಿ ಸುಲಿಯುವ ಹಾಗೂ ಸಾಗಾಣಿಕೆ ವೆಚ್ಚ ಜಾಸ್ತಿ ಯಾಗಿದ್ದು ದರ ಕುಸಿತದಿಂದ ಕಂಗಾಲಾಗಿದ್ದಾನೆ‌. ಈಗಾಗಲೇ ರೈತರು ಬ್ಯಾಂಕ್ ಗಳಲ್ಲಿ ತಮ್ಮ ಆಸ್ತಿಯನ್ನು ಆಧಾರ್ ಮಾಡಿ ಸಾಲ ಪಡೆದಿದ್ದಾರೆ. ಈಗ ರೈತರಿಗೆ ಬ್ಯಾಂಕ ನವರು ಸಾಲದ ನೋಟೀಸ್ ನೀಡಿರುವುದರಿಂದ ರೈತ ನೋಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾನೆ. ಕೊಬ್ಬರಿ ನಂಬಿ ಕೊಂಡು ಜೀವನ ನಡೆಸುತ್ತಿದ್ದಾನೆ.

ಕೊಬ್ಬರಿ ಧಾರಣೆ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಪೆಡ್ ಕ್ವಿಂಟಾಲ್ 11750 ರೂ ಎಂಎಸ್ ಪಿ ನಿಗದಿ ಪಡಿಸಿದೆ. ಆದರೆ ರಾಜ್ಯ ಸರ್ಕಾರವು 1250 ಘೋಷಿಸಿದೆ ಆದರೆ ಕಡಿಮೆ ಆಗಿದೆ ರಾಜ್ಯ ಸರ್ಕಾರವು 5000 ರೂ ಬೆಂಬಲ ಬೆಲೆ ಘೋಷಣೆ ಮಾಡ ಬೇಕು ಹಾಗೂ ಕೇಂದ್ರ ಸರ್ಕಾರವು ಎಂಎಸಪಿಯಡಿ ಕೊಬ್ಬರಿ ಖರೀದಿಸುವ ಪ್ರಮಾಣ ಹೆಚ್ಚಳ ಮಾಡುವ ಜತೆಗೆ ಖರೀದಿ ಅವಧಿಯನ್ನು ವಿಸ್ತರಿಸ ಬೇಕು ಎಬಿವಿಪಿ ಆಗ್ರಹಿಸುತ್ತದೆ

ಮಾನ್ಯ ಮುಖ್ಯಮಂತ್ರಿಗಳಿಗೆ ಉಪ ವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

ಈ ಹೋರಾಟದ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಜಿಲ್ಲಾ ಸಂಚಾಲಕ ಗಣೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಗುರುಪ್ರಸಾದ್, ತಾಲೂಕ ಸಂಚಾಲಕ ಭರತಗೌಡ, ನಗರ ಕಾರ್ಯದರ್ಶಿ ಸುಹಾಸ್ ಕಾರ್ಯಕರ್ತರು ದೀಪಕ, ತೇಜಸ್, ಉದಯ ,ವಿಕಾಸ, ಸಿದ್ದೇಶ್ ಇತರರು ಉಪಸ್ಥಿತರಿದ್ದರು
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ