Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲಾವಿದರ ಅಂತರಾಳದಲ್ಲಿ ಚಿರಸ್ಮರಣೀಯರಾಗಿ ಉಳಿದ ಅಮರೇಗೌಡ ಹೊಗರನಾಳ

ಮನುಷ್ಯರೆಲ್ಲರೂ ಒಂದೇ ಆದರೂ ವ್ಯಕ್ತಿಿತ್ವ ಬೇರೆ ಬೇರೆಯಾಗಿರುತ್ತದೆ. ವ್ಯಕ್ತಿಿತ್ವದ ಆಧಾರದ ಮೇಲೆ ಎಲ್ಲ ಜನರನ್ನು ಎರಡು ಗುಂಪುಗಳಾಗಿ ವರ್ಗೀಕರಿಸಬಹುದು. ಒಂದು ಸಾಮಾನ್ಯರು ಮತ್ತೊೊಂದು ಅಸಾಮಾನ್ಯರು. ಸಾಮಾನ್ಯರೆಂದರೆ ಹುಟ್ಟುತ್ತಾಾರೆ, ಬೆಳೆಯುತ್ತಾಾರೆ, ದುಡಿಯುತ್ತಾಾರೆ, ಸಾಯುತ್ತಾಾರೆ. ಅಸಾಮಾನ್ಯರು ಎಲ್ಲರಿಗೂ ಸಾಮಾನ್ಯವಲ್ಲದ, ಸಾಧ್ಯವಲ್ಲದ, ಅಸಾಧ್ಯ ಸಾಧನೆಗಳನ್ನು ಮಾಡುತ್ತಾಾರೆ. ಬಾಳುತ್ತಾಾರೆ, ಬೆಳಗುತ್ತಾಾರೆ. ಅವರಲ್ಲಿ ಏನೋ ಒಂದು ಅತಿಶಯ ಪ್ರತಿಭೆ ಇರುತ್ತದೆ. ಅಂತಹ ಅವಿರಳ ವ್ಯಕ್ತಿಿತ್ವದ ವಿಶಿಷ್ಟ ಪ್ರತಿಭೆ ಅಮರೇಗೌಡ ಮಾಲಿಪಾಟೀಲ್ ಹೊಗರನಾಳ.
ಅಮರೇಗೌಡರು ಪುರಾಣ ಪ್ರವಚನ ಚಿಂತನ ಮಂಥನ ಪಟುವಾಗಿ ಹೊರ ಹೊಮ್ಮಿಿದ ಅದ್ಭುತ ಪ್ರತಿಭೆಯಾಗಿದ್ದರು. ರಾಯಚೂರು, ಕೊಪ್ಪಳ, ಗಂಗಾವತಿ, ಬಾಗಲಕೋಟೆ, ಯಾದಗಿರಿ ಜಿಲ್ಲೆೆಗಳಲ್ಲಿ ಮಾತ್ರವಲ್ಲ ಆಂಧ್ರದ ಹೈದರಾಬಾದ್ ಮತ್ತು ಕೆಲವು ಗ್ರಾಾಮಗಳವರೆಗೂ ಹೋಗಿ ಕಾರ್ಯಕ್ರಮಗಳನ್ನು ನೀಡುತ್ತಿಿದ್ದರು. ಅಮರೇಗೌಡರು ತತ್ವಪದ, ದಾಸವಾಣಿ, ವಚನ ಗಾಯನ ಮತ್ತು ರಂಗಗೀತೆ ಗಳನ್ನು ವಿಶೇಷವಾಗಿ ಹಾಡುತ್ತಿಿದ್ದರು. ಅನೇಕ ಸಾಮಾಜಿಕ ನಾಟಕಗಳಿಗೂ ಮತ್ತು ಐತಿಹಾಸಿಕ, ಪೌರಾಣಿಕ ನಾಟಕಗಳಿಗೂ ರಂಗಸಂಗೀತ ನೀಡಿದ ಶ್ರೇಯಸ್ಸು ಅಮರೇಗೌಡರದ್ದಾಾಗಿದೆ. ನಾಟಕದಲ್ಲೂ ಕೂಡ ಅಭಿನಯಿಸುವ ಚತುರರಾಗಿದ್ದರು. ಅಧುನಿಕ, ಸಾಮಾಜಿಕ ನಾಟಕಗಳಲ್ಲಿ ಮತ್ತು ಕಂದಗಲ್ ಹನುಮಂತರಾಯರ ರಕ್ತರಾತ್ರಿಿಯಂತಹ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅವರ ರಕ್ತರಾತ್ರಿಿ ನಾಟಕದಲ್ಲಿನ ಕೃಷ್ಣನ ಪಾತ್ರ ಅತ್ಯಂತ ಪ್ರಸಿದ್ಧಿಿ ಪಡೆದಿತ್ತು. ಅಂತೆಯೇ ಅಮರೇಗೌಡರು ರಂಗಗೀತೆಗಳನ್ನು ಹಾಡಿದರೆಂದರೆ ಕೇಳುಗರಿಗೆ ರೋಮಾಂಚನವಾಗುತ್ತಿಿತ್ತು. ಇಂತಹ ಪ್ರತಿಭಾವಂತ ಸಂಗೀತ ಕಲಾವಿದರಾಗಿದ್ದ ಅಮರೇಗೌಡರಿಗೆ ಸಹಜವಾಗಿಯೇ ಅನೇಕ ಸಂಘ-ಸಂಸ್ಥೆೆಗಳಿಂದ ಪುರಸ್ಕಾಾರ ಪ್ರಶಸ್ತಿಿ, ಸನ್ಮಾಾನಗಳು, ಅಭಿನಂದನಾ ಪತ್ರಗಳು ದೊರೆತಿವೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿಿ ಪ್ರಾಾಧಿಕಾರ ಬೆಂಗಳೂರು ಅವರ ಸುರಸಿಂಗಾರ ಎಂಬ ಅಭಿನಂದನ ಪತ್ರ, ಶ್ರೀ ಕೃಷ್ಣ ಭಜನಾ ಮಂಡಳಿ ಉಪ್ಪಾಾರವಾಡಿ ರಾಯಚೂರು ಅವರ ಪ್ರಶಸ್ತಿಿ ಪತ್ರ, ರಾಯಚೂರಿನ ರಂಗಸಿರಿ ಸಾಂಸ್ಕೃತಿಕ ಕಲಾಬಳಗದ ರಂಗಸಿರಿಪ್ರಶಸ್ತಿಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನಕ್ಕೂ ಭಾಜನರಾಗಿದ್ದರು. ಹೀಗೆ ಹಲವಾರು ಪ್ರಶಸ್ತಿಿಗಳು ಅವರಿಗೆ ಅಭಿಮಾನಿಗಳಿಂದ ದೊರೆತಿವೆ. ಅಮರೇಗೌಡರು ಕಿತ್ತೂರು ಉತ್ಸವ, ಹಂಪಿ ಉತ್ಸವ, ರಾಯಚೂರು ಸಾಹಿತ್ಯ ಸಮ್ಮೇಳನ, ಬೀದರ್ ಸಾಹಿತ್ಯ ಸಮ್ಮೇಳನ ಹೀಗೆ ಹಲವಾರು ಪ್ರಮುಖ ವೇದಿಕೆಗಳಲ್ಲಿ ತಮ್ಮ ಅತ್ಯದ್ಭುತ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನಮನ ಸೂರೆಗೊಂಡಿದ್ದಾಾರೆ. ನಾಡಿನ ಅನೇಕ ಗ್ರಾಾಮ, ಪಟ್ಟಣ, ನಗರಗಳ, ನೂರಾರು ದೇವಸ್ಥಾಾನ ಮಠಮಾನ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾಾರೆ. ಸಿಂಧನೂರಿನಂತಹ ತಾಲೂಕಿನ ಕೊನೆಯ ಗ್ರಾಾಮದ ವ್ಯಕ್ತಿಿ ಇಷ್ಟೊೊಂದು ಸಾಧನೆ ಮಾಡಿರುವುದು ಸಣ್ಣ ಮಾತೇನಲ್ಲ. ಅವರ ವ್ಯಕ್ತಿಿತ್ವ, ನಡೆ-ನುಡಿ, ಬೆಳೆದು ಬಾಳುವ ಕಲಾವಿದರಿಗೆ ಮಾದರಿಯಾಗಿದೆ. ಇಂತಹ ಪ್ರತಿಭಾವಂತ ಅಮರೇಗೌಡರು ಇಂದು ನಮ್ಮ ನಡುವೆ ಇಲ್ಲ. ಆದರೆ ಕಲಾವಿದರ ಅಂತರಂಗದಲ್ಲಿ ಅವರು ಚಿರಸ್ಮರಣೀಯರಾಗಿದ್ದಾಾರೆ. ಶ್ರೀಯುತರ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ಅವರನ್ನು ನೆನೆಯುವುದೇ ಒಂದು ಭಾಗ್ಯ
- ಶಂಕರಯ್ಯಸ್ವಾಾಮಿ
ಕನ್ನಡ ಪಂಡಿತರು, ಬಾಲಕಿಯರ ಸರ್ಕಾರಿ ಪ್ರೌೌಢ ಶಾಲೆ ಕವಿತಾಳ
ಮೊ.ನಂ : 9902659285
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ